Video: ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷ; ವಿಡಿಯೋ ಇಲ್ಲಿದೆ
ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ದೇವಸ್ಥಾನದ ಅರ್ಚಕರು ನಾಗೇಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಹಾಗೂ ಈ ಪುಣ್ಯ ಕ್ಷಣವನ್ನು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಕಣ್ತುಂಬಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ತೆಲಂಗಾಣದ ಹುಜೂರಾಬಾದ್‍ನ ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ. ಶಿವಲಿಂಗವು ನಾಗರ ಹಾವಿನಿಂದ ಸುತ್ತುವರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಾಗರಾಜನ ಜೊತೆಗೆ ಶಿವಲಿಂಗದ ದರ್ಶನ ಭಾಗ್ಯ ಲಭಿಸಿದ್ದರಿಂದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ದೇವಸ್ಥಾನದ ಅರ್ಚಕರು ನಾಗೇಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಹಾಗೂ ಈ ಪುಣ್ಯ ಕ್ಷಣವನ್ನು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಕಣ್ತುಂಬಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ. ಹಾವು ಕೂಡ ಅಷ್ಟು ಭಕ್ತರು ನೆರೆದಿದ್ದರೂ ಕೂಡ ಯಾರಿಗೂ ಏನೂ ಹಾನಿಯುಂಟು ಮಾಡದೇ ತನ್ನ ಪಾಡಿಗೆ ಹೋಗಿದ್ದು, ಇದು ದೇವರ ಪವಾಡವೇ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ವ್ಯಕ್ತ ಪಡಿಸಿದ್ದಾರೆ.
Published On - 10:55 am, Sun, 28 January 24