Viral Video: ಭಯಪಡಬೇಡ ಕಂದ, ನಾನಿದ್ದೇನೆ ಎಂದು ಪಟಾಕಿಗೆ ಭಯಪಟ್ಟ ಶ್ವಾನದ ಕಿವಿ ಮುಚ್ಚಿದ ಪುಟ್ಟ ಹುಡುಗಿ

ಸಾಮಾನ್ಯವಾಗಿ ಪಕ್ಷಿಗಳು ಮತ್ತು ಪ್ರಾಣಿಗಳು ಪಟಾಕಿಗಳ ಸದ್ದಿಗೆ ಹೆಚ್ಚಾಗಿ ಭಯಪಟ್ಟುಕೊಳ್ಳುತ್ತದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಯಾರೋ ಪಟಾಕಿ ಸಿಡಿಸಿದಾಗ ಶ್ವಾನವೊಂದು  ಆ ಸದ್ದಿಗೆ ಭಯಪಟ್ಟು ಕುಳಿತಿತ್ತು. ಪಟಾಕಿ ಸದ್ದಿಗೆ ಸಾಕು ನಾಯಿ ಹೆದರಿಕೊಂಡಿದೆ ಎಂದು ಅರಿತ ಬಾಲಕಿಯೊಬ್ಬಳು ಪಟಾಕಿ ಸದ್ದು ಕೇಳಿಸಬಾರದೆಂದು ತನ್ನ ಪುಟ್ಟ ಕೈಗಳಿಂದ ಶ್ವಾನದ ಕಿವಿಯನ್ನು ಮುಚ್ಚಿ ಹಿಡಯುತ್ತಾ, ಪಟಾಕಿ ಸದ್ದಿಗೆ ಭಯಪಟ್ಟ ಶ್ವಾನವನ್ನು ರಕ್ಷಿಸಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ  ಇದೀಗ ಸಖತ್ ವೈರಲ್ ಆಗಿದೆ. 

Viral Video: ಭಯಪಡಬೇಡ ಕಂದ, ನಾನಿದ್ದೇನೆ ಎಂದು ಪಟಾಕಿಗೆ ಭಯಪಟ್ಟ ಶ್ವಾನದ ಕಿವಿ ಮುಚ್ಚಿದ ಪುಟ್ಟ ಹುಡುಗಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 10, 2024 | 12:59 PM

ಮಕ್ಕಳ ಮುಗ್ದತೆ, ಅವರ ಕಾಳಜಿ ದೊಡ್ಡವರಿಗಿಂತೇನು ಕಮ್ಮಿಯಿಲ್ಲ. ಕಷ್ಟದಲ್ಲಿರುವವರಿಗೆ ಪುಟ್ಟ ಮಕ್ಕಳು ಸಹಾಯ ಮಾಡುವುದು, ಸಹಾಯಕ್ಕೆ ಮುಂದಾಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರಲ್ಲೂ ಮಕ್ಕಳು ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ, ನಿಷ್ಕಲ್ಮಶ ಮನಸ್ಸಿನಿಂದ ಸಹಾಯ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಪಟಾಕಿ ಸದ್ದಿಗೆ ಭಯಪಟ್ಟು ಕುಳಿತಿದ್ದಂತಹ ಶ್ವಾನಕ್ಕೆ ಧೈರ್ಯವನ್ನು ತುಂಬುತ್ತಾ, ಭಯ ಪಡ್ಬೇಡಾ ನಾನಿದ್ದೇನೆ ಅಲ್ವಾ ಎನ್ನುತ್ತಾ  ಬಾಲಕಿಯೊಬ್ಬಳು ಪಟಾಕಿ ಸದ್ದು ಕೇಳಿಸಬಾರದೆಂದು ತನ್ನ ಪುಟ್ಟ ಕೈಗಳಿಂದ ಶ್ವಾನದ ಕಿವಿಯನ್ನು ಮುಚ್ಚಿ ಹಿಡಯುತ್ತಾ, ಪಟಾಕಿ ಸದ್ದಿಗೆ ಭಯಪಟ್ಟ ಶ್ವಾನವನ್ನು ರಕ್ಷಿಸುತ್ತಾಳೆ. ಈ ಹೃದಯಸ್ಪರ್ಶಿ ವಿಡಿಯೋ  ಇದೀಗ ಸಖತ್ ವೈರಲ್ ಆಗಿದ್ದು, ಆ ಪುಟ್ಟ ಪೋರಿಯ ಮುಗ್ದತೆಗೆ ನೆಟ್ಟಿಗರು ಮನಸೋತಿದ್ದಾರೆ.

@ThebestFigen ಎಂಬ  X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು  ಪಟಾಕಿ ಸದ್ದಿಗೆ ಹೆದರಿಕೊಂಡಂತಹ ಸಾಕು ನಾಯಿಯ ಕಿವಿಯನ್ನು ತನ್ನ ಕೈಗಳಿಂದ ಮುಚ್ಚಿ ಹಿಡಿದುಕೊಳ್ಳುವ ಮೂಲಕ ಶ್ವಾನವನ್ನು ರಕ್ಷಿಸುವ  ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಪುಟ್ಟ ಬಾಲಕಿಯೊಬ್ಬಳು, ತನ್ನ ನಾಯಿ ಮರಿಯನ್ನು ಮುದ್ದು ಮಾಡುತ್ತಾ ನಿಂತಿದ್ದಳು.  ಅಷ್ಟರಲ್ಲಿ ಜೋರಾಗಿ ಪಟಾಕಿ ಸಿಡಿಸುವ ಸದ್ದು ಕೇಳಿಸುತ್ತೆ. ಅಯ್ಯೋ ನನ್ನ ಮುದ್ದು ನಾಯಿ ಮರಿ ಪಟಾಕಿ ಸದ್ದಿಗೆ ಭಯಪಡುತ್ತೆ ಎನ್ನುತ್ತಾ ಆ ಬಾಲಕಿ ತನ್ನ ಪುಟ್ಟ ಕೈಗಳಿಂದ ಸಾಕು ನಾಯಿಯ ಕಿವಿಯನ್ನು ಹಿಡಿದುಕೊಳ್ಳುತ್ತಾಳೆ. ನಂತರ ನಾನಿದ್ದೇನೆ ಭಯಪಡಬೇಡ ಎಂದು ತಲೆ ಸವರುತ್ತಾ ಶ್ವಾನವನ್ನು ಮುದ್ದು ಮಾಡುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನ ಮೇಲೆ ದಾಳಿ ಮಾಡಲು ಬಂದ ಸಿಂಹವನ್ನೇ ಗಢ ಗಢ ನಡುಗಿಸಿದ ಮುಂಗುಸಿ

ಜನವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.5  ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದೆ. ಒಬ್ಬ ಬಳಕೆದಾರರು ʼಆ ಪುಟ್ಟ ಮುಗುವಿಗೆ ತುಂಬಾ ಸಹಾನೂಭೂತಿ ಮತ್ತು ದಯೆಯ ಮನೋಭಾವವಿದೆ. ಆದ್ರೆ ದೊಡ್ಡವರಾದ ನಾವು ಪ್ರಾಣಿಗಳು ಪಟಾಕಿ ಸದ್ದಿಗೆ ಭಯಪಡುತ್ತವೆ ಎಂದು ಗೊತ್ತಿದ್ರೂ ಪಟಾಕಿ ಸಿಡಿಸುತ್ತೇವೆ, ಇದು ನಾಚಿಕೆಗೇಡಿನ ಸಂಗತಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಸುಂದರ ಬಂಧ. ಆ ಬಾಲಕಿಗೆ ಆಕೆಯ ಪೋಷಕರು ಉತ್ತಮ ಜೀವನ ಪಾಠವನ್ನು ಕಲಿಸಿಕೊಟ್ಟಿದ್ದಾರೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇರಿಬ್ಬರ ಬಂಧ ಎಷ್ಟು ಮುದ್ದಾಗಿದೆಯಲ್ವಾ ಅಂತ ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ