AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಸುವಿನೊಂದಿಗೆ ಅಂಬೆಗಾಲಿಡುವ ಮುದ್ದಾದ ಮಗುವಿನ ಸಂಭಾಷಣೆ, ನೆಟ್ಟಿಗರ ಹೃದಯ ಮುಟ್ಟಿತು ಈ ದೃಶ್ಯ!

ಸೋಶಿಯಲ್ ಮೀಡಿಯಾ ಜಗತ್ತು ಬಹಳಷ್ಟು ವಿಸ್ತಾರವಾಗಿದೆ. ಹೀಗಾಗಿ ದಿನಬೆಳಗಾದರೆ ನೆಟ್ಟಿಗರ ಗಮನ ಸೆಳೆಯುವ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುವುದು ಮಾಮೂಲಿಯಾಗಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಭಯ ಹುಟ್ಟಿಸಿದರೆ, ಕೆಲ ವಿಡಿಯೋ ನಗು ತರಿಸುತ್ತದೆ. ಇನ್ನು ಕೆಲವು ವಿಡಿಯೋಗಳಂತು ಹೃದಯವನ್ನು ಮುಟ್ಟುತ್ತವೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಅಂಬೆಗಾಲಿಡುವ ಮಗುವೊಂದು ಹಸುವಿನೊಂದಿಗೆ ಆಟವಾಡುತ್ತಿದ್ದು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

Viral Video: ಹಸುವಿನೊಂದಿಗೆ ಅಂಬೆಗಾಲಿಡುವ ಮುದ್ದಾದ ಮಗುವಿನ ಸಂಭಾಷಣೆ, ನೆಟ್ಟಿಗರ ಹೃದಯ ಮುಟ್ಟಿತು ಈ ದೃಶ್ಯ!
Viral Video
ಸಾಯಿನಂದಾ
| Edited By: |

Updated on:Feb 03, 2024 | 5:46 PM

Share

ಮೂಕಪ್ರಾಣಿಗಳ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಮಾತು ಬಾರದ ಪ್ರಾಣಿಗಳು ಮನುಷ್ಯನ ಮೇಲೆ ವಿಶೇಷವಾದ ಪ್ರೀತಿಯನ್ನು ತೋರಿಸುತ್ತದೆ. ಕೆಲವೊಮ್ಮೆ ಈ ಮೂಕ ಪ್ರಾಣಿಗಳ ಮೇಲೆ ಕೂಡ ತಮ್ಮ ಕೋಪವನ್ನು ತೋರಿಸುತ್ತೇವೆ. ಕೆಲವೊಮ್ಮೆ ಕೋಪದಲ್ಲಿ ಬೈಯುವುದಿದೆ, ಹೊಡೆಯುವುದಿದೆ. ಅದೇನೇ ಆದರೂ ಈ ಮುಗ್ಧ ಜೀವಿಗಳು ಮಾತ್ರ ಮನೆಯವರನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ.

ಮನೆಯಲ್ಲಿರುವ ಮಕ್ಕಳ ಜೊತೆಗೆ ಈ ಮೂಕ ಜೀವಿಗಳು ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತವೆ. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಈ ಸಾಕು ಪ್ರಾಣಿಗಳ ಜೊತೆಗೆ ಕಳೆಯುವುದಿದೆ. ಮೂಕ ಪ್ರಾಣಿಗಳ ಜೊತೆಗಿರುವ ಮಕ್ಕಳ ತುಂಟಾಟದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯದಲ್ಲಿ ಅಂಬೆಗಾಲಿಡುತ್ತಿರುವ ಮಗುವೊಂದು ಹಸುವಿನೊಂದಿಗೆ ಸಂಭಾಷಣೆ ನಡೆಸಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Jaynti l (@gopalak_jay)

ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಂಬೆಗಾಲುಡುತ್ತಿರುವ ಪುಟ್ಟ ಮಗುವೊಂದು ಹಸುವಿನ ಜೊತೆಗೆ ಆಟ ಆಡುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಹಸುವಿನ ಪಕ್ಕದಲ್ಲಿ ಕುಳಿತುಕೊಂಡಿದೆ. ಮೂಕ ಪ್ರಾಣಿಯು ಹಸುವು ತನ್ನ ಪ್ರೀತಿಯನ್ನು ಮಗುವನ್ನು ಮುದ್ದಿಸುವ ಮೂಲಕ ತೋರಿಸುತ್ತಿದೆ. ಹಸುವು ಮಗುವನ್ನು ಮುದ್ದಾಡುತ್ತಿದ್ದಂತೆ ಮಗು ಸ್ವಚಂದ ಮನಸ್ಸಿನಿಂದ ಜೋರಾಗಿಯೇ ನಗುತ್ತಿದೆ. ಈ ಎರಡು ಮುಗ್ಧ ಮನಸ್ಸುಗಳ ಮುದ್ದಾದ ಸಂಭಾಷಣೆಯ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. @gopalak_jay ಎನ್ನುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೂಕ ಪ್ರಾಣಿ ಹಸು ಹಾಗೂ ಅಂಬೆಗಾಲಿಡುವ ನಡುವಿನ ಮುಗ್ಧ ಪ್ರೀತಿಯ ಸಂಭಾಷಣೆಯು ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಇದನ್ನೂ ಓದಿ: ಬ್ಯಾಂಕ್​​​ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ, 294,000 ಲೈಕ್‌ಗಳನ್ನು ಬಂದಿದ್ದು, ನೆಟ್ಟಿಗರು ಮೆಚ್ಚಿಕೊಂಡು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು “ಇದು ತುಂಬಾ ಮೂಡ್ ಲಿಫ್ಟಿಂಗ್ ಆಗಿದೆ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, “OMG, ಇದು ತುಂಬಾ ಮುದ್ದಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ತುಂಬಾ ಮುದ್ದಾಗಿದೆ! ಸುಂದರ ಸಂಬಂಧ.” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:37 pm, Sat, 3 February 24

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು