AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಇನ್ನೇನು ತಾಳಿ ಕಟ್ಟಬೇಕು ಎನ್ನುಷ್ಟರಲ್ಲೇ ಮದ್ವೆ ನಿರಾಕರಿಸಿದ ವಧು, ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ವಿವಾಹಗಳು (Marriage) ಮುಹೂರ್ತ ಸಮಯದಲ್ಲೇ ರದ್ದುಗೊಳ್ಳುತ್ತವೆ. ಮಂಟಪದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಕೊನೆ ಗಳಿಗೆಯಲ್ಲಿ ಮದುವೆಯನ್ನು ನಿಲ್ಲಿಸಲಾಗುತ್ತದೆ. ಇಂತಹದ್ದೇ ಒಂದು ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇನ್ನೇನು ವರ ಕೈಯಲ್ಲಿ ತಾಳಿ ಹಿಡಿದು ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನಿರಾಕರಿಸಿದ್ದಾಳೆ.

ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Dec 08, 2023 | 9:47 AM

Share

ಚಿತ್ರದುರ್ಗ, (ಡಿಸೆಂಬರ್ 08): ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಂಟಪದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೂ, ಆದ್ರೆ, ಕೊನೆಗಳಿಗೆಯಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಮದುವೆಯೇ (marriage ) ರದ್ದಾಗಿದೆ. ಚಿತ್ರದುರ್ಗ (chitradruga) ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಕೈ ಅಡ್ಡ ಹಿಡಿದು ತಡೆದಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಮಂಜುನಾಥ್ ಮತ್ತು ಐಶ್ವರ್ಯ ನಡುವೆ ವಿವಾಹ ನಿಶ್ಚಿಯವಾಗಿತ್ತು. ಅದರಂತೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಇನ್ನೇನು ವರ ತಾಳಿ ಕಟ್ಟಿದರೆ ಮದುವೆಯೇ ಮುಗಿದು ಹೋಗಿತ್ತು. ಆದ್ರೆ, ವಧು ಐಶ್ವರ್ಯ, ಕೊನೆ ಕ್ಷಣದಲ್ಲಿ ಈ ಮದುವೆಯೇ ಬೇಡ ಎಂದು ತಾಳಿ ಕಟ್ಟಿಸಿಕೊಳ್ಳು ನಿರಾಕರಿಸಿದ್ದಾಳೆ.

ಮಂಜುನಾಥ್ ತಾಳಿ ಕಟ್ಟಲು ಎದ್ದು ನಿಂತರೇ ಬೇಡ ಎಂದು ಕೈ ಅಡ್ಡ ಹಿಡಿದಿದ್ದಾಳೆ. ಈ ವೇಳೆ ಸಂಬಂಧಿಕರು ಐಶ್ವರ್ಯಳನ್ನು ಮನವೊಲಿಸಿದ್ದಾರೆ. ಎಷ್ಟೇ ಹರಸಾಹಸ ಪಟ್ಟರೂ ಸಹ ಬಗ್ಗದ ಐಶ್ವರ್ಯ ತಾಳಿ ಕಟ್ಟಿಸಿಕೊಳ್ಳಲು ಒಪ್ಪಲೇ ಇಲ್ಲ. ಯುವತಿ ನಡೆಗೆ ಯುವಕನ ಸಂಬಂಧಿಕರ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಯುವತಿ ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ಉಂಟಾಗಿ ಕೊನೆಗೆ ಅಂತಿಮವಾಗಿ ಈ ಮದುವೆಯೇ ರದ್ದುಗೊಂಡಿದೆ.

ಮದುವೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಸಂಬಂಧಿಕರೆಲ್ಲ ಕಲ್ಯಾಣ ಮಂಟಪಕ್ಕೆ ಬಂದಾಗಿತ್ತು. ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನಿರಾಕರಿಸಿದ್ದಾಳೆ. .ಮೂಹರ್ತ ಗಳಿಗೆಯಲ್ಲೇ ತಾಳಿಕಟ್ಟಿಸಿಕೊಳ್ಳ ಎಂದು ವರನಿಗೆ ಶಾಕ್ ಕೊಟ್ಟಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:41 am, Fri, 8 December 23