AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಿಂದ ಪಾಕಿಸ್ತಾನಕ್ಕೆ ಗಡಿದಾಟದೆಯೇ ಸಾಗಣೆಯಾಗಿವೆ 8 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು; ವ್ಯವಸ್ಥೆಯ ಲೋಪ ಬಳಸಿದ ವ್ಯಾಪಾರಿಗಳು

How India goods reach Pakistan despite restrictions?: ಭಾರತವು ಪಾಕಿಸ್ತಾನದ ಮೇಲೆ ವ್ಯಾಪಾರ ನಿರ್ಬಂಧ ಹೇರಿದರೂ ಕೆಲ ಸರಕುಗಳು ಅನಧಿಕೃತವಾಗಿ ಸಾಗಣೆ ಆಗುತ್ತಿವೆ. 2019ರಿಂದ ಎಂಟು ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತದ ಭಾರತೀಯ ಸರಕುಗಳು ಪಾಕಿಸ್ತಾನಕ್ಕೆ ಹೋಗಿವೆಯಂತೆ. ಟ್ರಾನ್ಸ್​​ಶಿಪ್​​ಮೆಂಟ್ ಮೂಲಕ ಬೇರೆ ದೇಶಕ್ಕೆ ಸರಕುಗಳನ್ನು ಸಾಗಿಸಿ, ಅಲ್ಲಿಂದ ಪಾಕಿಸ್ತಾನಕ್ಕೆ ಮರುರಫ್ತು ಮಾಡಲಾಗುತ್ತಿದೆ.

ಭಾರತದಿಂದ ಪಾಕಿಸ್ತಾನಕ್ಕೆ ಗಡಿದಾಟದೆಯೇ ಸಾಗಣೆಯಾಗಿವೆ 8 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು; ವ್ಯವಸ್ಥೆಯ ಲೋಪ ಬಳಸಿದ ವ್ಯಾಪಾರಿಗಳು
ಸರಕು ಸಾಗಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2025 | 1:44 PM

Share

ನವದೆಹಲಿ, ಏಪ್ರಿಲ್ 28: ಪಹಲ್ಗಾಂನಲ್ಲಿ ಉಗ್ರ ದಾಳಿ (Pahalgam terror attack) ಬಳಿಕ ಭಾರತವು ಪಾಕಿಸ್ತಾನದ ಮೇಲೆ ನಿರ್ದಾಕ್ಷಿಣ್ಯ ನೀತಿ ಅನುಸರಿಸುತ್ತಿದೆ. ಆರು ವರ್ಷದ ಹಿಂದೆ 2019ರ ಫೆಬ್ರುವರಿ 14ರಂದು ಪುಲ್ವಾಮದಲ್ಲಿ ಪಾಕ್ ಪ್ರಚೋದಿತ ಉಗ್ರರಿಂದ ದಾಳಿಯಾಗಿತ್ತು. 40 ಸಿಆರ್​​ಪಿಎಫ್ ಜವಾನರು ಬಲಿಯಾಗಿದ್ದರು. ಆ ಘಟನೆ ಬಳಿಕ ಭಾರತ ಬಾಲಾಕೋಟ್ ಏರ್​ಸ್ಟ್ರೈಕ್ ಮಾಡಿತು. ಹಾಗೆಯೇ, ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧಕ್ಕೆ ನಿರ್ಬಂಧ ಹೇರಿತು. ಪಾಕಿಸ್ತಾನದ ಸರಕುಗಳಿಗೆ ಆಮದು ಸುಂಕವನ್ನು ಶೇ. 200ಕ್ಕೆ ಏರಿಸಿತು. ವ್ಯಾಪಾರ ವಹಿವಾಟಿನ ಆದ್ಯತೆಯ ಸೂಚಕವಾದ ಮೋಸ್ಟ್ ಫೇವರ್ಡ್ ನೇಶನ್ (ಎಂಎಫ್​​ಎನ್) ಸ್ಥಾನವನ್ನು ತೆಗೆಯಿತು. ಇಷ್ಟಾದರೂ ಕೂಡ ಪಾಕಿಸ್ತಾನ ಹಿಂಬಾಗಿಲ ಮೂಲಕ ಭಾರತದಿಂದ ಸರಕುಗಳನ್ನು ಪಡೆಯುವುದು ಮುಂದುವರಿದೇ ಇದೆ.

ಒಂದು ವರದಿ ಪ್ರಕಾರ, ಪುಲ್ವಾಮ ಘಟನೆ ಬಳಿಕ ಭಾರತದಿಂದ 8.5 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು ಪಾಕಿಸ್ತಾನಕ್ಕೆ ಸಾಗಣೆ ಆಗಿವೆ. 2024ರ ಏಪ್ರಿಲ್​​ನಿಂದ 2025ರ ಜನವರಿವರೆಗೆ 447.65 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳು ಪಾಕಿಸ್ತಾನಕ್ಕೆ ಹೋಗಿವೆ. ಇದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ವ್ಯಾಪಾರ ನಿರ್ಬಂಧಗಳಿದ್ದರೂ ಆಗಿರುವ ಒಂದು ವಹಿವಾಟು.

ಇದನ್ನೂ ಓದಿ: ವಾಯುಪ್ರದೇಶ ನಿರ್ಬಂಧ: ಪಾಕಿಸ್ತಾನಕ್ಕೆ ಆದಾಯ ನಷ್ಟ; ಭಾರತೀಯರಿಗೆ ವಿಮಾನ ಪ್ರಯಾಣ ದರ ಏರಿಕೆ

ಇದನ್ನೂ ಓದಿ
Image
ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಿ ಪಾಕ್ ಯಡವಟ್ಟು?
Image
ಪಹಲ್ಗಾಮ್ ದಾಳಿಗೆ ಪುರಾವೆ ಕೇಳಿದ ಶಾಹಿದ್ ಅಫ್ರಿದಿ
Image
ದಕ್ಷಿಣ ಏಷ್ಯಾದ ನಂ. 1 ಆಗಿದ್ದ ಪಾಕಿಸ್ತಾನ ಭಿಕಾರಿ ಆದ ಕಥೆ
Image
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?

ಸಪ್ಲೈ ಚೈನ್ ಕತ್ತರಿಸಲು ಆಗಲ್ಲವಾ?

ಜಾಗತಿಕ ವ್ಯಾಪಾರ ಜಗತ್ತು ಉತ್ತಮ ಕ್ಷಮತೆಯ ವ್ಯವಸ್ಥೆ ಹೊಂದಿರುತ್ತದೆ. ಒಂದು ಕಡೆ ಬೇಡಿಕೆ ಹೆಚ್ಚಿದ್ದರೆ, ಅದಕ್ಕೆ ಪೂರೈಕೆ ಮಾಡಲು ವ್ಯವಸ್ಥೆಯು ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಇದು ಸಹಜ ಪ್ರಕ್ರಿಯೆ. ಜಾಗತಿಕವಾಗಿ ಸರಬರಾಜು ಸರಪಳಿಯನ್ನು ಪೂರ್ಣವಾಗಿ ಅಳಿಸಲು ಆಗದಿಲ್ಲ. ಸಪ್ಲೈ ಚೈನ್ ಅನ್ನು ಬಾಗಿಸಬಹುದೇ ಹೊರತು ಅದನ್ನು ಕತ್ತರಿಸಲು ಆಗುವುದಿಲ್ಲ.

ಟ್ರಾನ್ಸ್​​ಶಿಪ್​​ಮೆಂಟ್ ಸೌಲಭ್ಯ ಬಳಸಿ ಸರಕುಗಳ ಸಾಗಣೆ

ಒಂದು ದೇಶದ ಸರಕುಗಳ ಮೇಲೆ ನಿರ್ಬಂಧ ಇದ್ದಾಗ ವ್ಯಾಪಾರಿಗಳು ಟ್ರಾನ್ಸ್​​ಶಿಪ್​​ಮೆಂಟ್ ಸೌಲಭ್ಯ ಬಳಸಿಕೊಳ್ಳುತ್ತಾರೆ. ಟ್ರಾನ್ಸ್​​ಶಿಪ್ಮೆಂಟ್ ಎಂದರೆ ಒಂದು ದೇಶದ ಸರಕುಗಳು ಇನ್ನೊಂದು ದೇಶಕ್ಕೆ ಹಡಗು ಮೂಲಕ ಸಾಗಣೆ ಆಗುತ್ತವೆ. ಬಳಿಕ ಆ ಸರಕುಗಳು ಅಲ್ಲಿಂದ ಬೇರೆ ಹಡಗು ಮೂಲಕ ಮೂರನೇ ದೇಶಕ್ಕೆ ಸಾಗಣೆ ಆಗುತ್ತವೆ. ಬಳಿಕ, ಆ ಮೂರನೇ ದೇಶದಿಂದ ಆ ಸರಕುಗಳು ನಿಗದಿತ ನಾಲ್ಕನೆ ದೇಶಕ್ಕೆ ಹೋಗುತ್ತವೆ. ಈ ಮೂಲಕ ಮೊದಲ ದೇಶದಿಂದ ನಾಲ್ಕನೇ ದೇಶಕ್ಕೆ ಪರೋಕ್ಷವಾಗಿ ಸರಕುಗಳ ಸಾಗಣೆ ಆಗುತ್ತದೆ.

ಇದನ್ನೂ ಓದಿ: ಭಾರತ, ಜಪಾನ್ ಜಿಡಿಪಿಯನ್ನೂ ಮೀರಿಸಿದ ಈ ಒಂದು ರಾಜ್ಯದ ಆರ್ಥಿಕತೆ

ಪಾಕಿಸ್ತಾನ ವಿಚಾರದಲ್ಲೂ ಹೀಗೆ ಆಗಿದ್ದು. ಭಾರತದಿಂದ ಸರಕುಗಳು ಕೊಲಂಬೋ, ಸಿಂಗಾಪುರ್, ದುಬೈ ಇತ್ಯಾದಿ ದೇಶಗಳಿಗೆ ಹೋಗುತ್ತವೆ. ಅಲ್ಲಿ ಬಾಂಡೆಡ್ ವೇರ್​ಹೌಸ್​​ಗಳಲ್ಲಿ ಸ್ಟೋರ್ ಆಗುತ್ತವೆ. ಕೋಲ್ಡ್ ಸ್ಟೋರೇಜ್​​ನಲ್ಲಿ ಈ ಸರಕುಗಳು ಇರುವುದರಿಂದ ಸುಂಕ ವಿಧಿಸಲಾಗುವುದಿಲ್ಲ. ಅಲ್ಲಿ ಲೇಬಲ್ ಮತ್ತು ದಾಖಲೆಗಳನ್ನು ಬದಲಾಯಿಸಿ, ನಂತರ ಪಾಕಿಸ್ತಾನಕ್ಕೆ ಆ ಸರಕುಗಳನ್ನು ಸಾಗಿಸಲಾಗುತ್ತದೆ. ಒಂದು ರೀತಿಯಲ್ಲಿ ಭಾರತದ ಸರಕುಗಳನ್ನು ದುಬೈ ಇತ್ಯಾದಿ ಮೂಲಕ ಪಾಕಿಸ್ತಾನಕ್ಕೆ ಮರುರಫ್ತು ಮಾಡಲಾಗುತ್ತದೆ. ಕೆಲವೊಮ್ಮೆ ನೇರ ರಫ್ತಿಗಿಂತ ಈ ಪರೋಕ್ಷ ಮಾರ್ಗವು ವ್ಯಾಪಾರಿಗಳಿಗೆ ಹೆಚ್ಚು ಲಾಭ ಕೊಡಬಲ್ಲುದು.

ಇದು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಲ್ಲಿ ಇರುವ ಒಂದು ಲೋಪ. ಅಗತ್ಯ ಬಿದ್ದಾಗ ವ್ಯಾಪಾರಿಗಳು ಈ ಮಾರ್ಗವನ್ನು ಬಳಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Mon, 28 April 25