Video Viral: ಪ್ರಾಯೋಗಿಕ ಚಾಲನೆ ವೇಳೆ ಅಪಘಾತಗೊಂಡ ಇವಿ ವಾಹನ, ನಾಲ್ವರು ಸಾವು

ಪ್ರಾಯೋಗಿಕ ಚಾಲನೆ ವೇಳೆ ಎಲೆಕ್ಟ್ರಿಕ್ ವಾಹನ ಅಪಘಾತವಾಗಿದೆ. ಈ ಘಟನೆಯಲ್ಲಿ ಇಬ್ಬರು ಅರಣ್ಯ ರಕ್ಷಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಈ ಕಾರಿನಲ್ಲಿದ್ದ ಮಹಿಳಾ ವಾರ್ಡನ್ ನಾಪತ್ತೆಯಾಗಿದ್ದಾರೆ. ಈ ವಾಹನವನ್ನು ವೇಗವಾಗಿ ಓಡಿಸುವಂತೆ ಒತ್ತಾಯ ಮಾಡಿದ ಕಾರಣ. ವಾಹನಕ್ಕೆ ಓವರ್​​​ಲೋಡ್​​ ಆಗಿ ಅಪಘಾತವಾಗಿದೆ ಎಂದು ಹೇಳಲಾಗಿದೆ. ಈ ಅಪಘಾತದಿಂದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Video Viral: ಪ್ರಾಯೋಗಿಕ ಚಾಲನೆ ವೇಳೆ ಅಪಘಾತಗೊಂಡ ಇವಿ ವಾಹನ, ನಾಲ್ವರು ಸಾವು
Follow us
|

Updated on: Jan 11, 2024 | 10:58 AM

ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಯೋಗಿಕ ಚಾಲನೆ ವೇಳೆ ಎಲೆಕ್ಟ್ರಿಕ್ ವಾಹನ ಅಪಘಾತವಾಗಿದೆ. ಈ ಘಟನೆಯಲ್ಲಿ ಇಬ್ಬರು ಅರಣ್ಯ ರಕ್ಷಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಈ ಕಾರಿನಲ್ಲಿದ್ದ ಮಹಿಳಾ ವಾರ್ಡನ್ ನಾಪತ್ತೆಯಾಗಿದ್ದಾರೆ. ಈ ವಾಹನವನ್ನು ವೇಗವಾಗಿ ಓಡಿಸುವಂತೆ ಒತ್ತಾಯ ಮಾಡಿದ ಕಾರಣ. ವಾಹನಕ್ಕೆ ಓವರ್​​​ಲೋಡ್​​ ಆಗಿ ಅಪಘಾತವಾಗಿದೆ ಎಂದು ಹೇಳಲಾಗಿದೆ. ಈ ಅಪಘಾತದಿಂದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಜನವರಿ 8ರಂದು ನಡೆದಿದೆ. ಅಪಘಾತದ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್​​​ನಲ್ಲಿ ಇಡಲಾಗಿದ್ದ ಕ್ಯಾಮೆರಾದಲ್ಲಿ ಸೇರಿಯಾಗಿದೆ. ಈ ವಿಡಿಯೋವನ್ನು ಪಿಟಿಐ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸುರಕ್ಷತಾ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳುವುದನ್ನು ಕೇಳಬಹುದು ಮತ್ತು ಹಿಂಭಾಗದಲ್ಲಿರುವ ಜನರು ಕೆಳಗಿಳಿಯುವ ಎಂದು ಹೇಳುತ್ತಾರೆ. ಆದರೆ ವಾಹನ ಹಠಾತ್ ಜರ್ಕ್ ಹೊಡೆದು ವೇಗವನ್ನು ಹೆಚ್ಚಿಸಿದೆ. ಈ ಸಮಯದಲ್ಲಿ ವಾಹನ ಅಪಘಾತಗೊಂಡಿದೆ.

ಬೆಂಗಳೂರು ಮೂಲದ ಕಂಪನಿಯು ಪತ್ರಿಕಾ ಹೇಳಿಕೆ ಪ್ರಕಾರ ವಾಹನ ಪ್ರಯೋಗಿಕ ಚಾಲನೆ ವೇಳೆ ಸಂಭವಿಸಿದ ಅಪಘಾತದಿಂದ ತೀವ್ರ ದುಃಖವಾಗಿದೆ. ಅರಣ್ಯ ಅಧಿಕಾರಿಗಳು ತನ್ನನ್ನು ಓವರ್‌ಲೋಡ್ ಮಾಡಲು ಒತ್ತಾಯಿಸಿದರು ಮತ್ತು ವೇಗವನ್ನು ಹೆಚ್ಚಿಸುವಂತೆ ಹೇಳಿದ್ದಾರೆ ಎಂದು ವಾಹನ ಚಲಾಯಿಸುತ್ತಿದ್ದ ಬಿಇ ಮೆಕ್ಯಾನಿಕಲ್ ಇಂಜಿನಿಯರ್ ಅಶ್ಬಿನ್ ಬಿಜು ಅವರು ಹೇಳಿದ್ದಾರೆ. ಈ ಸಮಯದಲ್ಲಿ ಯಾವುದೇ ಮದ್ಯಪಾನ ಸೇವನೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ವ್ಯಕ್ತಿ

ಇದು ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ವೇಗವರ್ಧನೆಯು ಸಾಕಷ್ಟು ಹೆಚ್ಚಾಗಿರುತ್ತದೆ ಮತ್ತು ಇದು ಒಂದು ಸೆಕೆಂಡಿನ ಭಾಗದಲ್ಲಿ 70 ಕಿಮೀ ವೇಗವನ್ನು ತಲುಪಿತು ಹೇಳಿದರು. ಈ ವಾಹನ ಹೋಗಿರುವ ಪ್ರದೇಶದಲ್ಲಿ ಕೆಸರು ಮತ್ತು ಬಂಡೆಗಳಿದ್ದು, ಅಸ್ಥಿರವಾದ ರಸ್ತೆಗಳಿದ್ದ ಕಾರಣ ಟೈರ್ ಒಡೆದು ವಾಹನವು ಹಿಂಭಾಗದಿಂದ ನಿಯಂತ್ರಣವನ್ನು ಕಳೆದುಕೊಂಡಿದೆ. ರಸ್ತೆ ಮತ್ತು ನದಿಯ ನಡುವಿನ ಡಿವೈಡರ್​​​​​ಗೆ ಡಿಕ್ಕಿ ಹೊಡೆದು, ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ