AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್

ನೇಹಾ ಹಿರೇಮಠ ಕೊಲೆ ಇಡೀ ಹುಬ್ಬಳ್ಳಿಯೇ ಬೆಚ್ಚಿಬಿದ್ದಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಮನೆ ಬಳಿ ಹೋಗಿ ನೇಹಾ ಹಿರೇಮಠನಂತೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್
ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್
ಶಿವಕುಮಾರ್ ಪತ್ತಾರ್
| Edited By: |

Updated on:Aug 22, 2024 | 4:22 PM

Share

ಹುಬ್ಬಳ್ಳಿ, ಆಗಸ್ಟ್​ 22: ನಾನು ನಿಮ್ಮ ಮಗಳನ್ನು ಪ್ರೀತಿ ಮಾಡುತ್ತಿದ್ದೇನೆ. ಒಂದು ವೇಳೆ ನಿರಾಕರಿಸಿದರೆ ನೇಹಾ ಹಿರೇಮಠಳಂತೆ ಕೊಲೆ ಮಾಡುವುದು ಸಾರ್ವಜನಿಕವಾಗಿ ಬೆದರಿಕೆ (threat) ಹಾಕಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಾಲಕಿ ಪೋಷಕರಿಂದ ದೂರು ನೀಡಿದ್ದು, ಅಬ್ಬಾಸ್​ ಎಂಬಾತನ ವಿರುದ್ದ ಸೆಕ್ಷನ್ 363, 376, 511, ಐಪಿಸಿ ಯೂ/ಎಸ್​ 74, 329 (4), 351(3) ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಅಪ್ರಾಪ್ತ ಬಾಲಕಿಯು ಶಾಲೆಗೆ ಹೋಗುವಾಗ ಅಬ್ಬಾಸ್​​ ಸ್ನೇಹ ಮಾಡಿಕೊಂಡಿದ್ದಾನೆ. ನಂತರ ಕೆಲ ಬಾರಿ ಗಾರ್ಡನ್​ಗೂ ಕರೆದುಕೊಂಡು ಹೋಗಿದ್ದಾನೆ. ಜೂನ್​ 22 ರಂದು ಶಾಲೆಯಿಂದ ಮನೆಗೆ ಬಿಡುವುದಾಗಿ ಹೇಳಿ ರೇವಡಿಹಾಳ‌ ಬ್ರಿಡ್ಜ್ ಹತ್ತಿರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚರಕ್ಕೆ ಯತ್ನಿಸಿರುವ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಸ್ಕೆಚ್​, ಸ್ವಲ್ಪದರಲ್ಲೇ ಹತ್ಯೆಯಿಂದ ಪಾರು!

ಆಗಸ್ಟ್​​ 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್​ ಗಲಾಟೆ ಮಾಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ದ ದೂರು ದಾಖಲಾಗಿತ್ತು.

20 ಜನರ ಗ್ಯಾಂಗ್​ನಿಂದ ರೌಡಿಶೀಟರ್​ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ನಗರದಲ್ಲಿ ತಡರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ರೌಡಿಶೀಟರ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ವಿಜಯ್​ ಕುಮಾರ್ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಯುವಕನ ಜೀವ ತೆಗೆದ ರೋಡ್‌ ರೇಜ್‌ ರೋಷ, ಬೈಕ್‌ ಟಚ್‌ ಆಗಿದ್ದಕ್ಕೆ ಕಾರಲ್ಲಿ ಗುದ್ದಿ ಕೊಲೆ

ಮನೆ ಬಳಿ‌ ವಾಕ್ ಮಾಡುತ್ತಿದ್ದಾಗ ಸುಮಾರು 20 ಜನರ ಗ್ಯಾಂಗ್​ನಿಂದ ಅಟ್ಯಾಕ್ ಮಾಡಿದ್ದು ಲಾಂಗು, ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರೌಡಿಶೀಟರ್ ವಿಜಯ್ ಕುಮಾರ್ ಚಿಂತಾಜನಕ‌ ಸ್ಥಿಯಲ್ಲಿದ್ದಾರೆ. ಕೊಲೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Thu, 22 August 24