AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಏಜ್ ಇಸ್ ಜಸ್ಟ್ ಎ ನಂಬರ್’; ಡಿಜೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ತಾತಪ್ಪ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹಿರಿ ಜೀವಗಳ ಕುರಿತ ಕೆಲವೊಂದು ವಿಡಿಯೋಗಳನ್ನು ನೋಡಿದಾಗ ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ ಎಂಬ ಮಾತು ಸತ್ಯ ಅಂತ ಅನ್ನಿಸುತ್ತೆ ಅಲ್ವಾ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಡಿ.ಜೆ ಹಾಡಿಗೆ ಇಳಿ ವಯಸ್ಸಿನಲ್ಲೂ ತಾತಪ್ಪ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ, ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಏಜ್ ಇಸ್ ಜಸ್ಟ್ ಎ ನಂಬರ್ ಅಂತಿದ್ದಾರೆ ನೆಟ್ಟಿಗರು.

Viral Video: 'ಏಜ್ ಇಸ್ ಜಸ್ಟ್ ಎ ನಂಬರ್'; ಡಿಜೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ತಾತಪ್ಪ
Viral Video
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on:Jan 12, 2024 | 2:53 PM

Share

ಏಜ್ ಇಸ್ ಎ ಜಸ್ಟ್ ನಂಬರ್… ದೇಹಕ್ಕಷ್ಟೇ ವಯಸ್ಸಾಗುವುದು ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ. ಇಳಿ ವಯಸ್ಸಿನಲ್ಲಿಯೂ ಜೀವನೋತ್ಸಾಹದಿಂದ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಹೀಗೆ ಇಳಿ ವಯಸ್ಸಿನಲ್ಲೂ ಸಖತ್ ಆಗಿ ನೃತ್ಯ ಮಾಡುವ, ಹಾಡು ಹಾಡು ಹಾಡುವ, ಯುವಕರಂತೆ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವ ಹಿರಿ ಜೀವಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ವಯಸ್ಸು 80 ದಾಟಿದ್ರೂ, ಡಿಜೆ ಹಾಡಿಗೆ ಯುವಕರನ್ನೇ ನಾಚಿಸುವಂತೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಮುಪ್ಪಾದರೂ ತಮ್ಮಲ್ಲಿರುವ ಜೀವನೋತ್ಸಾಹ ಬತ್ತಿಲ್ಲ ಎಂಬುದನ್ನು ತಾತಪ್ಪ ತೋರಿಸಿಕೊಟ್ಟಿದ್ದಾರೆ.

ಈ ವಿಡಿಯೋವನ್ನು ಅಜ್ಜು ರಾವತ್ (@ajjurawat725) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ವೃದ್ಧರೊಬ್ಬರು ಡಿ.ಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಓದು ಬರಹ ಗೊತ್ತಿಲ್ದಿದ್ರೆ ಏನಂತೆ, ತಿಂಗಳಿಗೆ 30 ರಿಂದ 40 ಸಾವಿರ ದುಡಿತೀನಿ! ಇಲ್ಲಿದೆ ನೋಡಿ ವಿಡಿಯೋ

ದೇಹಕ್ಕಷ್ಟೇ ವಯಸ್ಸಾಗುವುದು ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ ಎಂಬ ಮಾತಿನಂತೆ ಈ ವೈರಲ್ ವಿಡಿಯೋದಲ್ಲಿ ಯಾವುದೋ ಪಾರ್ಟಿಯಲ್ಲಿ ವೃದ್ಧರೊಬ್ಬರು ಡಿ.ಜೆ ಹಾಡಿಗೆ ಯುವಕರನ್ನೇ ನಾಚಿಸುವಂತೆ ಭರ್ಜರಿಯಾಗಿ ಹಿಪ್-ಹಾಪ್ ಸ್ಟೈಲ್ ಅಲ್ಲಿ ಡಾನ್ಸ್ ಮಾಡಿದ್ದಾರೆ, ಇವರ ಈ ಉತ್ಸಾಹವನ್ನು ಕಂಡು ಕೊನೆಯಲ್ಲಿ ಒಂದಷ್ಟು ಯುವಕರು ಸಹ ತಾತಪ್ಪನ ಜೊತೆ ಹೆಜ್ಜೆ ಹಾಕುವಂತಹ ಸುಂದರವಾದ ದೃಶ್ಯವನ್ನು ಕಾಣಬಹುದು.

ಡಿಸೆಂಬರ್ 07 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದಪ್ಪಾ ಹಿಪ್-ಹಾಪ್ ಡಾನ್ಸ್ ಅಂದ್ರೆʼ ಅಂತ ತಾತಪ್ಪನ ನೃತ್ಯಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವೃದ್ಧಾಪ್ಯದಲ್ಲೂ ಇವರಿಗಿರುವ ಜೀವನೋತ್ಸಾಹವನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಏಜ್ ಇಸ್ ಎ ಜಸ್ಟ್ ನಂಬರ್ ಅಂತ ಕಮೆಂಟ್ ಮಾಡುವ ಮೂಲಕ ತಾತಪ್ಪನ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Fri, 12 January 24