AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಮೇಲೆ ದಾಳಿ ಮಾಡಲು ಬಂದ ಸಿಂಹವನ್ನೇ ಗಢ ಗಢ ನಡುಗಿಸಿದ ಮುಂಗುಸಿ

ʼಧೈರ್ಯಂ ಸರ್ವತ್ರ ಸಾಧನಂʼ  ಎಂಬಂತೆ  ಧೈರ್ಯ ಒಂದಿದ್ದರೆ ಜೀವನದಲ್ಲಿ ಎದುರಾಗುವಂತಹ   ಎಂತಹ ಸಂಕಟದಿಂದಲೂ ಪಾರಾಗಬಹುದು. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಕಾಡಿನಲ್ಲಿ  ಮೂರು ಸಿಂಹಗಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಪುಟ್ಟ ಮುಂಗುಸಿಯೊಂದು ಧೈರ್ಯ ಗೆಡದೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಯಾವುದೇ ಅಂಜಿಕೆಯಿಲ್ಲದೆ ಹೋರಾಡುವ ಮೂಲಕ ಸಿಂಹಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.  ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 

Viral Video: ತನ್ನ ಮೇಲೆ ದಾಳಿ ಮಾಡಲು ಬಂದ ಸಿಂಹವನ್ನೇ ಗಢ ಗಢ ನಡುಗಿಸಿದ ಮುಂಗುಸಿ
ಮಾಲಾಶ್ರೀ ಅಂಚನ್​
| Edited By: |

Updated on: Jan 10, 2024 | 10:40 AM

Share

ಹಾವು ಮತ್ತು ಮುಂಗಸಿಯ ನಡುವಿನ ಕಾದಾಟವನ್ನು ನೀವು ಅನೇಕ ಬಾರಿ ನೋಡಿರಬೇಕು ಅಲ್ವಾ, ಆದ್ರೆ ಮುಂಗುಸಿ ಕಾಡಿನ ರಾಜ ಸಿಂಹದೊಂದಿಗೆ ಕಾದಾಡುವುದನ್ನು ಯಾವತ್ತಾದ್ರೂ  ನೋಡಿದ್ದೀರಾ? ಅರೇ ಈ ಪುಟ್ಟ ಪ್ರಾಣಿ ಬಲಿಷ್ಟ ಸಿಂಹದೊಂದಿಗೆ ಹೋರಾಡಿ ಗೆಲ್ಲುವುದುಂಟೆ, ಇದರ ಧೈರ್ಯ ಏನಿದ್ರೂ ಹಾವಿನ ಮುಂದೆ ಮಾತ್ರ ಅಂತ ನೀವು ಭಾವಿಸುತ್ತಿದ್ದೀರಾ?  ಆದ್ರೆ ಧೈರ್ಯ ಒಂದಿದ್ದರೆ, ಎಂತಹ ಬಲಿಷ್ಟರನ್ನು ಬೇಕಾದರೂ ಎದುರಿಸಬಹುದು, ಜೀವನದಲ್ಲಿ ಬರುವ ಯಾವುದೇ ಸಂಕಷ್ಟವನ್ನು ಎದುರಿಸಿ ಜಯಿಸಬಹುದೆಂದು ಈ ಮುಂಗುಸಿಯು ತೋರಿಸಿಕೊಟ್ಟಿದೆ.  ಸಿಂಹಗಳು ಮತ್ತು ಮುಂಗುಸಿನ ನಡುವಿನ ಕಾಳಗದ ಕುತೂಹಲಕಾರಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್  ಆಗಿದೆ.

ಮುಂಗುಸಿ ಮತ್ತು ಸಿಂಹಗಳ ನಡುವಿನ ಕಾಳಗದ ಈ ಕುತೂಹಲಕಾರಿ ವಿಡಿಯೋವನ್ನು @Zhenya225004 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋದಲ್ಲಿ ಮುಂಗುಸಿಯು ತನ್ನ ಮೇಲೆ ದಾಳಿ ಮಾಡಲು ಬಂದಂತಹ ಸಿಂಹಗಳನ್ನು  ಧೈರ್ಯಯಿಂದ ಎದುರಿಸುವ ಮೂಲಕ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವಂತಹ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಒಂದು ಕಾಡಿನಲ್ಲಿ ಸಿಂಹವೊಂದು ತನ್ನ ಕೂತಿರುತ್ತದೆ, ಅಷ್ಟರಲ್ಲಿ ತನ್ನ ಗೂಡಿನಿಂದ ಹೊರ ಬಂದ ಮುಂಗುಸಿಯೊಂದು ಸಿಂಹವನ್ನು ಕಂಡು ಜೋರಾಗಿ ಕಿರುಚಲು ಪ್ರಾರಂಭಿಸುತ್ತದೆ, ಒಮ್ಮೆಲೆ ಬೆಚ್ಚಿ ಬಿದ್ದ ಸಿಂಹವು ಇದ್ಯಾವ ಪ್ರಾಣಿ ಅಂತ ಮುಂಗುಸಿಯನ್ನೇ ನೋಡುತ್ತಾ ಕುಳಿತುಕೊಳ್ಳುತ್ತೆ. ಅಷ್ಟರಲ್ಲಿ ಏನದು ಸದ್ದು ಎಂದು ಇನ್ನೊಂದು ಸಿಂಹ ಓಡೋಡಿ ಬಂದು ಮುಂಗುಸಿಯ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಈ ದೈತ್ಯರ ಮುಂದೆ ಭಯಪಟ್ಟು ಬಾಲ ಮುದುರಿಕೊಂಡು ಕೂತ್ರೆ, ಖಂಡಿತವಾಗಿ ಇವರುಗಳು ನನ್ನನ್ನು ತಿಂದು ತೇಗಿಬಿಡುತ್ತಾರೆ ಎಂದು ಭಾವಿಸಿದ ಮುಂಗುಸಿ, ಧೈರ್ಯ ತೆಗೆದುಕೊಂಡು ನಿಮ್ಮ ಆಟ ನನ್ನ ಮುಂದೆ ನೆಡೆಯೊಲ್ಲಾ ಎನ್ನುತ್ತಾ ಸಿಂಹದ ಮೇಲೆಯೇ ದಾಳಿ ಮಾಡಲು ಮುಂದಾಗುತ್ತದೆ. ಮುಂಗುಸಿಯ ಆರ್ಭಟಕ್ಕೆ ಭಯಪಟ್ಟ   ಸಿಂಹ ಹಿಂದೆ ಹಿಂದೆ ಹೆಜ್ಜೆಯನ್ನಿಡುತ್ತಾ, ಮುಂಗುಸಿಯ ದಾಳಿಯಿಂದ ತಪ್ಪಿಸಿಕೊಳ್ಳುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬಂದ್ರು.. ಬಂದ್ರು.. ಅಪ್ಪ ಬಂದ್ರು ಬೇಗ ಟಿವಿ ಆಫ್ ಮಾಡಿ, ಹೋಮ್ ವರ್ಕ್ ಮಾಡು

ಜನವರಿ 07 ರಂದು ಹಂಚಿಕೊಳ್ಳಲಾದ ಈ ವಿಡಿಯೋ  ಹದಿನಾರು ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಧೈರ್ಯ ಮತ್ತು ಆತ್ಮ ವಿಶ್ವಾಸವಿದ್ದರೆ, ಎಂತಹ ಬಲಿಷ್ಟನನ್ನೂ ಬೇಕಾದರೂ ನಮ್ಮಿಂದ ಸೋಲಿಸಬಹುದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮುಂಗುಸಿಯ ಧೈರ್ಯಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಮುಂಗಿಸಿಯ ಹಾಗೆ ಧೈರ್ಯ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟಗಳನ್ನೂ ಕೂಡಾ ಎದುರಿಸಿ ಜಯಿಸಬಹುದು ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ