ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸ್ನೇಹಿತೆಯಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ
ಯುವತಿ ಹಾಗೂ ಪ್ರಿಯಕರ ಒಟ್ಟಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಬಂಧಿತ ಅರ್ಪಿತ್ ಮಾಡಿದ್ದಾನೆ. ಪಿಯುಸಿ ಡ್ರಾಪ್ ಔಟ್ ಆದ ಬಳಿಕ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಬೆದರಿಕೆಗೆ ಹೆದರಿದ ಯುವತಿ ಮನೆಯಲ್ಲಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆತನಿಗೆ ನೀಡಿದ್ದಳು.
ಬೆಂಗಳೂರು, ಆಗಸ್ಟ್ 23: ಪ್ರಿಯಕರನೊಂದಿಗಿನ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ ಒಂದಲ್ಲ ಎರಡಲ್ಲಾ ಬರೊಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು (Gold) ಆಕೆಯ ಗೆಳೆಯನೇ ವಸೂಲಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಬ್ಲ್ಯಾಕ್ ಮೇಲ್ ಮಾಡಿದ ಆರ್ಟಿ ನಗರದ ಅರ್ಪಿತ್ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಾರಾಟ ಮಾಡಿದ್ದ ಅಂಗಡಿಗಳ ಪತ್ತೆ ಹಚ್ಚಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಜಯನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇತ್ತ ಮನೆಯಲ್ಲಿದ್ದ 268 ಗ್ರಾಂ ಚಿನ್ನಾಭರಣ ಕಾಣದ ಹಿನ್ನಲೆ ಜ್ಯುವೆಲರಿ ಮಾಲೀಕ ಹುಡುಕಾಡಿದ್ದಾರೆ. ಈ ವೇಳೆ ತನ್ನ ಗೆಳೆಯನಿಗೆ ಕೊಟ್ಟಿದ್ದಾಗಿ ಮಗಳು ಹೇಳಿದ್ದಾರೆ. ಮುಂಬೈನಿಂದ ಓದಲು ಬಂದಿದ್ದ. ಓದು ಮುಗಿದ ಬಳಿಕ ಚಿನ್ನದ ಸಮೇತ ಮುಂಬೈ ಹೊಗಿದ್ದಾನೆ ಎಂದು ಹೇಳಿದ್ದಾಳೆ. ಆ ಬಳಿಕ ಪೊಷಕರಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ.
ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಅಸಲಿ ಸತ್ಯ
ಜಯನಗರ ಪೊಲೀಸರು ವಿಚಾರಣೆ ಆರಂಭಿಸಿದ ವೇಳೆ ಅಸಲಿ ಸಂಗತಿ ಬಯಲಾಗಿದೆ. ಯುವತಿ, ಯುತಿಯ ಪ್ರಿಯಕರ ಹಾಗೂ ಬಂಧಿತ ಸ್ನೇಹಿತ ಅರ್ಪಿತ್, ಎರಡು ವರ್ಷದ ಹಿಂದೆ ಒಂದೇ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು.
ಇದನ್ನೂ ಓದಿ: ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್
ಈ ವೇಳೆ ಯುವತಿ ಹಾಗೂ ಪ್ರಿಯಕರ ಒಟ್ಟಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಬಂಧಿತ ಅರ್ಪಿತ್ ಮಾಡಿದ್ದಾನೆ. ಪಿಯುಸಿ ಡ್ರಾಪ್ ಔಟ್ ಆದ ಬಳಿಕ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಬೆದರಿಕೆಗೆ ಹೆದರಿದ ಯುವತಿ ಮನೆಯಲ್ಲಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆತನಿಗೆ ನೀಡಿದ್ದಳು.
ಪ್ರೇಮ ವೈಫಲ್ಯ: ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
ಮೈಸೂರು: ಪ್ರೇಮ ವೈಫಲ್ಯದಿಂದ ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನನಪ್ಪಿರುವಂತಹ ಘಟನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮೈಸೂರು ತಾಲೂಕಿನ ಹಡಜನ ಗ್ರಾಮದ ಮಧುಸೂದನ್ ಕೊನೆಯುಸಿರೆಳೆದ ಯುವಕ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಸ್ಕೆಚ್, ಸ್ವಲ್ಪದರಲ್ಲೇ ಹತ್ಯೆಯಿಂದ ಪಾರು!
ಮೊನ್ನೆ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ವಿಷಯ ಗೊತ್ತಾಗಿ ಪೋಷಕರು ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.