Village of Bachelors: ಹೆಣ್ಣಿನ ಕುರುಹು ಕಾಣದ ವಿಚಿತ್ರ ಗ್ರಾಮವಿದು; ಏನಿದು ‘ವರ್ಜಿನ್ ವಿಲೇಜ್’?
ಈ ಗ್ರಾಮದಲ್ಲಿ ನೀವು ಎಷ್ಟೇ ಸುತ್ತಾಡಿದರೂ ಕೂಡ ಒಂದೇ ಒಂದು ಹೆಣ್ಣಿನ ಸುಳಿವು ಸಿಗಲ್ಲ. ಬರೀ ಪುರುಷರೇ ತುಂಬಿರುವ ಈ ಗ್ರಾಮವನ್ನು ‘ವರ್ಜಿನ್ ವಿಲೇಜ್’ ಎಂದು ಕರೆಯುತ್ತಾರೆ. ಈ ಗ್ರಾಮದ ಗಂಡಸರನ್ನು ಮದುವೆಯಾಗಲು ಒಬ್ಬ ಮಹಿಳೆಯೂ ಮುಂದೆ ಬರದಿರಲು ಕಾರಣ ಏನು ಗೊತ್ತಾ?
ಬಿಹಾರದ ಹಳ್ಳಿಯೊಂದರಲ್ಲಿ ಬರೀ ಗಂಡಸರೇ ವಾಸವಾಗಿದ್ದಾರೆ.ಕಳೆದ 50 ವರ್ಷಗಳಿಂದ ಈ ಗ್ರಾಮದ ಗಂಡಸರನ್ನು ಮದುವೆಯಾಗಲು ಒಂದು ಮಹಿಳೆಯೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಈ ಗ್ರಾಮದ ಪುರುಷರು ಅವಿವಾಹಿತರಾಗಿ ಉಳಿದಿದ್ದಾರೆ. ಅದಕ್ಕಾಗಿಯೇ ಈ ಗ್ರಾಮವನ್ನು ‘ವರ್ಜಿನ್ ವಿಲೇಜ್’ ಎಂದು ಕರೆಯುತ್ತಾರೆ. ಇದು ನಿಮಗೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದೇ ಸತ್ಯ. ಈ ಗ್ರಾಮದ ಗಂಡಸರನ್ನು ಮದುವೆಯಾಗಲು ಒಬ್ಬ ಮಹಿಳೆಯೂ ಮುಂದೆ ಬರದಿರಲು ಕಾರಣ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬರ್ವಾನ್ ಕಲಾ ಗ್ರಾಮದಲ್ಲಿ ಮಹಿಳೆಯರ ವಾಸ ಯಾಕಿಲ್ಲ?
ಬರ್ವಾನ್ ಕಲಾ ಗ್ರಾಮವು ಬಿಹಾರದ ರಾಜಧಾನಿ ಪಾಟ್ನಾದಿಂದ 300 ಕಿ.ಮೀ ದೂರದಲ್ಲಿದ್ದು,ಕೈಮೂರ್ ಬೆಟ್ಟಗಳಲ್ಲಿದೆ.ಬೆಟ್ಟದ ತುದಿಗೆ ಹೋಗುವ ದಾರಿಯಲ್ಲಿ ಬಂಡೆಗಳು ಮತ್ತು ಕಾಡುಗಳ ಮೇಲೆ ಪ್ರಯಾಣಿಸಬೇಕು. ಆ ಗ್ರಾಮವನ್ನು ತಲುಪಲು ಒಂದೇ ಒಂದು ಮಾರ್ಗವಿದೆ. ಕನಿಷ್ಠ ಸೌಲಭ್ಯಗಳ ಕೊರತೆಯಿಂದ ಯಾವ ಮಹಿಳೆಯೂ ಆ ಪ್ರದೇಶಕ್ಕೆ ಹೋಗಲು ಬಯಸುವುದಿಲ್ಲ. ಅದಕ್ಕಾಗಿಯೇ ಮಹಿಳೆಯರು ಮತ್ತು ಅವರ ಕುಟುಂಬದವರು ಈ ಗ್ರಾಮದ ಯಾರನ್ನೂ ಮದುವೆಯಾಗುವುದಿಲ್ಲ. ಆದರೆ 2017 ರಲ್ಲಿ ಈ ಗ್ರಾಮದ ಯುವಕನೊಬ್ಬ ಮದುವೆಯಾಗಿ ‘ಏಕೈಕ ವಿವಾಹಿತ’ ಎಂಬ ದಾಖಲೆ ನಿರ್ಮಿಸಿದ್ದಾನೆ.
ಇದನ್ನೂ ಓದಿ: ಬ್ಯಾಂಕ್ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ
ಬರ್ವಾನ್ ಕಲಾ ಗ್ರಾಮದ ಏಕೈಕ ವಿವಾಹಿತ:
ಗ್ರಾಮಸ್ಥರೆಲ್ಲ ಸೇರಿ ಗುಡ್ಡ, ಕಾಡು ಕಡಿದು 6 ಕಿ.ಮೀ. ಹಲವು ವರ್ಷಗಳ ನಂತರ ಅಜಯ್ ಕುಮಾರ್ ಎಂಬಾತ 2017 ರಲ್ಲಿ ವಿವಾಹವಾಗಿದ್ದಾನೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆತನನ್ನು ಗ್ರಾಮಸ್ಥರೆಲ್ಲ ವಿಐಪಿಯಂತೆ ಸ್ವಾಗತಿಸಿದ್ದರು. ಹಲವು ವರ್ಷಗಳ ನಂತರ ನಡೆದ ಮದುವೆಗೆ ಇಡೀ ಊರೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಸಿದೆ. 2017ರ ನಂತರ ಇಲ್ಲಿಯವರೆಗೂ ಆ ಗ್ರಾಮದಲ್ಲಿ ಒಂದೇ ಒಂದು ಮದುವೆ ನಡೆದಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ