Viral: ವಿಮಾನದೊಳಗೆ ಹೋಗುತ್ತಿದ್ದಂತೆ ತಾಯಿ-ಮಗಳಿಗೆ ಕಾದಿತ್ತು ಅಚ್ಚರಿ, ಅದೃಷ್ಟ ಅಂದ್ರೆ ಇದಪ್ಪ
ಅದೃಷ್ಟ ಅನ್ನೊದು ಹೇಗೆ, ಯಾವಾಗ ಬರುತ್ತೇ ಅಂತಾ ಊಹಿಸೋದು ತುಂಬಾನೆ ಕಷ್ಟ ಅಲ್ವಾ. ಇದೀಗ ಅದೇ ರೀತಿಯ ಅದೃಷ್ಟ ತಾಯಿ-ಮಗಳಿಗೆ ಒಳಿದಿದೆ. ಆ ಅದೃಷ್ಟ ಏನಪ್ಪಾ ಅಂದ್ರೆ ಸಿಶೇಲ್ಸ್ ನಿಂದ ಸ್ವಿಟ್ಜರ್ಲ್ಯಾಂಡ್ ಪ್ರಯಾಣಿಸುತ್ತಿದ್ದ ತಾಯಿ-ಮಗಳಿಗೆ ಎಮಿರೇಟ್ಸ್ ಫ್ಲೈಟ್ ನ ಬಿಸ್ನೆಸ್ ಕ್ಲಾಸ್ ಅಲ್ಲಿ ಕೇವಲ ಇಬ್ಬರೇ ರಾಣಿಯರಂತೆ ಪ್ರಯಾಣಿಸುವ ಅವಕಾಶ ಸಿಕ್ಕಿದೆ.
ಹೆಚ್ಚಿನವರು ವಿಮಾನದಲ್ಲಿ ಪ್ರಯಾಣಿಸುವಾಗ ಎಕನಾಮಿಕ್ ಕ್ಲಾಸ್ ಸೀಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಬ್ಯುಸಿನೆಸ್ ಕ್ಲಾಸ್ ಮತ್ತು ಫಸ್ಟ್ ಕ್ಲಾಸ್ ಸೀಟ್ ಸ್ವಲ್ಪ ದುಬಾರಿಯಾಗಿರುತ್ತವೆ. ಇದೇ ಕಾರಣಕ್ಕೆ ವಿಮಾನದಲ್ಲಿ ಎಕನಾಮಿ-ಕ್ಲಾಸ್ ಕ್ಯಾಬಿನ್ ಪ್ರಯಾಣಿಕರಿಂದ ತುಂಬಿರುತ್ತದೆ. ಅದರಲ್ಲೂ ಕ್ರಿಸ್ಮಸ್, ಹೊಸ ವರ್ಷ ಇತ್ಯಾದಿ ರಜಾ ದಿನಗಳ ಸಮಯದಲ್ಲಿ ಫ್ಲೈಟ್ ಟಿಕೆಟ್ ಸಿಗೋದೆ ಕಷ್ಟ. ಆದ್ರೆ ಇಲ್ಲೊಂದು ಅದೃಷ್ಟವಂತ ತಾಯಿ ಮಗಳಿಗೆ ಮಾತ್ರ ಎಮಿರೇಟ್ಸ್ ವಿಮಾನದ ಎಕಾನಮಿ-ಕ್ಲಾಸ್ ಕ್ಯಾಬಿನ್ ಅಲ್ಲಿ ರಾಣಿಯಂತೆ ಇಬ್ಬರೇ ಪ್ರಯಾಣಿಸುವಂತಹ ಅದೃಷ್ಟ ಲಭಿಸಿದೆ.
ಹೌದು ಜೋಯಿ ಡಾಯ್ಲ್ (25) ಮತ್ತು ಆಕೆಯ ತಾಯಿ ಕಿಮ್ಮಿ ಚೆಡೆಲ್ (59) ಅವರು ತಮ್ಮ ಕುಟುಂಬದೊಂದಿಗೆ ಕ್ರಿಸ್ಮಸ್ ರಜೆಯನ್ನು ಕಳೆಯಲು ಡಿಸೆಂಬರ್ 25, 2023 ರಂದು, ಸಿಶೇಲ್ಸ್ ನಿಂದ ಸ್ವಿಟ್ಜರ್ಲ್ಯಾಂಡ್ಗೆ ಹೋಗಲು ಎಮಿರೇಟ್ಸ್ ಫ್ಲೈಟ್ ಹತ್ತುತ್ತಾರೆ. ವಿಮಾನದ ಒಳಗೆ ಕಾಲಿಡುತ್ತಿದ್ದಂತೆ, ಇವರಿಗೆ ಆಶ್ಚರ್ಯವೊಂದು ಕಾದಿರುತ್ತದೆ, ಅದೇನೆಂದ್ರೆ ಇವರು ಪ್ರಯಾಣಿಸುತ್ತಿದ್ದ ವಿಮಾನದ ಎಕಾನಮಿ ಕ್ಲಾಸ್ ಕ್ಯಾಬಿನ್ ಅಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಪ್ರಯಾಣಿಕರು ಇರಲಿಲ್ಲ. ಮತ್ತು ಈ ವಿಮಾನದ ಫಸ್ಟ್ ಕ್ಲಾಸ್ ಕ್ಯಾಬಿನ್ ಅಲ್ಲಿ ನಾಲ್ಕು ಪ್ರಯಾಣಿಕರಿದ್ದರು ಅಷ್ಟೆ. ಆದರೆ ಯಾವಾಗಲೂ ಪ್ರಯಾಣಿಕರಿಂದ ತುಂಬಿರುವ ಎಕನಾಮಿಕ್ ಕ್ಲಾಸ್ ಕ್ಯಾಬಿನ್ ಅಲ್ಲಿ ಯಾವುದೇ ಪ್ರಯಾಣಿಕರಿಲ್ಲದೆ ತಾಯಿ-ಮಗಳು ಇಬ್ಬರೇ ರಾಣಿಯರಂತೆ ಪ್ರಯಾಣಿಸಿದ್ದಾರೆ. ಕ್ರಿಸ್ಮಸ್ ರಜೆಯ ಸಮಯದಲ್ಲೂ ಯಾವ ಪ್ರಯಾಣಿಕರೂ ಇಲ್ಲದಿರುವುದನ್ನು ಕಂಡು ತಾಯಿ-ಮಗಳು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಭಯಪಡಬೇಡ ಕಂದ, ನಾನಿದ್ದೇನೆ ಎಂದು ಪಟಾಕಿಗೆ ಭಯಪಟ್ಟ ಶ್ವಾನದ ಕಿವಿ ಮುಚ್ಚಿದ ಪುಟ್ಟ ಹುಡುಗಿ
ವಿಮಾನದಲ್ಲಿ ಇವರಿಬ್ಬರೇ ಪ್ರಯಾಣಿಕರು ಇದ್ದಿದ್ದರಿಂದ ತಾಯಿ-ಮಗಳು ಸಾಕಷ್ಟು ಮೋಜು ಮಾಡಿದ್ದಾರೆ. ಸಿಬ್ಬಂದಿಗಳ ಜೊತೆ ಮಾತನಾಡುತ್ತಾ, ಡಾನ್ಸ್ ಮಾಡುತ್ತಾ ಪ್ರಯಾಣದ ನಡುವೆ ಉತ್ತಮ ಸಮಯವನ್ನು ಕಳೆದಿದ್ದಾರೆ. ಅಲ್ಲದೆ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿ ತಮ್ಮ ರುಮಾಲನ್ನು ಕಿಮ್ಮಿ ಚೆಡೆಲ್ ಅವರಿಗೆ ತೊಡಿಸುತ್ತಿರುವ ಹಾಗೂ ಮಗಳು ಜೋಯಿ ಕ್ಲೀನ್ ವಿಮಾದಲ್ಲಿ ಸಂತೋಷದಿಂದ ನೃತ್ಯ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಹಾಗೂ ಜೋಯಿ ಅವರು ತಮ್ಮ ಮೋಜಿನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ