Viral Video : ಸೀಲಿಂಗ್ ಫ್ಯಾನ್ ಮೇಲೆ ಸುರುಳಿ ಸುತ್ತಿ ಕುಳಿತ ನಾಗರಹಾವು, ನೆಟ್ಟಿಗರಲ್ಲಿ ನಡುಕ ಹುಟ್ಟಿಸಿದ ದೃಶ್ಯ
ಸೋಶಿಯಲ್ ಮೀಡಿಯಾದಲ್ಲಿ ಮನೋರಂಜನೆಯ ವಿಡಿಯೋದ ಜೊತೆಗೆ ಭಯ ಹುಟ್ಟಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವೊಮ್ಮೆ ಹಾವುಗಳ ವಿಡಿಯೋಗಳನ್ನು ನೋಡಿದ ಎದೆ ಒಂದು ಕ್ಷಣ ಝಲ್ ಎನ್ನುತ್ತದೆ. ಈ ನಾಗರಹಾವುಗಳುಗಳು ಮನೆಯೊಳಗೆ ಆಗಾಗ ಕಾಣಿಸಿಕೊಳ್ಳುತ್ತವೆ. ಅದಲ್ಲದೇ, ಮನೆಯೊಳಗಿನ ಮೂಲೆಯಲ್ಲಿ, ಹೆಲ್ಮೆಡ್ ಹಾಗೂ ಶೂಯೊಳಗೆ ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಸೀಲಿಂಗ್ ಫ್ಯಾನ್‌ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿದೆ. ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಭಯಭೀತರಾಗಿದ್ದಾರೆ.

ಹಾವುಗಳೆಂದರೆ ಎಲ್ಲರಿಗೂ ಭಯನೇ. ಎಷ್ಟೇ ಧೈರ್ಯವಂತರಾಗಿದ್ದರೂ ಹಾವನ್ನು ಕಂಡೊಡನೆ ಒಂದು ಮೈಲಿ ದೂರ ಓಡಿಬಿಡುತ್ತಾರೆ. ಆದರೆ ಉರಗ ಪ್ರೇಮಿಗಳು ಮಾತ್ರ ಈ ಹಾವುಗಳನ್ನು ಕಂಡಾಗ ಭಯ ಪಡದೇ ಅವುಗಳನ್ನು ಸಲೀಸಾಗಿ ಹಿಡಿಯುತ್ತಾರೆ. ಸಾಮಾನ್ಯರು ಆಗಲ್ಲ, ವಿಷಕಾರಿಯಾಗಿರುವ ಹಾವಿನ ಸಹವಾಸವೇ ಬೇಡ ಎಂದು ದೂರ ಸರಿಯುವುದೇ ಹೆಚ್ಚು. ಆದರೆ ಇತ್ತೀಚೆಗಿನ ದಿನಗಳಲ್ಲಿ ನಗರ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದುವುದು ಹೆಚ್ಚಾಗಿದೆ. ಆಗಾಗ ಹಾವುಗಳು ಮನೆಯೊಳಗೆ ಕಾಣಿಸಿಕೊಂಡು ಜನರನ್ನು ಭಯಹುಟ್ಟಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮನೆಯೊಳಗೇ ಕಾಣಿಸಿಕೊಳ್ಳುವ ಹಾವುಗಳ ವಿಡಿಯೋಗಳು ವೈರಲ್ ಆಗಿ ನೆಟ್ಟಿಗರನ್ನು ಭಯ ಹುಟ್ಟಿಸುತ್ತದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಗರ ಹಾವೊಂದು ಮನೆಯ ಸೀಲಿಂಗ್ ಫ್ಯಾನ್‌ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿರುವುದು ಮೈ ಜುಮ್ಮ್ ಎನಿಸುವಂತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆಟ್ಟು ಹೋದ ಹಳೆಯ ಸೀಲಿಂಗ್ ಫ್ಯಾನ್ ಮೇಲೆ ಹಾವು ಹೋಗಿದೆ. ಹಾವು ಸೀಲಿಂಗ್ ಫ್ಯಾನ್ ಮೇಲೆ ಹೋಗುತ್ತಿದ್ದಂತೆ ಫ್ಯಾನ್ ತಿರುಗಲು ಪ್ರಾರಂಭಿಸಿದೆ. ಈ ವೇಳೆ ಎಡೆ ಎತ್ತಿದ ಈ ನಾಗರಹಾವು ಫ್ಯಾನಿನ ಮೇಲೆ ಸುರುಳಿ ಸುತ್ತಿಕೊಂಡು ಕುಳಿತುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಬ್ಯಾಂಕ್ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋವನ್ನು ಚಂದ್ರಶೇಖರನ್ 6102 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಈ ವಿಡಿಯೋ ನೋಡುತ್ತಿದ್ದಂತೆ ಭಯಭೀತರಾಗಿದ್ದಾರೆ..ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಯನ್ನೇ ಗೈದಿದ್ದಾರೆ. ಕಾಮೆಂಟ್ ಸೆಕ್ಷನ್ ನಲ್ಲಿ ಕೆಲವರು ನಾಗಪ್ಪನಿಗೆ ಭಕ್ತಿಯಿಂದ ನಮಸ್ಕರಿಸಿದರೆ, ಇನ್ನು ಕೆಲವರು ಭಯ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




