- Kannada News Photo gallery MLA Sharath Bache Gowda inaugurated the first pink toilet in the state, Bengaluru News in Kannada
ರಾಜ್ಯದ ಮೊದಲ ಪಿಂಕ್ ಶೌಚಾಲಯ ಉದ್ಘಾಟಿಸಿದ ಶಾಸಕ ಶರತ್ ಬಚ್ಚೇಗೌಡ; ಇದರಲ್ಲಿದೆ ಹಲವು ವಿಶೇಷತೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಪಿಂಕ್ ಶೌಚಾಲಯವನ್ನ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ಇದು ಹಲವು ಸೌಲಭ್ಯವನ್ನ ಒಳಗೊಂಡಿದ್ದು, ಸುಲಭವಾಗಿ ಬೇರೆಡೆಗೆ ಸ್ಥಳಾಂತರ ಮಾಡಬಹುದಾದ ಶೌಚಾಲಯವಾಗಿದೆ.
Updated on:Aug 23, 2024 | 5:58 PM

ರಾಜ್ಯದಲ್ಲೆ ಮಹಿಳೆಯರಿಗಾಗಿ ನಿರ್ಮಾಣ ಮಾಡಿರುವ ನೂತನ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಪಿಂಕ್ ಶೌಚಾಲಯನ್ನ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಪಿಂಕ್ ಶೌಚಾಲಯವನ್ನ ಉದ್ಘಾಟಿಸಲಾಗಿದ್ದು, ಹಲವು ಸೌಲಭ್ಯವನ್ನ ಒಳಗೊಂಡಿದೆ.

ಇದನ್ನು ಕಂಟೈನರ್ನಲ್ಲಿ ಮಾಡಲಾಗಿದ್ದು ಸುಲಭವಾಗಿ ಬೇರೆಡೆಗೆ ಸ್ಥಳಾಂತರ ಮಾಡಬಹುದಾದ ಶೌಚಾಲಯವಾಗಿದೆ. ಇದರಿಂದ ಬಹಳಷ್ಟು ಉಪಯೋಗವಾಗಲಿದೆ.

ಇನ್ನು ಈ ಸುಸಜ್ಜಿತ ಅತ್ಯಾಧುನಿಕ ಶೌಚಾಲಯದಲ್ಲಿ ಮಹಿಳೆಯರಿಗೆ ಬೇಕಾದ ಸ್ಯಾನಿಟರಿ ಪ್ಯಾಡ್ಸ್, ಪ್ಯಾಡ್ ವೆಂಡಿಂಗ್ ಮತ್ತು ಬರ್ನಿಂಗ್ ಯಂತ್ರ ಇವೆ.

ಜೊತೆಗೆ ಇಂಡಿಯನ್ ವೆಸ್ಟರ್ನ್ ಕಮೋಡ್, ವಿಶೇಷ ಚೇತನರ ರ್ಯಾಂಪ್ ಪ್ರತ್ಯೇಕ ಶೌಚಾಲಯ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗೊಂಡಿದೆ.

ಇನ್ನು ರಾಜ್ಯದಲ್ಲೆ ಪ್ರಥಮ ಭಾರಿಗೆ ಸರ್ಕಾರದ ವತಿಯಿಂದ ಹೊಸಕೋಟೆಯಲ್ಲಿ ನೂತನ ಪಿಂಕ್ ಶೌಚಾಲಯ ನಿರ್ಮಾಣ ಮಾಡಿದ್ದು, ಎಲ್ಲೆಡೆ ಪಿಂಕ್ ಶೌಚಾಲಯಗಳನ್ನ ಮಹಿಳೆಯರಿಗಾಗಿ ನಿರ್ಮಾಣವಾಗಲಿವೆ.
Published On - 5:58 pm, Fri, 23 August 24