ಗಂಡನಿಂದ ಮಕ್ಕಳನ್ನು ಮಾರಾಟ ಮಾಡಲು ವಿಫಲಯತ್ನ; ಐದು ದಿನದ ಹೆಣ್ಣು ಮಗು ಕರ್ಕೊಂಡು ಎಸ್ಪಿ ಕಚೇರಿಗೆ ಬಂದ ಬಾಣಂತಿ
ತನ್ನ ಗಂಡ ಎರಡು ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ವಿಫಲಯತ್ನ ಮಾಡಿದ್ದಾನೆ ಎಂದು ಆರೋಪಿಸಿದ ಬಾಣಂತಿ ಮಹಿಳೆಯೊಬ್ಬಳು ಐದು ದಿನದ ಹೆಣ್ಣು ಮಗುವನ್ನು ಕರೆದುಕೊಂಡು ಹಾವೇರಿ(Haveri) ಎಸ್ಪಿ ಕಚೇರಿಗೆ ಆಗಮಿಸಿದ ಘಟನೆ ನಡೆದಿದೆ.
ಹಾವೇರಿ, ಜ.06: ತನ್ನ ಗಂಡ ಎರಡು ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ವಿಫಲಯತ್ನ ಮಾಡಿದ್ದಾನೆ ಎಂದು ಆರೋಪಿಸಿದ ಬಾಣಂತಿ ಮಹಿಳೆಯೊಬ್ಬಳು ಐದು ದಿನದ ಹೆಣ್ಣು ಮಗುವನ್ನು ಕರೆದುಕೊಂಡು ಹಾವೇರಿ(Haveri) ಎಸ್ಪಿ ಕಚೇರಿಗೆ ಆಗಮಿಸಿದ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಬಾಣಂತಿ ಗೀತಾ ಹುಲ್ಲುರು ಎಂಬುವವರು ಆರು ವರ್ಷದ ಹಿಂದೆ ಬ್ಯಾಡಗಿಯ ಸಿದ್ದಲಿಂಗಪ್ಪ ಎಂಬ ಯುವಕನ ಜೊತೆ ವಿವಾಹವಾಗಿದ್ದರು. ಇದೀಗ ತನ್ನ ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ, ಗಂಡ ಸಿದ್ದಲಿಂಗಪ್ಪನ ವಿರುದ್ಧ ದೂರು ನೀಡಲು ಎಸ್ಪಿ ಕಛೇರಿಗೆ ಆಗಮಿಸಿದ್ದಾರೆ.
ಕಿಡ್ನಾಫ್ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಇನ್ನು ಮಂಗಳವಾರ ದಾಖಲಾದ ಕಿಡ್ನಾಫ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಠಾಣೆಯಲ್ಲಿ ನಾಲ್ಕು ವರ್ಷದ ಮಗಳನ್ನು ಕಿಡ್ನಾಫ್ ಮಾಡಿದ್ದಾರೆ ಸಿದ್ದಲಿಂಗಪ್ಪ ದೂರು ನೀಡಿದ್ದರು. ಸಿದ್ದಲಿಂಗಪ್ಪನ ದೂರಿನ ಮೇಲೆ ಇಬ್ಬರನ್ನು ಬ್ಯಾಡಗಿ ಪೊಲೀಸರು ಬಂಧನ ಮಾಡಿದ್ದರು. ಆದರೆ, ಈ ಪ್ರಕರಣಕ್ಕೆ ಇದೀಗ ಅಚ್ಚರಿ ಎಂಬಂತೆ ಆತನ ಪತ್ನಿಯೇ ಪ್ರತಿ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ಹಾವೇರಿ: ಕಳ್ಳತನವಾದ ನವಜಾತ ಶಿಶು ಎರಡು ದಿನದ ಬಳಿಕ ಹೆತ್ತಮ್ಮನ ಮಡಿಲಿಗೆ; ಏನಿದು ಅಂತೀರಾ? ಈ ಸ್ಟೋರಿ ನೋಡಿ
ಇನ್ನು ಕಳೆದ ಮಾರ್ಚನಲ್ಲಿ ಬ್ಯಾಡಗಿ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬುವವರ ಮಗು ಹೆರಿಗೆ ಆದ ಕೆಲವೇ ಗಂಟೆಯಲ್ಲಿ ನರ್ಸ್ ಸೂಗಿನಲ್ಲಿ ಬಂದ ಮಹಿಳೆಯೊಬ್ಬರು ಪ್ಲಾನ್ ಮಾಡಿ ಮಗುವನ್ನು ಕಿಡ್ನಾಪ್ ಮಾಡಿದ್ದರು. ಬಳಿಕ ಮಗು ಕಳ್ಳತನವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಗುವಿನ ತಂದೆ ಹಾಗೂ ಅಜ್ಜ ಎಲ್ಲರೂ ಆಸ್ಪತ್ರೆ ಬಳಿ ದೌಡಾಯಿಸಿದ್ದರು. ಕೂಡಲೇ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದು, ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇನ್ನು ವಿಷಯ ತಿಳಿದ ಖರ್ತನಾಕ ಮಹಿಳೆ ಮಗುವನ್ನ ಪೊಲೀಸ್ ಠಾಣೆಗೆ ಒಪ್ಪಿಸಿದ್ದಳು. ತನಗೆ ಮದುವೆ ಆಗಿ ಐದು ವರ್ಷ ಕಳೆದರೂ ಮಗು ಇಲ್ಲ ಎಂದು ಚಿಂತೆ ಇದ್ದ ಹಿನ್ನಲೆ. ಮಾನಸಿಕವಾಗಿ ನಾನು ಮಗುವನ್ನ ಕದ್ದೆ ಎಂದಿದ್ದಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Sat, 6 January 24