Viral Video: ನೀವೇನಾದ್ರೂ ಟ್ರೈ ಮಾಡ್ತೀರಾ ಬಿಯರ್ ಬಜ್ಜಿ; ವಿಡಿಯೋ ವೈರಲ್
ಸಂಜೆ ಟೀ ಕಾಫಿ ಸಮಯದಲ್ಲಿ ಗರಿಗರಿಯಾದ ಬಜ್ಜಿಯನ್ನು ತಿನ್ನುವ ಮಜಾನೇ ಬೇರೆ. ಅದರಲ್ಲೂ ಈರುಳ್ಳಿ ಬಜ್ಜಿ, ಮೆಣಸಿನಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ ಬಹುತೇಕ ಎಲ್ಲರ ಫೇವರೇಟ್ ಅಂತಾನೇ ಹೇಳ್ಬೋದು. ನೀವು ಕೂಡಾ ಹಲವು ವೆರೈಟಿಯ ಬಜ್ಜಿಗಳನ್ನು ತಿಂದಿರ್ತೀರಾ ಅಲ್ವಾ. ಆದ್ರೆ ನೀವು ಯಾವತ್ತಾದ್ರೂ ಬಿಯರ್ ಬಜ್ಜಿಯನ್ನು ತಿಂದಿದ್ದೀರಾ? ಅರೇ ಏನಿದು ಬಿಯರ್ ಬಜ್ಜಿನಾ… ಅದು ಹೇಗೆ ಬಿಯರ್ ನಿಂದ ಬಜ್ಜಿ ತಯಾರಿಸಲು ಸಾಧ್ಯ ಅಂತ ಯೋಚ್ನೆ ಮಾಡ್ತಿದ್ದೀರಾ, ಹಾಗಿದ್ರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.
ಇತ್ತೀಚಿನ ದಿಗಳಲ್ಲಿ ಅನೇಕ ವಿಯರ್ಡ್ ಫುಡ್ ಕಾಂಬಿನೇಶನ್ ಕುರಿತ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪಾವ್ ಭಾಜಿ ಐಸ್ ಕ್ರೀಮ್ ಅಂತೆ, ಫಾಂಟಾ ಆಮ್ಲೆಟ್, ಗುಲಾಬ್ ಜಾಮೂನ್ ದೋಸೆ, ಹಸಿ ಮೆಣಸಿನಕಾಯಿ ಐಸ್ ಕ್ರೀಮ್, ಓರಿಯೋ ಬಿಸ್ಕೆಟ್ ಪಕೋಡಾ, ಚಾಕೊಲೇಟ್ ನೂಡನ್ಸ್ ಅಂತೆ… ಹೀಗೆ ಒಂದಾ ಎರಡಾ ಹಲವಾರು ವಿಯರ್ಡ್ ಫುಡ್ ಕಾಂಬಿನೇಶನ್ ಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬರು ಬಿಯರ್ ಬಜ್ಜಿಯನ್ನು ತಯಾರಿಸಿದ್ದಾರೆ. ಅರೇ ಏನಿದು ಬೀಯರ್ ಬಜ್ಜಿನಾ… ಅದು ಹೇಗೆ ಬಿಯರ್ ನಿಂದ ಬಜ್ಜಿ ತಯಾರಿಸಲು ಸಾಧ್ಯ ಅಂತ ಯೋಚ್ನೆ ಮಾಡ್ತಿದ್ದೀರಾ, ಹಾಗಿದ್ರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.
ವ್ಲಾಗರ್ ಸತೀಶ್ ಕುಮಾರ್ (@satheeshvr) ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಸತೀಶ್ ಕುಮಾರ್ ಅವರು ಬೀಯರ್ ಅನ್ನು ಬಳಸಿಕೊಂಡು ಯಾವ ರೀತಿ ಬಾಳೆ ಹಣ್ಣಿನ ಬಜ್ಜಿಯನ್ನು ತಯಾರಿಸಿದ್ದಾರೆ ಎಂಬುದನ್ನು ಕಾಣಬಹುದು.
View this post on Instagram
ವೈರಲ್ ವಿಡಿಯೋದಲ್ಲಿ, ಸತೀಶ್ ಅವರು, ನಾವಿವತ್ತು ಬಿಯರ್ ಬಜ್ಜಿಯನ್ನು ಮಾಡೋಣ ಅಂತ ಹೇಳಿ, ಒಂದು ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ ಸಲ್ವ ಬೀಯರ್ ಸುರಿದು, ಅದೇ ಪಾತ್ರೆಗೆ ಸ್ವಲ ಮೈದಾ ಹಿಟ್ಟು, ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಜ್ಜಿ ಹಿಟ್ಟನ್ನು ತಯಾರಿಸಿಕೊಳ್ಳುತ್ತಾರೆ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಉದ್ದುದ್ದವಾಗಿ ಕತ್ತಿರಿಸಿಟ್ಟ ಬಾಳೆ ಹಣ್ಣನ್ನು ತೆಗೆದುಕಂಡು, ಮೊದಲಿಗೆ ಅದನ್ನು ಮೈದಾ ಹಿಟ್ಟಿನಲ್ಲಿ ಒಂದು ಬಾರಿ ಕೋಟಿಂಗ್ ಮಾಡಿ, ನಂತರ ಬಿಯರ್ ಬೆರೆಸಿ ತಯಾರಿಸಿದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಬಿಯರ್ ಬಜ್ಜಿ ತಯಾರಿಸುವ ದೃಶ್ಯನ್ನು ಕಾಣಬಹುದು.
ಇದನ್ನೂ ಓದಿ: ‘ಏಜ್ ಇಸ್ ಜಸ್ಟ್ ಎ ನಂಬರ್’; ಡಿಜೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ತಾತಪ್ಪ
ಜನವರಿ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ರೆಸಿಪಿಯನ್ನು ಯಾರು ಸಹ ಟ್ರೈ ಮಾಡೋಕೆ ಹೋಗಬೇಡಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ನಿಮಗೆ ಆಶ್ಚರ್ಯಕರವಾಗಿ ಕಾಣಬಹುದು, ಆದರೆ ವಿದೇಶಗಳಲ್ಲಿ ಕೆಲವೊಂದು ಆಹಾರಗಳು ಚೆನ್ನಾಗಿ ಉಬ್ಬಿ ಬರಲು ಹಿಟ್ಟಿಗೆ ಬೀಯರ್ ಅಥವಾ ಫಿಜ್ಜಿ ಪಾನೀಯವನ್ನು ಸೇರಿಸುತ್ತಾರೆʼ ಎಂದು ಹೇಳಿದ್ದಾರೆ. ಹಾಗೂ ಹಲವರು ಇದನ್ನು ತಿಂದು ಹೊಟ್ಟೆ ಕೆಟ್ಟಿಲ್ಲ ತಾನೆ ಅಂತ ಗೇಲಿ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ