Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವ ಇರುವರೆಗೂ ಜೈಲೇ ಗತಿ‌ಯಾಗಲಿ ಎಂದು ಆದೇಶಿಸಿದರು ಬಾಗಲಕೋಟೆ ಜಿಲ್ಲಾ ಜಡ್ಜ್​​

ಈ ಪ್ರಕರಣ ವಿಶೇಷವಾಗಿದ್ದು ಅಪರಾಧಿ ಮೃತ ಪಡುವವರೆಗೂ ಕೂಡ ಜೈಲಿನಲ್ಲಿಯೇ ಕೊಳೆಯಬೇಕಾದಂತ ಶಿಕ್ಷೆಗೆ ಒಳಗಾಗಿದ್ದಾನೆ‌. ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸಯ್ಯದ್ ಬಳೆಗೂರ್ ರೆಹಮಾನ್ ಅವರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಕ್ರೂರಿಗೆ ಇಂತಹ ಶಿಕ್ಷೆಯನ್ನ ವಿಧಿಸಿ ಇಂದು ಗುರುವಾರ ಮಹತ್ವದ ತೀರ್ಪನ್ನು ನೀಡಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವ ಇರುವರೆಗೂ ಜೈಲೇ ಗತಿ‌ಯಾಗಲಿ ಎಂದು ಆದೇಶಿಸಿದರು ಬಾಗಲಕೋಟೆ ಜಿಲ್ಲಾ ಜಡ್ಜ್​​
ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವ ಇರುವರೆಗೂ ಜೈಲೇ ಗತಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Dec 07, 2023 | 6:06 PM

ಸಾಮಾನ್ಯವಾಗಿ ಯಾವುದೇ ಕೇಸಲ್ಲಿ ಜೀವಾವಧಿ ಶಿಕ್ಷೆ ಅಂತ ಅಂದರೆ 14 ವರ್ಷ 25 ವರ್ಷ ಶಿಕ್ಷೆ ನೀಡಿ ನಂತರ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೂ ಕೂಡ ಜೀವಾವಧಿ ಶಿಕ್ಷೆ ಅಂತಾನೇ ಕರೆಯುತ್ತಾರೆ. ಸಹಜವಾಗಿ ಎಲ್ಲರಿಗೂ ಜೀವಾವಧಿ (Life imprisonment) ಅಂದರೆ ಇರುವವರೆಗೂ ಕೂಡ ಎಂದು ಅನಿಸುತ್ತದೆ‌. ಆದರೆ ಸುಮಾರು ಕೇಸ್ ಗಳಲ್ಲಿ ಜೀವಾವಧಿ ಶಿಕ್ಷೆ ಅಂತ ಆದೇಶ ಬಂದರೂ ಕೂಡ ಜೀವಾವಧಿ ಹೆಸರಲ್ಲೇ 14 ರಿಂದ 25 ವರ್ಷ ಎಂದು ಉಲ್ಲೇಖಿಸಿ ಕೈದಿಯನ್ನು ಮಾಡುತ್ತಾರೆ. ಆದರೆ ಈ ಪ್ರಕರಣ ವಿಶೇಷವಾದ ಪ್ರಕರಣವಾಗಿದ್ದು ಅಪರಾಧಿ ಮೃತ ಪಡುವವರೆಗೂ ಕೂಡ ಆತ ಜೈಲಿನಲ್ಲಿಯೇ ಕೊಳೆಯಬೇಕಾದಂತ ಶಿಕ್ಷೆಗೆ ಒಳಗಾಗಿದ್ದಾನೆ‌. ಹೌದು ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಶೀಘ್ರಗತಿ ನ್ಯಾಯಾಲಯ -1 (Bagalkot Judge) ಇಂಥ ಮಹತ್ತರವಾದಂತಹ ಆದೇಶ ನೀಡಿದೆ‌. ನ್ಯಾಯಾಧೀಶರಾದ ಶ್ರೀ ಸಯ್ಯದ್ ಬಳೆಗೂರ್ ರೆಹಮಾನ್ ಅವರು ಬಾಲಕಿ (girl) ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಕ್ರೂರಿಗೆ ಇಂತಹ ಶಿಕ್ಷೆಯನ್ನ ವಿಧಿಸಿ ಇಂದು ಗುರುವಾರ ಮಹತ್ವದ ತೀರ್ಪನ್ನು ನೀಡಿದ್ದಾರೆ.

ಅಷ್ಟಕ್ಕೂ ಇಲ್ಲಿ ಇಂತಹ ಘೋರ ಶಿಕ್ಷೆಗೆ ಒಳಗಾದಂತಹ ಆರೋಪಿ ಯಾರು ಎಂದರೆ ಆತನ ಹೆಸರು ಶಿವಪ್ಪ ಸಂಗಪ್ಪ ಕಬ್ಬರಗಿ‌. ಜಿಲ್ಲೆಯ ಗುಡೆದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಘಟನೆ ಇದಾಗಿದೆ. ಆರೋಪಿ ಶಿವಪ್ಪ ಸಂಗಪ್ಪ ಕಬ್ಬರಗಿಯು 14 ವರ್ಷದ ಅಪ್ರಾಪ್ತ ಬಾಲಕಿ ಈತನ ಮಕ್ಕಳ ಜೊತೆ ಆಟವಾಡಲು ಬಂದಾಗ ತನ್ನ ಮಕ್ಕಳಿಗೆ ಚಾಕ್ಲೆಟ್ ತರುವಂತೆ ಹೇಳಿ ಹೊರಗಡೆ ಕಳಿಸಿದ್ದ‌. ನಂತರ ಬಾಲಕಿಗೆ ಹಣ್ಣು ಕೊಡುವುದಾಗಿ ನಂಬಿಸಿ ಒಳಗೆ ಕರೆದೊಯ್ದು, ಅವಳಿಗೆ ಹೆದರಿಸಿ ಓಡಿ ಹೋಗದಂತೆ ಮಾಡಿ ಅವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಅತ್ಯಾಚಾರ ಮಾಡಿದ್ದ‌.

ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ತಂದೆ-ತಾಯಿಯನ್ನು ಕೊಲ್ಲುವುದಾಗಿ ಧಮ್ಕಿ ಕೊಟ್ಟು ಅವಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ನಡೆದು 10-15 ದಿನಗಳ ನಂತರವೂ ಕೂಡ ಮತ್ತೆ ನೊಂದ ಬಾಲಕಿಯು ಈತನ ಮನೆ ಮುಂದೆ ಹಾದು ಹೋಗುವಾಗ ಅವಳನ್ನು ಹೆದರಿಸಿ ಒಳಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರ ಮಾಡಿ ಪುನಃ ಹೆದರಿಸಿ ಬೆದರಿಸಿ ಐದಾರು ಸಲ ಅತ್ಯಾಚಾರ ಮಾಡಿದ್ದ.

ಇದರಿಂದ ಬಾಲಕಿಯು ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂದಿತ್ತು. ಇದಕ್ಕೂ ಮೊದಲು ಬಾಲಕಿಗೆ ಮೇಲಿಂದ ಮೇಲೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಅವಳನ್ನ ಗುಳೇದಗುಡ್ಡ ಖಾಸಗಿ ಆಸ್ಪತ್ರೆಗೆ ತೋರಿಸಲಾಗಿತ್ತು‌.ಆದರೂ ಹೊಟ್ಟೆನೋವು ಕಡಿಮೆಯಾಗಿರಲಿಲ್ಲ, ನಂತರ ವೈದ್ಯರ ಸಲಹೆ ಮೇರೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿಯು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು.

Also Read: ಮಾತೃ ವಾತ್ಸಲ್ಯ,: ಹಸಿದ ನಾಯಿ ಮರಿಗೆ ಎದೆ ಹಾಲುಣಿಸಿದ ಹಂದಿ

ಬಾಲಕಿ ತಾಯಿಯು ಮಗಳನ್ನು ಕೇಳಿದಾಗ ಈ ವಿಕೃತಕಾಮಿ ನಡೆಸಿದ ಕೃತ್ಯವನ್ನು ಬಾಲಕಿ ನನ್ನ ತಾಯಿಯ ಮುಂದೆ ಬಾಯಿಬಿಟ್ಟಿದ್ದಳು‌. ಆಗ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಈ ಘಟನೆ ಬಗ್ಗೆ ಪೊಕ್ಸೊ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದಂತಹ ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಶೀಘ್ರ ಇತಿ ನ್ಯಾಯಾಲಯದ ನ್ಯಾಯಾಧೀಶರಾದಂತಹ ಶ್ರೀ ಸಯ್ಯದ್ ಬಳೆಗೂರ್ ರೆಹಮಾನ್ ಆರೋಪಿಗೆ ಜೀವ ಇರುವವರೆಗೂ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗುವುದಕ್ಕೆ ಕಾರಣವಾಗಿರುವ ಈತನಿಗೆ ಪೊಕ್ಸೊ ಕಾಯ್ದೆ ಅಡಿ ಆರೋಪಿಗೆ ಜೀವಾವಧಿಯವರೆಗೆ ಕಠಿಣ ಜೈಲುವಾಸದ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ, ದಂಡ ಕೊಡಲು ತಪ್ಪಿದಲ್ಲಿ ಇನ್ನೂ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ‌. ಇನ್ನೊಂದು ಸೆಕ್ಷನ್ ನಂಬರ್ ಅಡಿ ಎಸಗಿರುವ ಅಪರಾಧಕ್ಕೆ ಆರೋಪಿಗೆ ಜೀವ ಇರುವವರೆಗೂ ಜೀವಾವಧಿ ಶಿಕ್ಷೆ, ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ. ದಂಡ ಕೊಡಲು ತಪ್ಪಿದ್ದಲ್ಲಿ ಇನ್ನೂ ಮೂರು ತಿಂಗಳು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ‌. ಕಲಂ 56 ಐಪಿಸಿ ಪ್ರಕಾರ ಅಪರಾಧಕ್ಕೆ ಈಗಾಗಲೇ ಆರೋಪಿಗೆ ಜೀವ ಇರುವವರೆಗೂ ಜೀವಾವಧಿ ಶಿಕ್ಷೆ ಆಗಿದ್ದರಿಂದ ಈ ಕಲಂ ಅಡಿಯಲ್ಲಿ ಬೇರೆ ಶಿಕ್ಷೆ ವಿಧಿಸಲಾಗಿಲ್ಲ‌.

ಪ್ರಕರಣದಲ್ಲಿ ನೊಂದ ಅಪ್ರಾಪ್ತ ಬಾಲಕಿಗೆ 7 ಲಕ್ಷ ಪರಿಹಾರ ಧನವನ್ನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಇವರು ಸಹಾಯಧನವಾಗಿ ಕೊಡುವಂತೆ ಆದೇಶ ಮಾಡಿದ್ದಾರೆ‌. ಪ್ರಕರಣದಲ್ಲಿ ವಿಶೇಷ ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಶ್ರೀ ಮಲ್ಲಿಕಾರ್ಜುನ ಹಂಡಿ ವಕೀಲರು ಅಭಿಯೋಗದ ಪರವಾಗಿ ಸಾಕ್ಷಿಗಳ ವಿಚಾರಣೆ ಮತ್ತು ವಾದ ಮಂಡನೆಯನ್ನು ಮಾಡಿ ಆರೋಪಿಯ ವಿರುದ್ಧ ಆರೋಪ ಸಾಬೀತು ಪಡಿಸುವಲ್ಲಿ ಸಫಲರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು