ಯಾರೂ ಊಟ ಕೊಡ್ತಿಲ್ಲ, ಸ್ವಲ್ಪ ಹಣ ಬೇಕಿತ್ತು, ಬ್ಯಾಂಕ್ನೊಳಗೆ ಬಂದು ಶಾಂತವಾಗಿ ನಿಂತಿತ್ತು ಗೂಳಿ
ಯಾರೂ ಊಟ ಕೊಡ್ತಿಲ್ಲ, ಸ್ವಲ್ಪ ಹಣ ಕೊಡ್ತೀರಾ ಪ್ಲೀಸ್ ಎಂದು ಕೇಳ್ತಿರಬೇಕು ಗೂಳಿಯ ಮನಸ್ಸು. ಗೂಳಿಯೊಂದು ಬ್ಯಾಂಕ್ನೊಳಗೆ ಬಂದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಉತ್ತರ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ನಡೆದಿದೆ.
ಯಾರೂ ಊಟ ಕೊಡ್ತಿಲ್ಲ, ಸ್ವಲ್ಪ ಹಣ ಕೊಡ್ತೀರಾ ಪ್ಲೀಸ್ ಎಂದು ಕೇಳ್ತಿರಬೇಕು ಗೂಳಿಯ ಮನಸ್ಸು. ಗೂಳಿಯೊಂದು ಬ್ಯಾಂಕ್ನೊಳಗೆ ಬಂದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಉತ್ತರ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ನಡೆದಿದೆ.
ಮಧ್ಯಾಹ್ನ 12 ಗಂಟೆಯ ವೇಳೆ ಎಸ್ಬಿಐನ ಬಾಗಿಲು ತೆರೆದಿತ್ತು, ಗೂಳಿ ನೇರವಾಗಿ ಬ್ಯಾಂಕ್ ಪ್ರವೇಶಿಸಿದೆ. ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಗ್ರಾಹಕರು ಓಡಿ ಹೋಗಿದ್ದಾರೆ.
ಬ್ಯಾಂಕ್ನಲ್ಲಿ ಸಾಕಷ್ಟು ಮಂದಿ ಇದ್ದರು, ಬ್ಯಾಂಕ್ ಒಳಗೆ ಭಯ ಪಡದೆ ನಿಂತಲ್ಲೇ ನೋಡುತ್ತಾ ತಾಳ್ಮೆಯಿಂದ ನಿಂತಿತ್ತು ಗೂಳಿ. ಕೆಲ ಹೊತ್ತಿನ ಬಳಿಕ ಭದ್ರತಾ ಸಿಬ್ಬಂದಿ ರೈಫಲ್ ಹಾಗೂ ಕೋಲು ಹಿಡಿದು ಅದನ್ನು ಓಡಿಸಿದ್ದಾರೆ.
ಆದರೆ ಗೂಳಿ ಬ್ಯಾಂಕಿನೊಳಗೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಗದ್ದಲ ಉಂಟಾಗಿತ್ತು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
SBI bank to bull: Abhi Lunch Time Hai 😋pic.twitter.com/m6vtYgnyJP
— Kumar Manish (@kumarmanish9) January 10, 2024
ಗೂಳಿ ಬ್ಯಾಂಕ್ಗೆ ಬಂದಾಗ ಅದು ಊಟದ ಸಮಯ ಎಂದು ಕೆಲವರು ತಪಾಷೆಯ ಕಮೆಂಟ್ ಮಾಡಿದ್ದಾರೆ. ಶಾಹಗಂಜ್ ಎಸ್‌ಬಿಐ ಶಾಖೆಯಲ್ಲಿ ಘಟನೆ ನಡೆದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ