ಮಾತೃ ವಾತ್ಸಲ್ಯ,: ಹಸಿದ ನಾಯಿ ಮರಿಗೆ ಎದೆ ಹಾಲುಣಿಸಿದ ಹಂದಿ
ಪ್ರಾಣಿಗಳಿಗೆ ಮನುಷ್ಯರಂತೆ ಮಾತು ಬಾರದಿರಬಹುದು ಆದರೆ ಅವುಗಳು ಭಾವನೆಗಳಿಗೆ, ಮನುಷ್ಯತ್ವಕ್ಕೆ ಮಾನವರಾದ ನಮಗಿಂತ ಹೆಚ್ಚಿನ ಬೆಲೆ ಕೊಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಪ್ರಾಣಿಗಳ ವಾತ್ಸಲ್ಯದ ಕುರಿತ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಅಂತಹದ್ದೇ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಹಸಿದು ಬಂದ ನಾಯಿ ಮರಿಗೆ ಹಂದಿಯೊಂದು ಎದೆ ಹಾಲುಣಿಸಿದೆ. ಇದನ್ನು ಕಂಡು ಪ್ರಾಣಿಗಳಿಂದ ಮನುಷ್ಯರು ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಹಲವರು ಹೇಳಿದ್ದಾರೆ.
ಪ್ರಾಣಿಗಳಿಗೆ ಮನುಷ್ಯರಂತೆ ಮಾತು ಬಾರದಿರಬಹುದು ಆದರೆ ಅವುಗಳು ತಮ್ಮ ನಡವಳಿಯೆ, ವಾತ್ಸಲ್ಯ, ಮಾನವೀಯ ಗುಣಗಳ ಮೂಲಕವೇ ಎಲ್ಲರ ಹೃದಯ ಗೆಲ್ಲುತ್ತವೆ. ಪ್ರಾಣಿಗಳಿಗೆ ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿ ಕಾಣಸಿಗುವುದು ಬಲು ಅಪರೂಪ ಎಂದು ಹೆಚ್ಚಿನವರು ಹೇಳುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ತನ್ನ ಸ್ವಂತ ಮಗುವಿನಂತೆ ಸಾಕಿದ ನಾಯಿ ಮರಿ, ಬೆಕ್ಕಿನ ಮರಿಗೆ ಹಾಲುಣಿಸಿದ ಶ್ವಾನ, ತಾಯಿಯಿಂದ ಬೇರ್ಪಟ್ಟ ಜಿಂಕೆ ಮರಿಯನ್ನು ಇತರ ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಿದ ಸಿಂಹ ಹೀಗೆ ಇಂತಹ ಹಲವಾರು ಮನಕಲಕುವಂತಹ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಇದೇ ರೀತಿಯ ಹೃದಯಸ್ಪರ್ಶಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಸಿದು ಬಂದಂತಹ ನಾಯಿ ಮರಿಗೆ ಹಂದಿ ತನ್ನ ಎದೆ ಹಾಲುಣಿದೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಪ್ರಾಣಿಗಳಿಂದ ನಾವು ಕಲಿಯಬೇಕಿರುವುದು ಸಾಕಷ್ಟಿದೆ ಎಂದು ಹೇಳಿದ್ದಾರೆ.
ಈ ಹೃದಯಸ್ಪರ್ಶಿ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರಿನ ಮುನೆಪ್ಪ ನಗರದಲ್ಲಿ ನಡೆದಿದ್ದು, ಹಸಿದ ಬಂದಂತಹ ಪುಟ್ಟ ಶ್ವಾನದ ಮರಿಗೆ ಹಂದಿ ತನ್ನ ಎದೆ ಹಾಲುಣಿಸಿ ಮಾತೃ ವಾತ್ಸಲ್ಯವನ್ನು ಮೆರೆದಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಈ ರೆಸ್ಟೋರೆಂಟ್ನಲ್ಲಿ ಕಪಾಳಮೋಕ್ಷ ಸ್ಪೆಷಲ್ ಮೆನು
ವಿಡಿಯೋದಲ್ಲಿ ನಗರದ ಬೀದಿಯೊಂದರ ಪಕ್ಕದಲ್ಲಿ ಹಂದಿಯೊಂದು ಪ್ರಶಾಂತವಾಗಿ ಮಲಗಿರುವುದನ್ನು ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಬಂದಂತಹ ಪುಟ್ಟ ಶ್ವಾನದ ಮರಿಯೊಂದು ಹೊಟ್ಟೆ ಹಸಿವನ್ನು ತಾಳಲಾರದೆ ಹಂದಿಯ ಎದೆ ಹಾಲನ್ನು ಕುಡಿಯುತ್ತದೆ. ಈ ಸಂದರ್ಭದಲ್ಲಿ ಹಂದಿ ನಾಯಿ ಮರಿಯ ಮೇಲೆ ದಾಳಿ ಮಾಡದೆ ಅಥವಾ ಎಗರಾಡದೆ ಹಾಲು ಕುಡಿಯಲು ಅವಕಾಶವನ್ನು ನೀಡಿ ಮಾತೃ ವಾತ್ಸಲ್ಯವನ್ನು ಮೆರೆದಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಈ ಹೃದಯಸ್ಪರ್ಶಿ ವಿಡಿಯೋ ಸಖತ್ ವೈರಲ್ ಆಗಿದೆ. ಯಾವುದೇ ದ್ವೇಷ ಸಾಧಿಸದೆ ಪ್ರೀತಿಯಿಂದ ವರ್ತಿಸುವ ಪ್ರಾಣಿಗಳನ್ನು ನೋಡಿ ಮನುಷ್ಯರಾದ ನಾವು ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:00 pm, Thu, 7 December 23