Viral Video: ಈ ರೆಸ್ಟೋರೆಂಟ್​​ನಲ್ಲಿ ಕಪಾಳಮೋಕ್ಷ ಸ್ಪೆಷಲ್​​ ಮೆನು

ಗ್ರಾಹಕರನ್ನು ಆಕರ್ಷಿಸಲು ಹೋಟೇಲ್ ಹಾಗೂ ರೆಸ್ಟೋರೆಂಟ್​​ಗಳು ಹಲವಾರು ಮಾರ್ಕೆಟಿಂಗ್ ತಂತ್ರಗಳನ್ನು ಮಾಡುತ್ತವೆ.  ಇದರಿಂದ ಅನೇಕ ಗ್ರಾಹಕರು ಅಂತಹ ಹೋಟೇಲ್​​ಗಳಿಗೆ ಊಟ-ತಿಂಡಿಗೆ ಹೋಗುತ್ತಾರೆ. ಆದರೆ ಈ ಒಂದು ರೆಸ್ಟೋರೆಂಟಿಗೆ ಮಾತ್ರ ಜನರು ಕಪಾಳಮೋಕ್ಷ ಮಾಡಿಸಿಕೊಳ್ಳಲು ಹೋಗುತ್ತಾರಂತೆ.  ಅಷ್ಟಕ್ಕೂ ಈ  ವಿಚಿತ್ರ ರೆಸ್ಟೋರೆಂಟ್ ಎಲ್ಲಿದೆ ಎಂಬುದನ್ನು ನೋಡೋಣ.

Viral Video: ಈ ರೆಸ್ಟೋರೆಂಟ್​​ನಲ್ಲಿ ಕಪಾಳಮೋಕ್ಷ ಸ್ಪೆಷಲ್​​ ಮೆನು
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2023 | 10:42 AM

ಸಾಮಾನ್ಯವಾಗಿ ನಾವೆಲ್ಲರೂ ವಿವಿಧ ಬಗೆಯ ರುಚಿಕರವಾದ ಆಹಾರವನ್ನು ಸೇವನೆ ಮಾಡಲು ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಹೋಗುತ್ತೇವೆ. ಕೆಲವರಂತೂ ಬಗೆಬಗೆಯ ಆಹಾರವನ್ನು ಸೇವನೆ ಮಾಡಲು ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡುತ್ತಾರೆ. ಅಂತಹ ಭೋಜನಪ್ರಿಯರನ್ನು ಆಕರ್ಷಿಸುವ ಸಲುವಾಗಿ ರೆಸ್ಟೋರೆಂಟ್ಗಳು ಹಲವಾರು ಮಾರ್ಕೆಂಟ್ ತಂತ್ರಗಳನ್ನು ಮಾಡುತ್ತವೆ. ಕೆಲವು ರೆಸ್ಟೋರೆಂಟ್​​ಗಳು ವಿಲಕ್ಷಣ ಆಹಾರಗಳನ್ನು ನೀಡುವ  ಮೂಲಕ ಹಾಗೂ ಇನ್ನೂ ಕೆಲವು ರೆಸ್ಟೋರೆಂಟ್ಗಳು ವಿಶಿಷ್ಟವಾಗಿ ಗ್ರಾಹಕರನ್ನು ಸ್ವಾಗತಿಸುವ ಮೂಲಕ ತಮ್ಮ ವ್ಯಾಪಾರವನ್ನು ಹೆಚ್ಚಿಸುವ ಮಾರ್ಕೆಟಿಂಗ್ ತಂತ್ರಗಳನ್ನು ಮಾಡುತ್ತಾರೆ. ಈ ಮಾರ್ಕೆಟಿಂಗ್ ತಂತ್ರಗಳಿಗೆ ಆಕರ್ಷಿತರಾಗಿ ಹಲವಾರು ಗ್ರಾಹಕರು ಭೋಜನವನ್ನು ಸವಿಯಲು ಅಂತಹ ರೆಸ್ಟೋರೆಂಟ್ಗಳಿಗೆ ಹೋಗುತ್ತಾರೆ. ಆದರೆ ಈ ಒಂದು ರೆಸ್ಟೋರೆಂಟಿಗೆ ಮಾತ್ರ ಜನರು ದುಡ್ಡು ಕೊಟ್ಟು ಕಪಾಳಮೋಕ್ಷ ಮಾಡಿಸಿಕೊಳ್ಳಲು ಹೋಗುತ್ತಾರಂತೆ. ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಹುಶಃ ಕೋಲು ಕೊಟ್ಟು ಪೆಟ್ಟು ತಿನ್ನುವುದೆಂದರೆ ಇದೇ ಇರಬೇಕು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಈ ರೆಸ್ಟೋರೆಂಟ್ನ ಹೆಸರು ಶಚಿಹೊಕೊಯಾ.  ಇದು ಜಪಾನಿನ ನಗೋಯಾ ನಗರದಲ್ಲಿದೆ.  ಈ ರೆಸ್ಟೋರೆಂಟಿನ ವಿಶೇಷತೆಯೆಂದರೆ, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪರಿಚಾರಿಕೆಯರ ಕೈಯಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲೆಂದೇ  ಬರುತ್ತಾರೆ. ಗ್ರಾಹಕರು  ಇಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು 300 ಜಪಾನೀಸ್ ಯೆನ್  ಅಂದರೆ 169 ರೂ. ಹಣವನ್ನು ಪಾವತಿ ಮಾಡುತ್ತಾರೆ.  ಮತ್ತು ಪರಚಾರಿಕೆಯರು  ಗ್ರಾಹಕರ ಎರಡೂ  ಕೆನ್ನೆಗಳಿಗೂ ಜೋರಾಗಿ ಕಪಾಳಮೋಕ್ಷ ಮಾಡುತ್ತಾರೆ.

ಈ ವಿಡಿಯೋವನ್ನು  @bangkoklad ಹೆಸರಿನ  X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ನಗೋಯಾದಲ್ಲಿನ ಶಚಿಹೊಕೊಯಾ ರೆಸ್ಟೋರೆಂಟ್. ಇಲ್ಲಿ ನೀವು 300 ಜಪಾನೀಸ್ ಯೆನ್ ಗೆ  ʼನಗೋಯ ಲೇಡಿಸ್ ಸ್ಲ್ಯಾಪ್ʼ ಎಂಬ ವಿಶೇಷ ಕಪಾಳಮೋಕ್ಷ ಮೆನು ಐಟಂ ಖರೀದಿಸಬಹದು ಎಂಬು ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ  ರೆಸ್ಟೋರೆಂಟ್  ಪರಿಚಾರಿಕೆಯರು ಗ್ರಾಹಕರ ಕೆನ್ನೆಗೆ ಜೋರಾಗಿ ಕಪಾಳಮೋಕ್ಷ ಮಾಡುವಂತಹ ದೃಶ್ಯಾವಳಿಯನ್ನು ಕಾಣಬಹುದು. ಅದರಲ್ಲಿ ಒಬ್ಬಾಕೆ ಪರಿಚಾರಿಕೆ ಕಪಾಳಮೋಕ್ಷ ಮಾಡಿದ ರಭಸಕ್ಕೆ ಗ್ರಾಹಕನೊಬ್ಬ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾನೆ. ಬಹುಶಃ ಕೋಲು ಕೊಟ್ಟು ಪೆಟ್ಟು ತಿನ್ನುವುದೆಂದರೇ ಇದೇ ಇರಬೇಕು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ವಿಡಿಯೋ ಓದಲು ಇಲ್ಲಿ ಕ್ಲಿಕ್ ಮಾಡಿ:

ಕಪಾಳಮೋಕ್ಷ ಮಾಡುವುದರ ಹಿಂದಿನ ಕಥೆ:

ಈ ರೆಸ್ಟೋರೆಂಟಿನಲ್ಲಿ ಕಪಾಳಮೋಕ್ಷ ಮಾಡುವ ಹಿಂದಿನ ಕಥೆಯೂ ಅದ್ಭುತವಾಗಿದೆ. ಮಾಧ್ಯಮ ವರದಿಯ ಪ್ರಕಾರ, ಶಚಿಹೊಕೊಯಾ  ರೆಸ್ಟೋರೆಂಟನ್ನು  2012ರಲ್ಲಿ ತೆರೆಯಲಾಯಿತು.  ಆದರೆ ಹೆಚ್ಚಿನ ವ್ಯಾಪಾರವಾಗದ ಕಾರಣ ಸ್ವಲ್ಪ ಸಮಯದ ನಂತರ ಈ ರೆಸ್ಟೋರೆಂಟ್ ಮುಚ್ಚುವ ಹಂತಕ್ಕೆ  ಬಂದು ತಲುಪಿತು. ಆ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕಪಾಳಮೋಕ್ಷ ಮಾಡಿಸಿಕೊಳ್ಳುವಂತ  ವಿಶಿಷ್ಟ ಥೀಮ್ ಅನ್ನು  ಜಾರಿಗೊಳಿಸಿತು.  ಈ ಮಾರ್ಕೆಟ್ ತಂತ್ರದ ಕಾರಣ ರೆಸ್ಟೋರೆಂಟಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಬರಲಾರಂಭಿಸಿದರು. ಮತ್ತು  ವ್ಯವಹಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು.

ಇದನ್ನೂ ಓದಿ: ಅರ್ಜುನನಿಗೆ ನೋವು ಮಾಡಿ ಬಲಿ ಪಡೆ ಆನೆ ಇದುವೇ ನೋಡಿ 

ಜನರು ಕಪಾಳಮೋಕ್ಷ ಮಾಡಿಸಿಕೊಳ್ಳುವ ಸಲುವಾಗಿಯೇ ಈ ರೆಸ್ಟೋರೆಂಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿ ಕೇವಲ ಮಹಿಳಾ  ಪರಿಚಾರಿಕೆಯರು ಕೈಯಿಂದ ಮಾತ್ರ ಕಪಾಳಮೋಕ್ಷವನ್ನು ಮಾಡಿಸಿಕೊಳ್ಳಲಾಗುತ್ತದೆ. ಅಷ್ಟು ಮಾತ್ರವಲ್ಲದೆ  ನಿಮ್ಮ ಆಯ್ಕೆಯ ಪರಿಚಾರಿಕೆಯಿಂದ ನೀವು ಕಪಾಳಮೋಕ್ಷ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ನೀವು 3000  ಜಪಾನೀಸ್ ಯೆನ್ ಬದಲಿಗೆ, ನೀವು 500 ಜಪಾನೀಸ್ ಯೆನ್ ಅಂದರೆ 283 ರೂ.ಗಳನ್ನು ಪಾವತಿಸಬೇಕು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ