Viral Video: ಈ ಪುಟಾಣಿ ಬ್ಯಾಗ್ ಖರೀದಿಸುವ ಹಣದಲ್ಲಿ ಸುಂದರವಾದ ಮನೆ ಕಟ್ಟಬಹುದು

ಇದೀಗ ಹರ್ಮೆಸ್ ಕೆಲ್ಲಿಮಾರ್ಫೋಸ್  ಬ್ರಾಂಡಿನ ಪುಟಾಣಿ ಬ್ಯಾಗ್ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪುಟ್ಟ ಬ್ಯಾಗ್​​​ನ ದುಬಾರಿ ಬೆಲೆಯನ್ನು ನೋಡಿ,  ಈ  ಪುಟ್ಟ ಬ್ಯಾಗ್ ಖರೀದಿಸುವ ಹಣದಲ್ಲಿ ದೊಡ್ಡದೊಂದು ಮನೆಯನ್ನು  ಖರೀದಿಸಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.  ಅಷ್ಟಕ್ಕೂ ಈ ಬ್ಯಾಗ್  ಯಾಕಿಷ್ಟು ದುಬಾರಿ ಅನ್ನೊದು ನಿಮ್ಗೆ ಗೊತ್ತಾ?

Viral Video: ಈ ಪುಟಾಣಿ ಬ್ಯಾಗ್ ಖರೀದಿಸುವ ಹಣದಲ್ಲಿ ಸುಂದರವಾದ ಮನೆ ಕಟ್ಟಬಹುದು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 06, 2024 | 6:04 PM

ದುಬಾರಿ ಹ್ಯಾಂಡ್ ಬ್ಯಾಗ್​​ಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಅಲ್ಲ ಇಷ್ಟು ಪುಟ್ಟ ಬ್ಯಾಗ್ ಅಷ್ಟೊಂದು ದುಬಾರಿನಾ? ಅಲ್ಲ ಅದ್ರಲ್ಲಿ ಅಂತದ್ದೇನಿದೆ  ಅಂತ ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ಬ್ಯಾಗ್ ಅನ್ನು ಹರ್ಮೆಸ್ ಬ್ಯಾಗ್ ಕಂಪೆನಿ ತಯಾರಿಸಿದ್ದು,  ಈ  ಐಷರಾಮಿ ಬ್ಯಾಗ್ ಕಂಪೆನಿಯಾದ ಹರ್ಮೆಸ್  ವಿಶ್ವದ ಅತ್ಯಂತ ದುಬಾರಿ ಲೇಡಿಸ್ ಬ್ಯಾಗ್​​ಗಳನ್ನು ತಯಾರಿಸುತ್ತದೆ. ಈ ಕಂಪೆನಿಯ ಬ್ಯಾಗಿನ ಬೆಲೆ 10 ಲಕ್ಷದಿಂದ ಆರಂಭವಾಗಿ ಕೋಟಿ ರೂಪಾಯಿಗಳ ವರೆಗೂ ಇದೆ. ಅಷ್ಟಕ್ಕೂ ಈ ಕಂಪೆನಿಯ ಬ್ಯಾಗ್ ಅಷ್ಟೊಂದು ದುಬಾರಿ ಏಕೆ ಅಂತ ನೀವು ಯೋಚನೆ ಮಾಡ್ತಿದ್ದೀರಾ? ಸಾಮಾನ್ಯವಾಗಿ ಈ ಕಂಪೆನಿಯ ಬ್ಯಾಗ್​​​​ಗಳನ್ನು ಮೊಸಲೆ ಚರ್ಮದಿಂದ ತಯಾರಿಸಲಾಗುತ್ತದೆ. ಅಲ್ಲದೆ ಅವುಗಳನ್ನು ವಜ್ರದ ಹರಳುಗಳಿಂದ ಡಿಸೈನ್ ಮಾಡಲಾಗುತ್ತದೆ.   ಇದೇ ಕಾರಣಕ್ಕೆ ಈ ಕಂಪೆನಿ ಬ್ಯಾಗ್ ಅಷ್ಟೊಂದು ದುಬಾರಿಯಾಗಿದೆ. ಇದೀಗ ಹರ್ಮೆಸ್ ಕೆಲ್ಲಿಮಾರ್ಫೋಸ್  ಇದೇ ರೀತಿಯ ದುಬಾರಿ ಬೆಲೆಯ ಪುಟ್ಟ ಬ್ಯಾಗ್ ಒಂದನ್ನು ತಯಾರಿಸಿದ್ದು, ಇದರ ಬೆಲೆ  ಅಂದಾಜು 14,71,88,495 ರುಪಾಯಿಗಳಾಗಿವೆ. ಈ ಒಂದು ಬ್ಯಾಗ್ ಅನ್ನು ಸಂಪೂರ್ಣವಾಗಿ ವೈಟ್ ಗೋಲ್ಡ್ ಮತ್ತು ವಜ್ರಗಳಿಂದ ತಯಾರಿಸಲಾಗಿದ್ದು, ಈ ಬ್ಯಾಗಿನ ಬೆಲೆಯನ್ನು ಕಂಡು, ಈ ಬ್ಯಾಗ್ ಖರೀದಿಸುವ ಹಣದಲ್ಲಿ ದೊಡ್ಡದೊಂದು ಮನೆಯನ್ನು ಖರೀದಿಸಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

@prestigepalace.ae ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ  ಈ ವಿಡಿಯೋವನ್ನು ಹರಿಬಿಡಲಾಗಿದ್ದು, ವೈಟ್ ಗೋಲ್ಡ್ ಮತ್ತು ವಜ್ರಗಳಿಂದ ತಯಾರಿಸಿದ ಹರ್ಮೆಸ್  ಕೆಲ್ಲಿಮಾರ್ಫೋಸ್   ಬ್ಯಾಗ್ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಡಿಸೈನರ್ ಪಿಯರೆ ಹಾರ್ಡಿ ವೋಗ್ ವೈಟ್ ಗೋಲ್ಡ್ ಮತ್ತು ವಜ್ರಗಳಿಂದ ತಯಾರಿಸಿದ ದುಬಾರಿ ಬ್ಯಾಗ್ ಅನ್ನು ಪ್ರದರ್ಶಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವೈರಲ್​​ ಆಗುತ್ತಿದೆ ಎದೆ ಝಲ್ ಎನಿಸುವ ಕಾರು ಅಪಘಾತ 

ಡಿಸೆಂಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ.  ಹಾಗೂ ಹಲವಾರು ಕಮೆಂಟ್​​ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಸುಮ್ಮನೆ ಹಣ ವ್ಯರ್ಥʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬ್ಯಾಗ್ ಖರೀದಿಸುವ ಹಣದಲ್ಲಿ ಸುಂದರವಾದ ಮನೆಯನ್ನು ಕಟ್ಟಿಸಬಹುದುʼ ಎಂದು ಕಮೆಂಟ್ ಮಾಡಿದ್ದಾರೆ.  ಇನ್ನೂ ಅನೇಕರು ಈ ಬ್ಯಾಗ್ ಬೆಲೆಯನ್ನು ನೋಡಿ ಶಾಕ್ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ