AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಕಳ್ಳತನವಾದ ನವಜಾತ ಶಿಶು ಎರಡು ದಿನದ ಬಳಿಕ ಹೆತ್ತಮ್ಮನ ಮಡಿಲಿಗೆ; ಏನಿದು ಅಂತೀರಾ? ಈ ಸ್ಟೋರಿ ನೋಡಿ

ಮಗು ಜನಿಸಿತು ಎಂದು ಸಂತೋಷವಾಗಿದ್ದ ಪೋಷಕರು. ತಮ್ಮ ದೂರದೂರಿನ ಪರಿವಾರಕ್ಕೆ ವಿಷಯ ತಿಳಿಸಿ ಪುಲ್ ಖುಷ್ ಆಗಿದ್ದರು. ಹೀಗೆ ಸಂತೋಷವಾಗಿದ್ದ ಆ ಕುಟುಂಬಕ್ಕೆ ನರ್ಸ್ ಸೂಗಿನ ಮಹಿಳೆ ಆಡಿದ ಆಟಕ್ಕೆ ಇಡೀ ಪರಿವಾರವೇ ಕಣ್ಣಿರು ಹಾಕಿತ್ತು. ಏನಿದು ಅಂತೀರಾ ಈ ಸ್ಟೋರಿ ನೋಡಿ.

ಹಾವೇರಿ: ಕಳ್ಳತನವಾದ ನವಜಾತ ಶಿಶು ಎರಡು ದಿನದ ಬಳಿಕ ಹೆತ್ತಮ್ಮನ ಮಡಿಲಿಗೆ; ಏನಿದು ಅಂತೀರಾ? ಈ ಸ್ಟೋರಿ ನೋಡಿ
ಕಳ್ಳತನವಾದ ಮಗು ಎರಡು ದಿನದ ಬಳಿಕ ಹೆತ್ತಮ್ಮನ ಮಡಿಲು ಸೇರಿತು
ಕಿರಣ್ ಹನುಮಂತ್​ ಮಾದಾರ್
|

Updated on: Mar 12, 2023 | 8:31 PM

Share

ಹಾವೇರಿ: ಹೀಗೆ ಆಸ್ಪತ್ರೆ ಮುಂದೆ ಕಣ್ಣಿರು ಹಾಕುತ್ತಿರುವ ನವಜಾತ ಶಿಶುವಿನ ಪರಿವಾರ. ಮತ್ತೊಂದೆಡೆ ಮಹಿಳಾ ಮತ್ತು ಮಕ್ಕಳ ಜಿಲ್ಲಾಸ್ಪತ್ರೆಗೆ ದೌಡಾಯಿಸಿ ತನಿಖೆ ಮಾಡುತ್ತಿರುವ ಖಾಕಿ ಪಡೆ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ. ಹೌದು ಬ್ಯಾಡಗಿ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ. ಹಾವೇರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು‌‌. ಇನ್ನು ದಾಖಲು ಮಾಡಿದ್ದ ಗರ್ಭಿಣಿ ಮಹಿಳೆ ರಂಜಿತಾ ಕುಂಬಾರ ಕೆಲವೇ ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನಿಸಿತೆಂದು ಖುಷಿಯಾಗಿದ್ದ ಪರಿವಾರಕ್ಕೆ ನರ್ಸ್ ಸೂಗಿನ ಓರ್ವ ಮಹಿಳೆ ಜನಿಸಿದ ಮಗುವಿಗೆ ಚಿಕಿತ್ಸೆ ನೀಡಬೇಕು‌‌. ಇದನ್ನ ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಬನ್ನಿ ಎಂದು ಮಗುವಿನ ಅಜ್ಜಿ ರೇಣುಕಮ್ಮಾಗೆ ಹೇಳಿದ್ದಾಳೆ. ಬಳಿಕ ವಾಹನದ ಮೂಲಕ ನಗರದ ವಿವಿಧ ಖಾಸಗಿ ಆಸ್ಪತ್ರೆಗೆ ನರ್ಸ್ ಸೂಗಿನ ಮಹಿಳೆ ಕರೆದುಕೊಂಡು ಸುತ್ತಾಡಿಸಿದ್ದಾಳೆ. ಬಳಿಕ ನರ್ಸ್ ಸೂಗಿನ ಮಹಿಳೆ ಪ್ಲಾ‌ನ್ ಮಾಡಿ ಅಜ್ಜಿ ರೇಣುಕಮ್ಮಾಗೆ ಹಣ್ಣು ತರುವಂತೆ ಸೂಚಿಸಿ ಮಗುವನ್ನ ಕಿಡ್ನಾಪ್ ಮಾಡಿದ್ದಾಳೆ.

ಇನ್ನು ಜನಿಸಿದ ಮಗು ಕಳ್ಳತನವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಗುವಿನ ತಂದೆ ಹಾಗೂ ಅಜ್ಜ ಎಲ್ಲರೂ ಆಸ್ಪತ್ರೆ ಬಳಿ ದೌಡಾಯಿಸಿದ್ದಾರೆ. ಕಳೆದ ಶುಕ್ರವಾರ ಸಾಯಂಕಾಲ ಹುಟ್ಟಿದ್ದ ನವಜಾತ ಮಗುವನ್ನ ಸಂತೋಷವಾಗಿ ಮುದ್ದಾಡಿದ ತಾಯಿಗೆ ಆಘಾತ ಉಂಟಾಗಿದೆ‌. ಮಗು ಜನಿಸಿದ ಸುದ್ದಿ ತಿಳಿದ ನರ್ಸ್ ಸೂಗಿನ ವೇಷದಾರಿ ಮಹಿಳೆ ಪೋಷಕರಿಗೆ ಯಾಮಾರಿಸಿ ಶನಿವಾರ ಸಂಜೆ ಮಗುವಿನ ಕಳ್ಳತನ ಮಾಡಿದ್ದಾಳೆ. ಈ ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ವಿಷಯ ತಿಳಿದ ಖರ್ತನಾಕ ಮಹಿಳೆ ಮಗುವನ್ನ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾಳೆ‌. ಮಗುವನ್ನ ಕದ್ದ ಮಹಿಳೆ ಹಾವೇರಿ ನಗರದ ಗೀತಾ ಮಾದರ್(26) ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹಾವೇರಿ: ಲಂಚ ಕೇಳಿದ ಪುರಸಭೆ ಅಧಿಕಾರಿಗೆ ಎತ್ತು, ಚಕ್ಕಡಿ ನೀಡಿದ ರೈತ

ಯಾಮಾರಿಸಿ ಮಗು ಕದ್ದ ಮಹಿಳೆ ಪೊಲೀಸರ ಮುಂದೆ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾಳೆ. ಮದುವೆ ಆಗಿ ಐದು ವರ್ಷ ಕಳೆದರೂ ಮಗು ಇಲ್ಲ ಎಂದು ಚಿಂತೆ ಇದ್ದ ಹಿನ್ನಲೆ. ಮಾನಸಿಕವಾಗಿ ನಾನು ಮಗುವನ್ನ ಕದ್ದೆ‌. ಆದರೆ ನಾನು ಮಗುವನ್ನು ಸಾಕಲು ತಗೊಂಡು ಹೋಗಿದ್ದೆ. ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಪೋಲಿಸರ ಮುಂದೆ ಮಹಿಳೆ ಗೀತಾ ಕಣ್ಣೀರು ಹಾಕಿದಳು. ಇನ್ನು ಇತ್ತ ಮಗು ಸಿಕ್ಕ ಖುಷಿಯಲ್ಲಿ ನವಜಾತ ಶಿಶುವಿನ ತಾತ ಹಾಗೂ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟಾರೆಯಾಗಿ ಮಗು ಜನಿಸಿದ ಪೋಷಕರಿಗೆ ನರ್ಸ್ ಸೂಗಿನ ಮಹಿಳೆ ಆಘಾತ ನೀಡಿದ್ದಳು. ಆದರೆ ಮಗು ಕದ್ದ ಆ ಮಹಿಳೆಗೆ ಮದುವೆಯಾಗಿ 5 ವರ್ಷವಾದರೂ ಮಗು ಆಗದ ಹಿನ್ನಲೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ‌. ಅದೇನೇ ಇರಲಿ ಎರಡು ದಿನಗಳ ಬಳಿಕ ಮತ್ತೆ ಮಗು ಕಂಡು ಪೋಷಕರು ಖುಷಿಯಾಗಿದ್ದಾರೆ. ಇತ್ತ ಹಸುಗೂಸು ಮತ್ತೆ ಹೆತ್ತಮ್ಮನ ಮಡಿಲು ಸೇರಿತಲ್ಲ ಎನ್ನುವುದು ಸಂತೋಷ.

ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ