Viral Video: ಬಂದ್ರು.. ಬಂದ್ರು.. ಅಪ್ಪ ಬಂದ್ರು ಬೇಗ ಟಿವಿ ಆಫ್ ಮಾಡಿ, ಹೋಮ್ ವರ್ಕ್ ಮಾಡು

ಶ್ವಾನಗಳೆಂದರೆ ಮಕ್ಕಳಿಗೆ ಬಲು ಪ್ರೀತಿ. ಮನೆಯ ಈ ಸಾಕು ಪ್ರಾಣಿಗಳೊಂದಿಗೆ ಆಟವಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅದೇ ರೀತಿ ಈ ಶ್ವಾನಗಳು ಕೂಡಾ ಮಕ್ಕಳನ್ನು ಅಷ್ಟೇ ಪ್ರೀತಿಸುತ್ತವೆ, ಪ್ರತಿ ಸಂದರ್ಭದಲ್ಲಿಯೂ ಅವರನ್ನು ರಕ್ಷಣೆ ಮಾಡುತ್ತವೆ. ತಂದೆ ತಾಯಿ ಮಕ್ಕಳಿಗೆ ಗದರಿದಾಗ, ಶ್ವಾನಗಳು ಬೊಗಳುತ್ತಾ, ಮಗುವಿಗೆ ಬೈಬೇಡಿ ಅಂತ ತನ್ನದೇ ಭಾಷೆಯಲ್ಲಿ ಹೇಳುತ್ತಿರುತ್ತವೆ. ಇಂತಹ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಶ್ವಾನವೊಂದು ಪುಟ್ಟ ಬಾಲಕಿಯನ್ನು ಹೋಮ್ ವರ್ಕ್ ಮಾಡುವಂತೆ ಎಚ್ಚರಿಸುವ ಮೂಲಕ ತಂದೆಯ ಬೈಗುಳದಿಂದ ಪಾರು ಮಾಡಿದೆ.  

Viral Video: ಬಂದ್ರು.. ಬಂದ್ರು.. ಅಪ್ಪ ಬಂದ್ರು ಬೇಗ ಟಿವಿ ಆಫ್ ಮಾಡಿ, ಹೋಮ್ ವರ್ಕ್ ಮಾಡು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2024 | 4:35 PM

ಹೆಚ್ಚಾಗಿ ಮಕ್ಕಳು ಶಾಲೆಯಿಂದ ಮನೆಗೆ ಮರಲಿದ ತಕ್ಷಣವೇ ಟಿ.ವಿ ಆನ್ ಮಾಡಿ ಕಾರ್ಟೂನ್ ನೋಡುತ್ತಾ ಕೂತುಬಿಡುತ್ತಾರೆ. ಈ ಮಕ್ಕಳು ಹೀಗೆ ಟಿವಿಯಲ್ಲಿ ಮುಳುಗಿದ್ರೆ ಸಾಕು ಊಟ ಹೋಮ್ ವರ್ಕ್ ಎಲ್ಲವನ್ನೂ ಮರೆತುಬಿಡುತ್ತಾರೆ. ಇದೇ ಕಾರಣಕ್ಕೆ ಬರೀ ಟಿ.ವಿಯನ್ನೇ ನೋಡು, ಹೋಮ್ ವರ್ಕ್ ಯಾರ್ ಮಾಡ್ತಾರೆ, ಬೇಗ ಬಂದು ಹೋಮ್ ವರ್ಕ್ ಮಾಡಿದ್ರೆ ಸರಿ ಅಂತ ಪ್ರತಿನಿತ್ಯ ಅಮ್ಮಂದಿರು ತಮ್ಮ ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವ ಸಲುವಾಗಿ ಬೈತಾ ಇರ್ರಾರೆ. ಅದೇ ರೀತಿ ಇಲ್ಲೊಬ್ಬಳು ಹುಡುಗಿ ಕೂಡಾ ಶಾಲೆಯಿಂದ ಮನೆಗೆ ಬಂದ ತಕ್ಷಣ ಹೋಮ್ ವರ್ಕ್ ಮಾಡದೆ, ಟಿ.ವಿ ನೋಡುತ್ತಾ ಕೂತಿದ್ದಾಳೆ. ಇನ್ನೇನೂ ಆಕೆಯ ತಂದೆ ಬರುತ್ತಿದ್ದಾರೆ ಎನ್ನುಷ್ಟರಲ್ಲಿ ಮನೆಯ ಸಾಕು ನಾಯಿ, ಅಪ್ಪ ಬರ್ತಿದ್ದಾರೆ, ಟಿ.ವಿ ಆಫ್ ಮಾಡಿ ಹೋಮ್ ವರ್ಕ್ ಮಾಡು ಎಂದು ಎಚ್ಚರಿಸಿ, ಆಕೆಯನ್ನು ಅಪ್ಪನ ಬೈಗುಳದಿಂದ ರಕ್ಷಿಸುವಂತಹ ಕೆಲಸವನ್ನು ಮಾಡಿದೆ. ನಾಯಿ ಮತ್ತು ಪುಟ್ಟ ಹುಡುಗಿಯ ಈ ಮುದ್ದಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

@PicturesFoIder ಎಂಬ  X ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಪಾರ್ಟ್ನರ್ ಇನ್ ಕ್ರೈಮ್ʼ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಮುದ್ದಾದ ನಾಯಿಯೊಂದು ಬಾಲಕಿಯ ಅಪ್ಪ ಬರುವ ವೇಳೆ ಟಿ.ವಿ ಆಫ್ ಮಾಡಿ ಹೋಮ್ ವರ್ಕ್ ಮಾಡುವಂತೆ ಎಚ್ಚರಿಸುವ ಮುದ್ದಾದ ದೃಶ್ಯವನ್ನು ಕಾಣಬಹುದು.

ವಿಡಿಯೋದಲ್ಲಿ ಬಾಲಕಿಯೊಬ್ಬಳು, ಶಾಲೆಯಿಂದ ಬಂದ ತಕ್ಷಣ ಹೋಮ್ ವರ್ಕ್ ಮಾಡದೆಯೇ ಟಿವಿ ನೋಡುತ್ತಾ ಕುಳಿತಿರುತ್ತಾಳೆ. ಆಕೆಯ ಮನೆಯ ಜರ್ಮನ್ ಶೆಫರ್ಡ್ ಶ್ವಾನವು ಅಲ್ಲೇ ಬಾಲ ಅಲ್ಲಾಡಿಸುತ್ತಾ ಮಲಗಿರುತ್ತೆ. ಅಷ್ಟರಲ್ಲಿ ಆ ಬಾಲಕಿಯ ತಂದೆ ಇನ್ನೇನು ಮನೆಗೆ ಬರ್ತಿದ್ದಾರೆ ಅಂತ ಶ್ವಾನಕ್ಕೆ ಗೊತ್ತಾಗುತ್ತೆ. ಈ ಹುಡುಗಿ ಹೋಮ್ ವರ್ಕ್ ಬಿಟ್ಟು ಟಿ.ವಿ ನೋಡ್ತಾ ಇರೋದನ್ನು ಅಪ್ಪ ಏನಾದ್ರೂ ನೋಡಿದ್ರೆ, ಖಂಡಿತವಾಗಿಯೂ ಬೈತಾರೆ ಅಂತ ಯೋಚಿಸಿ,  ಅಷ್ಟರವರೆಗೆ ಮಲಗಿದ್ದ ಶ್ವಾನ ತಕ್ಷಣ ಎದ್ದು, ಅಪ್ಪ ಬರ್ತಿದ್ದಾರೆ ಅಂತ ಆ ಬಾಲಕಿಗೆ ಎಚ್ಚರಿಕೆಯ ಸಂದೇಶ ನೀಡುತ್ತೆ. ಇದನ್ನು ಅರಿತ ಆ ಬಾಲಕಿ ತಕ್ಷಣ ಟಿ.ವಿ  ಆಫ್ ಮಾಡಿ, ಹೋಮ್ ವರ್ಕ್ ಮಾಡಲು ಕುಳಿತು ಬಿಡುತ್ತಾಳೆ. ಅಷ್ಟರಲ್ಲಿ ಆಕೆಯ ತಂದೆಯು ಬಂದೇ ಬಿಡುತ್ತಾರೆ. ಹೀಗೆ   ಮುದ್ದಾದ ಶ್ವಾನ ಬಾಲಕಿಯನ್ನು ತಂದೆಯ ಬೈಗುಳದಿಂದ ಪಾರು ಮಾಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: Viral Video: ಓಯ್ ಬೆಕ್ಕಣ್ಣ ನಾನು ನಿನ್ ಮನೆಗೆ  ಬರ್ಲಾ;  ಬೆಕ್ಕನ್ನು ಹಿಂಬಾಲಿಸಿದ ತುಂಟ  ಹಕ್ಕಿ…

ಜನವರಿ 08ರಂದು ಹಂಚಿಕೊಳ್ಳಲಾದ ಈ ವಿಡಿಯೋ 19.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬೆಸ್ಟ್ ಫ್ರೆಂಡ್ಸ್ ಅಂದ್ರೆ ಇವ್ರೇ ನೋಡಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ  ಮಗಳಿಗಾಗಿಯು ಇಂತಹ ಒಂದು ನಾಯಿಯನ್ನು ಸಾಕಲು ಇಷ್ಟಪಡುತ್ತೇನೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಿಜವಾಗಿಯೂ ಆ ಬಾಲಕಿ ಮತ್ತು ಶ್ವಾನದ ಬಾಂಧವ್ಯ ನೋಡಲು ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ