ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಕೊಂಡ ಯುವಕ; ಮುಂದೆನಾಯ್ತು?
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ರಾಕೇಶ್ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಅಸುನೀಗಿದ್ದಾನೆ.
ಬೆಂಗಳೂರು, ಡಿ.07: ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಯುವಕನೊಬ್ಬ ಬೆಂಕಿ ಹಚ್ಚಿಕೊಂಡ ಘಟನೆ ಕೆಂಗೇರಿಯ ಕೊಡಿಗೆಪಾಳ್ಯದಲ್ಲಿ ನಡೆದಿತ್ತು. ನಿನ್ನೆ(ಡಿ.06) ರಾತ್ರಿ ಆನೇಕಲ್(Anekal) ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ಯುವಕ ರಾಕೇಶ್ ಎಂಬಾತ ಮೃತಪಟ್ಟಿದ್ದಾನೆ. ಐದಾರು ವರ್ಷದಿಂದ ಓರ್ವ ಯುವತಿನ್ನು ಪ್ರೀತಿ(Love) ಮಾಡುತ್ತಿದ್ದ. ಇತ್ತೀಚೆಗೆ ಬೇರೆ ಯುವಕನ ಜೊತೆಗೆ ಮದುವೆಗೆ ಸಿದ್ದತೆ ಮಾಡಲಾಗಿತ್ತು. ಇದರಿಂದಾಗಿ ಯುವತಿ ರಾಕೇಶ್ನನ್ನು ಅವಾಯ್ಡ್ ಮಾಡಿದ್ದಳು. ಈ ಹಿನ್ನಲೆ ನಿನ್ನೆ(ಡಿ.06) ರಾಕೇಶ್ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ಜೊತೆ ಗಲಾಟೆ ಆಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ.
ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ರಾಕೇಶ್
ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ರಾಕೇಶ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ರಾಕೇಶ್ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ನಿನ್ನೆ ರಾತ್ರಿ ಅಸುನೀಗಿದ್ದಾನೆ. ಈ ಕುರಿತು ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು.
ಇದನ್ನೂ ಓದಿ:ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಗೆ ದೂರು
ಇನ್ನು ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಕಡೆಯವರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ‘ಇಬ್ಬರ ಪ್ರೀತಿಗೆ ಯುವತಿಯ ಕುಟುಂಬದಿಂದ ವಿರೋಧವಿತ್ತು. ನಿನ್ನೆ ಹುಡುಗನನ್ನು ಆಕೆಯ ಕುಟುಂಬದವರು ಕರೆದಿದ್ದರಂತೆ. ಈ ವೇಳೆ ಹೋದಾಗ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ್ದಾಗಿ ಆರೋಪಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಯುವಕ
ಖಾಸಗಿ ಕಂಪನಿಯಲ್ಲಿ ಇಂಜಿಯರ್ ಆಗಿದ್ದ ಮೃತ ಯುವಕ ಹಾಗೂ ಯುವತಿ ಹೆಮ್ಮಿಗೆಪುರದಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಕಳೆದ ಒಂಬತ್ತು ವರ್ಷದಿಂದ ಪ್ರೀತಿ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ರಾಕೇಶ್ ತಂದೆ ಯುವತಿಯ ಮನೆಗೆ ತೆರಳಿ ಮದುವೆ ನಿರ್ಧಾರ ಮಾಡಿದ್ದರು. ಇದಾದ ಬಳಿಕ ಸಮಸ್ಯೆ ಶುರುವಾಗಿದೆ. ಆ ಬಳಿಕ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ