Viral Video: ಭಕ್ತರಿಗೆ ತೀರ್ಥ ಪ್ರಸಾದ ನೀಡಲು ಪುರೋಹಿತರೊಂದಿಗೆ ಕುಳಿತ ಶಿಷ್ಯ ಬೆಕ್ಕಣ್ಣ

ಕೆಲವೊಬ್ರು ಬೆಕ್ಕುಗಳು ಅಶುಭ ಎನ್ನುತ್ತಾ, ಬೆಕ್ಕುಗಳು ಮನೆಯ ಹತ್ತಿರ ಬಂದ್ರೂ ಸಹ ಅವಗಳನ್ನು ಕಲ್ಲು ಹೊಡೆದು ಓಡಿಸಿಬಿಡುತ್ತಾರೆ. ಇಂತಹ ಕ್ರೂರಿ ಜನಗಳ ಮಧ್ಯೆ ಇಲ್ಲೊಬ್ರು ಪುರೋಹಿತರು ದೇವಾಲಯದ ಪ್ರಾಂಗಣಕ್ಕೆ ಬಂದಂತಹ ಬೆಕ್ಕನ್ನು ತೀರ್ಥ ಪ್ರಸಾದ ಕೌಂಟರ್ ಬಳಿ ಕೂರಿಸಿ, ಪ್ರೀತಿಯಿಂದ ಮಾತನಾಡಿಸಿದ್ದಾರೆ. ಪುರೋಹಿತರು ಮತ್ತು ಅವರ ಮುದ್ದು ಶಿಷ್ಯ ಬೆಕ್ಕಣ್ಣನ  ವಿಡಿಯೋ ಇದೀಗ ವೈರಲ್ ಆಗಿದೆ.  

Viral Video: ಭಕ್ತರಿಗೆ ತೀರ್ಥ ಪ್ರಸಾದ ನೀಡಲು ಪುರೋಹಿತರೊಂದಿಗೆ ಕುಳಿತ ಶಿಷ್ಯ ಬೆಕ್ಕಣ್ಣ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2024 | 2:15 PM

ಸಾಮಾನ್ಯವಾಗಿ ಕೆಲವೊಬ್ರು, ಬೆಕ್ಕುಗಳು, ಬೀದಿನಾಯಿಗಳು ಅಥವಾ ಇತರೆ ಬಿಡಾಡಿ ಪ್ರಾಣಿಗಳು ಆಹಾರವನ್ನರಸುತ್ತಾ ಮನೆಯ ಬಳಿ ಬಂದರೆ, ಆ ನಿಷ್ಕಲ್ಮಶ ಮನಸಸ್ಸುಗಳಿಗೆ ಆಹಾರವನ್ನು ನೀಡದೆ ಕಲ್ಲು ಹೊಡೆದು ಓಡಿಸಿ ಬಿಡುತ್ತಾರೆ.  ಹೀಗೆ ಪ್ರಾಣಿಗಳನ್ನು ದ್ವೇಷಿಸುವ ಜನರ ಮಧ್ಯೆ,  ಇಲ್ಲೊಬ್ಬರು ಪುರೋಹಿತರು ದೇವಾಲದ ಪ್ರಾಂಗಣಕ್ಕೆ ಬಂದಂತಹ ಬೆಕ್ಕನ್ನು ಓಡಿಸದೆ, ಆ ಬೆಕ್ಕಿಗೆ ದೇವಾಲಯದಲ್ಲಿ ಕೂರಲು ಅವಕಾಶ ನೀಡಿದ್ದಾರೆ.  ಪುರೋಹಿತರ ಈ ನಡೆಗೆ ಪ್ರಾಣಿಪ್ರಿಯರು   ಮನಸೋತಿದ್ದಾರೆ. ಈ ಘಟನೆ ಕೇರಳದ ತ್ರಿಪುನಿಥುರಾದಲ್ಲಿರುವ ಪೂರ್ಣತ್ರಯೀಶ ದೇವಾಲಯದಲ್ಲಿ ನಡೆದಿದ್ದು, ಪುರೋಹಿತರೊಬ್ಬರು  ದೇವಾಲಯದ ಪ್ರಾಂಗಣಕ್ಕೆ ಬಂದಂತಹ ಬೆಕ್ಕನ್ನು  ಓಡಿಸದೆ, ಭಕ್ತರಿಗೆ ತೀರ್ಥ ವಿತರಿಸುವ ಕೌಂಟರ್ ಬಳಿ ಕೂರಿಸಿಕೊಂಡು, ಬೆಕ್ಕಣ್ಣನಿಗೆ ದೇವಾಲಯದಲ್ಲಿ ನೆಮ್ಮದಿಯಾಗಿ ಸಮಯ ಕಳೆಯಲು ಅವಕಾಶ ನೀಡಿದ್ದಾರೆ.

ಈ ವಿಡಿಯೋವನ್ನು @shivayanam_1  ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ದೇವಾಲಯದಲ್ಲಿ ತೀರ್ಥ ಪ್ರಸಾದ ಕೌಂಟರ್ ಬಳಿ ಪುರೋಹಿತರ ಪಕ್ಕದಲ್ಲಿ, ಅವರ ಶಿಷ್ಯ ಬೆಕ್ಕಣ್ಣ ಕುಳಿತುಕೊಂಡಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಕೇರಳದ ಪೂರ್ಣತ್ರಯೀಶ ದೇವಾಲಯದಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ನೀಡುವ ಕೌಂಟರ್ ಬಳಿ, ಬೆಕ್ಕೊಂದು ನೆಮ್ಮದಿಯಾಗಿ ಕುಳಿತಿತ್ತು,  ಇದನ್ನು ಕಂಡ ಪುರೋಹಿತರು ಬೆಕ್ಕನ್ನು ಹೊರಗೆ ಓಡಿಸದೆ, ಅವರು ಕೂಡಾ ಅಲ್ಲಿಯೇ ಕುಳಿತು ಬೆಕ್ಕಿನ ಜೊತೆಗೆ ಪ್ರೀತಿಯಿಂದ ಒಂದೆರಡು ಮಾತುಗಳನ್ನಾಡುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಪ್ರಾಯೋಗಿಕ ಚಾಲನೆ ವೇಳೆ ಅಪಘಾತಗೊಂಡ ಇವಿ ವಾಹನ, ನಾಲ್ವರು ಸಾವು

ಜನವರಿ   05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 65 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼದೇವಾಲಯದ ಪ್ರಾಂಗಣದೊಳಗೆ ಪ್ರಾಣಿಗಳನ್ನು ಬರಲು ಅನುಮತಿ ನೀಡುವ ನಿಮ್ಮಂತಹ ಹೃದಯವಂತ ವ್ಯಕ್ತಿಗಳಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಇದೇ ಮೊದಲ ಬಾರಿಗೆ ದೇವಾಲಯದ ಒಳಗೆ ಬೆಕ್ಕೊಂದು ಬಂದಿರುವುದನ್ನು ಕಂಡಿದ್ದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ತುಂಬಾನೇ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ