ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನಾಗರ ಹಾವು, 20ಕ್ಕೂ ಅಧಿಕ ಹಾವುಗಳ ಸೆರೆ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಗರ ಹಾವು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಕಾರ್ಪೋರೇಷನ್ ಬಳಿ ಇರುವ ಬಿಬಿಎಂಪಿ ಕಮಿಷನರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪಾರ್ಕಿಂಗ್ ಸೇರಿದಂತೆ ಪಾಲಿಕೆ ಕಚೇರಿ ಒಳಗಡೆ ಹಾವುಗಳ ಪ್ರತ್ಯಕ್ಷಗೊಳ್ಳುತ್ತಿವೆ. ಅದರಂತೆ, ಕಳೆದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಹಾವುಗಳನ್ನು ಸೆರೆ ಹಿಡಿಯಲಾಗಿದೆ.
ಬೆಂಗಳೂರು, ಡಿ.7: ನಗರದ ಕಾರ್ಪೋರೇಷನ್ ಬಳಿ ಇರುವ ಬಿಬಿಎಂಪಿ (BBMP) ಕೇಂದ್ರ ಕಚೇರಿಯಲ್ಲಿ ನಾಗರ ಹಾವು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಕಚೇರಿಯಲ್ಲಿ ಹಾವುಗಳ ಕಾಟ ಜೋರಾಗಿದ್ದು, ಪಾಲಿಕೆ ಅರಣ್ಯ ಸಿಬ್ಬಂದಿ ಎರಡು ದಿನದಲ್ಲೇ ಐದಾರು ಹಾವುಗಳನ್ನು ಸೆರೆ ಹಿಡಿದಿದಿದ್ದಾರೆ. ಅಲ್ಲದೆ, ಕಳೆದೊಂದು ತಿಂಗಳಲ್ಲಿ ಪಾಲಿಕೆ ಆವರಣದಲ್ಲಿ ಸುಮಾರು 20ಕ್ಕೂ ಅಧಿಕ ಹಾವುಗಳನ್ನು ಸೆರೆ ಹಿಡಿಯಲಾಗಿದೆ.
ಬಿಬಿಎಂಪಿ ಕಮಿಷನರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪಾರ್ಕಿಂಗ್ ಸೇರಿದಂತೆ ಪಾಲಿಕೆ ಕಚೇರಿ ಒಳಗಡೆ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ನಾಗರಹಾವುಗಳು ಮಾತ್ರವಲ್ಲದೆ, ಕೇರೆ ಹಾವುಗಳು ಕೂಡ ಪ್ರತ್ಯಕ್ಷವಾಗುತ್ತಿವೆ. ಇದು ಹಾವುಗಳ ಮೇಟಿಂಗ್ ಸೀಸಿನ್ ಆಗಿರುವ ಕಾರಣಕ್ಕೆ ಇನ್ನೂ ಹಾವುಗಳು ಪ್ರತ್ಯಕ್ಷವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಬಿಎಂಪಿ ಕೇಂದ್ರ ಕಚೇರಿಗೆ ಹಾವುಗಳ ಕಾಟ; ದಿಢೀರ್ ಎಂಟ್ರಿಕೊಟ್ಟ ನಾಗಪ್ಪನನ್ನ ಕಂಡು ಸಿಬ್ಬಂದಿ ಗಾಬರಿ
ತಮ್ಮ ನಡುವೆ ಹಾವು ಮರಿಗಳು ಓಡಾಡುತ್ತಿರುವುದರಿಂದ ಪಾಲಿಕೆಗೆ ಬರುವ ಜನರು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗ ಭಯದ ವಾತಾವರಣದಲ್ಲೇ ಓಡಾಡತ್ತಿದ್ದಾರೆ. ಇಂದು ಬಿಬಿಎಂಪಿ ಕಚೇರಿ ಆವರಣದ ಪಾರ್ಕಿಂಗ್ನಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಇದನ್ನು ಉರಗತಜ್ಞ ನಯಾಜ್ ಸೆರೆ ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ