AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅರೇ ಏನಿದು ಆಮೆಯೂ ಇಷ್ಟು ವೇಗವಾಗಿ ಓಡುತ್ತಾ? 

ಆಮೆಯ ನಿಧಾನಗತಿಯ ನಡಿಗೆಯ ಬಗೆಗಿನ  ಹಲವು ಕಥೆಗಳನ್ನು ನಾವು ಸಣ್ಣ ವಯಸ್ಸಿನಲ್ಲಿ ಕೇಳಿರುತ್ತೇವೆ ಅಲ್ವಾ. ಆದ್ರೆ ಇಲ್ಲೊಂದು ಆಮೆ ಆ ಕಥೆಯನ್ನೇ ಉಲ್ಟಾ ಮಾಡಿಬಿಟ್ಟಿದೆ. ಹೌದು ಈ ಆಮೆಯು ವೇಗವಾಗಿ ಓಡಿಕೊಂಡು ಹೋಗುವ ಮೂಲಕ ಮೊಲದಂತೆಯೇ ನನಗೂ ಫಾಸ್ಟ್ ಆಗಿ ಓಡಲು ಬರುತ್ತೇ ಅನ್ನೋದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅಬ್ಬಬ್ಬಾ ಆಮೆಗಳು ಇಷ್ಟೊಂದು ವೇಗವಾಗಿ ಓಡುತ್ತಾ… ಹಿಂದೆಂದೂ ಇಂತಹ ಘಟನೆಗಳನ್ನು ನೋಡೆ ಇಲ್ಲ ಅಂತ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.  

Viral Video: ಅರೇ ಏನಿದು ಆಮೆಯೂ ಇಷ್ಟು ವೇಗವಾಗಿ ಓಡುತ್ತಾ? 
ಮಾಲಾಶ್ರೀ ಅಂಚನ್​
| Edited By: |

Updated on: Jan 11, 2024 | 3:02 PM

Share

ಮೊಲಗಳು ಎಷ್ಟು ವೇಗವಾಗಿ ಓಡಿಕೊಂಡು ಹೋಗುತ್ತವೋ, ಇದಕ್ಕೆ ತದ್ವಿರುದ್ಧವಾಗಿ ಆಮೆಗಳು ಅಷ್ಟೇ ನಿಧಾನ ಗತಿಯಲ್ಲಿ ಚಲಿಸುತ್ತವೆ. ಈ ಆಮೆ ಮತ್ತು ಮೊಲದ ನಡಿಗೆಯ ಕುರಿತ ನೀತಿ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ, ಓಟದ ಸ್ಪರ್ಧೆಯಲ್ಲಿ ಮೊಲವು ನಾನೇ ಗೆಲ್ಲುತ್ತೇನೆ ಎಂದು ಜಂಬದಿಂದ ಓಡಿ ಹೋಗಿ  ಆಮೆ ಇನ್ನು ಕೂಡಾ ಬಾರದೆ ಇರುವುದನ್ನು ಕಂಡು ಮೊಲವು ಅರ್ಧ ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಮಲಗಿರುತ್ತದೆ, ಅಂತಿಮವಾಗಿ ತಾಳ್ಮೆ ಮತ್ತು ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಆಮೆಯು ಓಟದ ಸ್ಪರ್ಧೆಯಲ್ಲಿ ಗೆದ್ದು, ತಾಳ್ಮೆ ಮತ್ತು ನಮ್ಮಲ್ಲಿ ನಾವು  ಆತ್ಮವಿಶ್ವಾಸವಿಟ್ಟರೆ ಗೆಲುವು ಖಚಿತ ಎಂಬ ನೀತಿ ಪಾಠವನ್ನು ಕಲಿಸಿತ್ತು.  ಆದರೆ ಆ ಕಥೆಯನ್ನೇ ಇಲ್ಲೊಂದು ಆಮೆ ಉಲ್ಟಾ ಮಾಡಿ ಬಿಟ್ಟಿದೆ. ಹೌದು, ನನಗೂ ಕೂಡಾ ಮೊಲದ ಹಾಗೆ ವೇಗವಾಗಿ ಓಡಲು ಬರುತ್ತೆ ಅಂತ ಈ ಆಮೆ ವೇಗವಾಗಿ ಓಡುತ್ತಾ ಹೋಗಿದೆ.  ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆಮೆ ಇಷ್ಟು ವೇಗವಾಗಿ ಓಡುವುದನ್ನು ನಾವು ಹಿಂದೆಂದೂ ನೋಡೆ ಇಲ್ಲ ಅಂತ ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.

ಈ ವಿಡಿಯೋವನ್ನು @pubity ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಆಮೆಯೊಂದು ವೇಗವಾಗಿ ಓಡಿಕೊಂಡು ಹೋಗುವಂತಹ ಆಶ್ಚರ್ಯಕರ ದೃಶ್ಯವನ್ನು ಕಾಣಬಹುದು. ವಿಡಿಯೋದಲ್ಲಿ ಸರೋವರದ ಪಕ್ಕ ಕಟ್ಟಿದ್ದಂತಹ  ಸಣ್ಣ ಬ್ರಿಡ್ಜ್ ದಾಟಲು, ಆಮೆಯೊಂದು ನಿಧಾನಕ್ಕೆ ನಿಧಾನಕ್ಕೆ ಚಲಿಸುತ್ತಾ ಬರುತ್ತದೆ. ಇನ್ನೇನೂ ಈ ಆಮೆ  ಒಂದು ಗಂಟೆಯಾದರೂ  ಬ್ರಿಡ್ಜ್  ದಾಟಲ್ಲ ಅಂತ  ಅಂದುಕೊಳ್ಳುವಷ್ಟರಲ್ಲಿ, ಆಮೆಯು ಕ್ಷಣಾರ್ಧದಲ್ಲಿ ಓಡಿ ಹೋಗಿ ಬ್ರಿಡ್ಜ್ ದಾಟುವ ಆಶ್ಚರ್ಯಕರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಕ್ತರಿಗೆ ತೀರ್ಥ ಪ್ರಸಾದ ನೀಡಲು ಪುರೋಹಿತರೊಂದಿಗೆ ಕುಳಿತ ಶಿಷ್ಯ ಬೆಕ್ಕಣ್ಣ

View this post on Instagram

A post shared by Pubity (@pubity)

ಡಿಸೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 83 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಬಹುಶಃ ಈ ಆಮೆಯು ಮೊಲದ ಬಳಿ ಓಟದ ತರಬೇತಿ ಪಡೆದಿರಬಹುದುʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಮೆಗಳೂ ಓಡಬಹುದು ಎಂದು ನಾನು ಊಹೆ ಕೂಡಾ ಮಾಡಿರಲಿಲ್ಲ,  ಇದು ತುಂಬಾ ಆಶ್ಚರ್ಯಕರವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಮೆ ಮತ್ತು ಮೊಲದ ನೀತಿ ಕಥೆಯು ಫುಲ್ ಉಲ್ಟಾ ಹೊಡೆದಂಗಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಆಮೆ ಓಡಿ ಹೋಗುವ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ