ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸ್ನೇಹಿತೆಯಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ
ಯುವತಿ ಹಾಗೂ ಪ್ರಿಯಕರ ಒಟ್ಟಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಬಂಧಿತ ಅರ್ಪಿತ್ ಮಾಡಿದ್ದಾನೆ. ಪಿಯುಸಿ ಡ್ರಾಪ್ ಔಟ್ ಆದ ಬಳಿಕ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಬೆದರಿಕೆಗೆ ಹೆದರಿದ ಯುವತಿ ಮನೆಯಲ್ಲಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆತನಿಗೆ ನೀಡಿದ್ದಳು.
- Jagadish PB
- Updated on: Aug 23, 2024
- 5:43 pm
ಕೊರಮಂಗಲ ಪಿಜಿಯಲ್ಲಿ ಯುವತಿ ಕೊಲೆ ಬಳಿಕ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ
ಮಹಿಳಾ ಪಿಜಿಗಳನ್ನು ನಡೆಸುವವರು ಅಗತ್ಯ ಭದ್ರತೆ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದದ್ದು ಅತ್ಯಗತ್ಯ. ಹೀಗಾಗಿಯೇ ಕೊರಮಂಗಲದ ಪಿಜಿಯಲ್ಲಿ ಯುವತಿಯ ಕೊಲೆಯಾದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ಪಿಜಿಗಳ ವ್ಯವಸ್ಥೆ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಜತೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ.
- Jagadish PB
- Updated on: Aug 1, 2024
- 8:13 am
ಕಳಪೆ ಮಾಂಸ ದಂಧೆ ಆರೋಪ: ಹೋಟೆಲ್, ರೆಸ್ಟೋರೆಂಟ್ಗಳಿಗೆ ಆಹಾರ ಇಲಾಖೆ ನೋಟಿಸ್
ಕಳಪೆ ಮಾಂಸ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಮೊದಲ ಹಂತವಾಗಿ 9 ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
- Jagadish PB
- Updated on: Jul 28, 2024
- 9:42 am
ಪಟ್ಟಣಗೆರೆ ಶೆಡ್ನ ಸಿಸಿಟಿವಿಯಲ್ಲಿದೆ ಶವ ಎಳೆದೊಯ್ಯೋ ದೃಶ್ಯ; ಆದರೆ…
ಹಲ್ಲೆ ಬಳಿಕ ನಿತ್ರಾಣವಾಗಿದ್ದ ರೇಣುಕಾಸ್ವಾಮಿ ಮೇಲೆ ನಿಖಿಲ್, ಪವನ್, ರಾಘವೇಂದ್ರ ಅವರಿಂದ ಹಲ್ಲೆ ನಡೆದಿದೆ. ಬಳಿಕ ಶೆಡ್ನಲ್ಲೇ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದರು. ನಂತರ ಶವವನ್ನು ನಿಖಿಲ್, ಪವನ್ ಹಾಗೂ ಇನ್ನಿತರ ಆರೋಪಿಗಳು ಸಾಗಿಸಿದ್ದರು. ಸಿಸಿಟಿವಿ ದೃಶ್ಯವನ್ನು ನಾಶ ಮಾಡಲಾಗಿತ್ತು.
- Jagadish PB
- Updated on: Jul 20, 2024
- 11:46 am
ಠಾಣೆಯಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು
ರೇಣುಕಾ ಸ್ವಾಮಿ ಎಂಬುವವರನ್ನು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಿದ ಆರೋಪದಲ್ಲಿ ಪವಿತ್ರಾ ಗೌಡ, ದರ್ಶನ್, ವಿ. ವಿನಯ್, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಆರ್. ನಾಗರಾಜು, ಕೆ. ಪವನ್ ಮುಂತಾದವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್ಗಳನ್ನು ತರಿಸಲಾಗಿದೆ.
- Jagadish PB
- Updated on: Jun 11, 2024
- 11:05 pm
Bengaluru Rain Today: ಬೆಂಗಳೂರಿನಲ್ಲಿ ತಂಪೆರೆದ ವರುಣ, ನಗರದ ವಿವಿಧೆಡೆ ಆಲಿಕಲ್ಲು ಮಳೆ
ಬೆಂಗಳೂರಿನಲ್ಲಿ ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಇದೀಗ ನಗರದ ಹಲವೆಡೆ ಆಲಿಕಲ್ಲು ಜೊತೆಗೆ ಮಳೆರಾಯ ಆರ್ಭಟಿಸಿದ್ದಾನೆ. ಬರ ಆವರಿಸಿದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಮಳೆ ಹಿನ್ನಲೆ ನಗರದಲ್ಲಿ ಕೆಲ ಅವಾಂತರಗಳು ಕೂಡ ಸಂಭವಿಸಿವೆ. ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 20 ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗುರುಳಿವೆ.
- Jagadish PB
- Updated on: May 6, 2024
- 7:26 pm
ಪುತ್ತಿಲ ಬಿಜೆಪಿ ಸೇರ್ಪಡೆ ಆಗಿದೆ, ಮಂಗಳೂರಿನಲ್ಲಿ ಸೇರ್ಪಡೆಯಂಥ ಪ್ರಕ್ರಿಯೆ ಇಲ್ಲ: ಸತೀಶ್ ಕುಂಪಲ
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒಪ್ಪಿಗೆ ಸೂಚಿಸಿದರೂ ಪುತ್ತೂರಿನ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಸಭೆ ಬಳಿಕ ಪುತ್ತಿಲ ಪಕ್ಷ ಸೇರ್ಪಡೆ ಬಗ್ಗೆ ಮಾಧ್ಯದ ಮೇಲೆ ಗೂಬೆ ಕೂರಿಸಿದ್ದ ಕುಂಪಲ ಇದೀಗ ಪುತ್ತಿಲ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
- Jagadish PB
- Updated on: Mar 16, 2024
- 12:09 pm
ಸಂವಿಧಾನ ರಕ್ಷಣೆಯಾದರೆ ಉಳಿಯುತ್ತೇವೆ, ಧಕ್ಕೆಯಾದರೆ ಅಪಾಯಕ್ಕೆ ಸಿಲುಕುತ್ತೇವೆ: ಸಿದ್ದರಾಮಯ್ಯ
ಸಂವಿಂಧಾನಕ್ಕೆ ಅಪಾಯ ಆಗುವ ಸಂದರ್ಭವನ್ನು ಯಾರೂ ಸಹಿಸಬಾರದು. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ ಇವೆ. ಜಾತಿ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ, ಸಮಾಜಿಕ ಅಸಮಾನತೆ ಇದೆ. ಇವೆಲ್ಲ ಅಸಮಾನತೆ ತೊಲಗಬೇಕು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
- Jagadish PB
- Updated on: Feb 24, 2024
- 1:31 pm
ಬೆಂಗಳೂರು: ಹಪ್ತಾ, ಫ್ರೀ ಐಟಂಗಳಿಗಾಗಿ ವೃದ್ಧನ ಮುಂದೆ ಪುಂಡಾಟ; ವಿಡಿಯೋ ವೈರಲ್
ಬೆಂಗಳೂರು ನಗರದ ಡಿಜೆ ಹಳ್ಳಿಯ ಪ್ರಿಯಾ ನಗರದಲ್ಲಿರುವ ಮೆಡಿಕಲ್ ಶಾಪ್ವೊಂದರಕ್ಕೆ ಬಂದ ಯುವಕ ಹಫ್ತಾ ಹಾಗೂ ಉಚಿತ ಐಟಂಗಳಿಗಾಗಿ ಹೈಡ್ರಾಮ ನಡೆಸಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
- Jagadish PB
- Updated on: Feb 22, 2024
- 7:54 am
ಬೆಂಗಳೂರಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; 100ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ
ಬೆಂಗಳೂರಿನ ಬಸವೇಶ್ವರನಗರ(Basaveshwaranagara)ದಲ್ಲಿ ಇಸ್ಪೀಟ್ ಅಡ್ಡೆ(gambling)ಮೇಲೆ ಪೊಲೀಸರು ದಾಳಿ ಮಾಡಿದ್ದು, ಕ್ಲಬ್ ಮಾಲೀಕ ಸೇರಿದಂತೆ 100ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಡಿಗ ಎಂಬಾತ ನಡೆಸುತ್ತಿದ್ದ ಇಸ್ಪೀಟ್ ಕ್ಲಬ್ ಮೇಲೆ ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
- Jagadish PB
- Updated on: Dec 22, 2023
- 10:34 pm
ಬಿಟ್ ಕಾಯಿನ್ ಹಗರಣ: ಸಾರ್ವಜನಿಕರಿಂದ ಮಾಹಿತಿ ಕೋರಿದ ಸಿಐಡಿ, ಎಸ್ಐಟಿ, ಇಲ್ಲಿದೆ ವಾಟ್ಸಪ್-ಇಮೇಲ್ ಐಡಿ
ಕ್ರಿಪ್ಟೋಕರೆನ್ಸಿ ಹಗರಣವು ಈ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ತನಿಖೆ ಕೈಗೊಂಡಿದ್ದ ಎಸ್ಐಟಿ, ಈಗಾಗಲೇ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಆದರೆ, ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕಿರುವುದರಿಂದ ಸಾರ್ವಜನಿಕರಿಂದ ಮಾಹಿತಿ ಪಡೆಯಲು ನಿರ್ಧರಿಸಿದೆ. ಈ ಹಿನ್ನಲೆ ಇಲ್ಲಿ ನೀಡಿದ ವಾಟ್ಸಪ್-ಇಮೇಲ್ ಐಡಿ ಮುಖಾಂತರ ಮಾಹಿತಿ ನೀಡಬಹುದಾಗಿದೆ.
- Jagadish PB
- Updated on: Dec 20, 2023
- 8:26 pm
ಬಿಟ್ಟೋದ ಗಂಡನನ್ನು ಮತ್ತೆ ಸೇರುವಂತೆ ಮಾಡ್ತೀನೆಂದು ಮಹಿಳೆಗೆ ಲಕ್ಷ ಲಕ್ಷ ಪಂಗಮಾನ; ಆರೋಪಿ ಅರೆಸ್ಟ್
ಬಿಟ್ಟುಹೋದ ಪತಿಯನ್ನು ಜೊತೆಗಿರುವಂತೆ ಮಾಡಿ ಎಂದು ಮಹಿಳೆಯೊಬ್ಬರು ಕೇಳಿಕೊಂಡಿದ್ದು, ಗಂಡ ನಿನ್ನ ಜೊತೆಗೆ ಇರುವಂತೆ ಮಾಡುತ್ತೇನೆ ಎಂದು ಲಕ್ಷ ಲಕ್ಷ ಹಣ ಪಡೆದಿದ್ದ ಆರೋಪಿ ಹಜರತ್ ಮೊಹಮ್ಮದ್, ಬಳಿಕ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಮಹಿಳೆಯು ವಿಧಾನಸೌಧ ಠಾಣೆಗೆ ದೂರು ದಾಖಲಿಸಿದ್ದು, ಇದೀಗ ಆರೋಪಿ ಅಂದರ್ ಆಗಿದ್ದಾನೆ.
- Jagadish PB
- Updated on: Dec 20, 2023
- 4:20 pm