Viral Video: ಓದು ಬರಹ ಗೊತ್ತಿಲ್ದಿದ್ರೆ ಏನಂತೆ, ತಿಂಗಳಿಗೆ 30 ರಿಂದ 40 ಸಾವಿರ ದುಡಿತೀನಿ! ಇಲ್ಲಿದೆ ನೋಡಿ ವಿಡಿಯೋ

ಅಯ್ಯೋ ಏನಿದು… ಇಷ್ಟೆಲ್ಲಾ ಎಜುಕೇಶನ್ ಪಡೆದ್ರೂ, ಒಂದೊಳ್ಳೆ ಸಂಬಳ ಸಿಗುವ ಕೆಲಸ ಮಾತ್ರ ಸಿಕ್ತಾನೇ ಇಲ್ಲಲ್ವಾ ಅಂತ ಅನೇಕರು ಆಗಾಗ್ಗೆ ಹೇಳ್ತಾನೇ ಇರ್ತಾರೆ. ಆದ್ರೆ ಇಲ್ಲೊಬ್ರು ಸ್ಟ್ರೀಟ್ ಫುಡ್ ವ್ಯಾಪಾರಿ, ನನಗೆ ಓದು ಬರಹ ಏನು ಗೊತ್ತಿಲ್ಲ, ಆದ್ರೂ ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಗಳಷ್ಟು ಸಂಪಾದನೆ ಮಾಡುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ ಅಂತ ಹೇಳಿದ್ದಾರೆ. ಇವರ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Viral Video: ಓದು ಬರಹ ಗೊತ್ತಿಲ್ದಿದ್ರೆ ಏನಂತೆ,  ತಿಂಗಳಿಗೆ 30 ರಿಂದ 40 ಸಾವಿರ ದುಡಿತೀನಿ! ಇಲ್ಲಿದೆ ನೋಡಿ ವಿಡಿಯೋ
Follow us
| Updated By: ಅಕ್ಷತಾ ವರ್ಕಾಡಿ

Updated on: Jan 11, 2024 | 6:01 PM

ನಾವೆಲ್ಲರೂ ಶಾಲೆಗೆ ಹೋಗುವ ಸಂದರ್ಭದಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದ್ರೆ ಮಾತ್ರ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗವನ್ನು ಪಡೆದು, ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಸಾಧ್ಯ ಎಂದು ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಕೇಳಿರುತ್ತೇವೆ ಅಲ್ವಾ. ಆದ್ರೆ ಉತ್ತಮ ವಿದ್ಯಾಭ್ಯಾಸ ಪಡೆದ್ರೂ ಕೂಡಾ ಅದೆಷ್ಟೋ ಜನರಿಗೆ ಇಂದಿಗೂ ಕೈ ತುಂಬಾ ಸಂಬಳ ಸಿಗುವ ಉದ್ಯೋಗ ಮಾತ್ರ ಸಿಕ್ಕಿಲ್ಲ. ನಮಗೆ ವಿದ್ಯೆ ಎಷ್ಟು ಮುಖ್ಯವೋ, ಜೀವನ ನಡೆಸುವ ಕೌಶಲ್ಯವೂ ಅಷ್ಟೇ ಮುಖ್ಯ. ಹೌದು ಇಂದು ಒಳ್ಳೆಯ ವಿದ್ಯಾಭ್ಯಾಸ ಪಡೆದು ತಿಂಗಳಿಗೆ 15 ರಿಂದ 20 ಸಾವಿರ ಸಂಬಳ ಪಡೆಯುವವರ ಮಧ್ಯೆ ಇಲ್ಲೊಬ್ರು ಸ್ಟ್ರೀಟ್ ಫುಡ್ ವ್ಯಾಪಾರಿ, ನನಗೆ ಓದು ಬರಹ ಏನು ಗೊತ್ತಿಲ್ಲ, ಆದ್ರೂ ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಸಂಪಾದನೆ ಮಾಡಿ ನೆಮ್ಮದಿಯ ಜೀನವ ನಡೆಸುತ್ತಿದ್ದೇನೆ ಅಂತ ಹೇಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇವರ ಸಂಪಾದನೆಯ ಬಗ್ಗೆ ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಈ ವಿಡಿಯೋವನ್ನು RVCJ Media ಎಂಬ X ಖಾತೆಯಲ್ಲಿ ಹಂಚಿಕೊಳ್ಳಾಗಿದ್ದು, ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು, ಓದು ಬರಹ ಗೊತ್ತಿಲ್ಲದಿದ್ರೂ ತಿಂಗಳಿಗೆ ಉತ್ತಮವಾಗಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅರೇ ಏನಿದು ಆಮೆಯೂ ಇಷ್ಟು ವೇಗವಾಗಿ ಓಡುತ್ತಾ?

ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ ಏನಾದ್ರೂ ತಿನ್ನೋನಾ ಅಂತ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರ ಬಳಿ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ಆ ವ್ಯಾಪಾರಿ ಇದು ಅಮೂಲ್ ಬ್ರಾಂಡಿನ ಬೆಣ್ಣೆ ಅಲ್ವಾ ಅಂತ ಕೇಳುತ್ತಾರೆ. ಅದಕ್ಕೆ ಆ ಯುವಕ ಹೌದು ಎಂದು ಉತ್ತರಿಸುತ್ತಾನೆ. ಬಳಿಕ ಆ ವ್ಯಾಪಾರಿ ನನಗೆ ಓದು ಬರಹ ಗೊತ್ತಿಲ್ಲ, ಆದ್ರೆ ನನ್ನ ಈ ವ್ಯಾಪಾರದಿಂದ ತಿಂಗಳಿಗೆ 30 ರಿಂದ 40 ಸಾವಿರ ಗಳಷ್ಟು ಸಂಪಾದನೆ ಮಾಡ್ತಿದ್ದೇನೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಜನವರಿ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನೂ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರ ಮಾತು ನೂರಕ್ಕೆ ನೂರು ಸತ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಆ ಬೀದಿ ಬದಿಯ ವ್ಯಾಪಾರಿಯ ಸಂಪಾದನೆಯನ್ನು ಕೇಳಿ ಶಾಕ್ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ