ಗೀತಂ ವಿವಿಯಲ್ಲಿ ಗಲಾಟೆ: ಮಹಿಳಾ ಸೆಕ್ಯೂರಿಟಿ ಎದರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿ
ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಓರ್ವ ವಿದ್ಯಾರ್ಥಿ ಮಹಿಳಾ ಸೆಕ್ಯೂರಿಟಿ ಎದರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತಿಸಿದ್ದಾನೆ. ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು, ಆಗಸ್ಟ್ 21: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ (Students) ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಓರ್ವ ವಿದ್ಯಾರ್ಥಿ ಮಹಿಳಾ ಸೆಕ್ಯೂರಿಟಿ ಎದರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತಿಸಿದ್ದಾನೆ. ವಿದ್ಯಾರ್ಥಿ ಅಸಭ್ಯವಾಗಿ ವರ್ತನೆ ಮಾಡುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿಯ ಅಸಭ್ಯ ವರ್ತನೆ
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಪರಸ್ಪರ ಅವಾಜ್ ಹಾಕಿಕೊಂಡು ಗಲಾಟೆಗೆ ಮುಂದಾಗಿದ್ದರು. ಈ ವೇಳೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಬಳಿಕ ಮಹಿಳಾ ಸೆಕ್ಯೂರಿಟಿ ಗಾರ್ಡ್ ಒಂದು ಗುಂಪನ್ನು ಕ್ಯಾಂಪಸ್ ಒಳಗಡೆ ಕರೆದುಕೊಂಡು ಮತ್ತೊಂದು ಗುಂಪನ್ನು ಹೊರಗಡೆ ಕಳಸಿದ್ದಾರೆ. ಹೋರಗಡೆ ಹೋದ ಒಂದು ಗುಂಪಿನಲ್ಲಿನ ಓರ್ವ ವಿದ್ಯಾರ್ಥಿ ಕಾಲೇಜು ಗೇಟ್ ಮುಂದೆ ಮಹಿಳಾ ಸೆಕ್ಯೂರಿಟಿ ಗಾರ್ಡ್ ಎದರು ಪ್ಯಾಂಟ್ ಬಿಚ್ಚಿ ಅನುಚಿತವಾಗಿ ವರ್ತಿಸಿದ್ದಾನೆ. ಎರಡೂ ಗುಂಪಿನ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿ ಕಳುಹಿಸಿದೆ.
ಜಗಳ ಬಿಡಿಸಿದಕ್ಕೆ ಯುವಕನ ಮೇಲೆ ಹಲ್ಲೆ
ಬೀದರ್: ಜಗಳ ಬಿಡಿಸಿದಕ್ಕೆ ಹೋದ ಯುವಕನ ಮೇಲೆ ಎರಡೂ ಗುಂಪಿನವನರು ಹಲ್ಲೆ ಮಾಡಿರುವ ಘಟನೆ ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮೇಜಾನ್ ಪಾರ್ಸಲ್ ಉದ್ಯೋಗಿ ವಿಜಯ ಕುಮಾರ್ ಹಲ್ಲೆಗೊಳಗಾದ ಯುವಕ.
ಇದನ್ನೂ ಓದಿ: ಬೆಂಗಳೂರು: ನಶೆಯಲ್ಲಿ ಕಾರು ಗಾಜು ಒಡೆದು ಯುವಕನ ಪುಂಡಾಟ
ಬೀದರ್ನ ಓಲ್ಡ್ ಸಿಟಿಯಲ್ಲಿ ಎರಡು ಗುಂಪಿನ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ವಿಜಯ ಕುಮಾರ್ ಜಗಳ ಬಿಡಿಸಿದ್ದಾನೆ. ನಂತರ ಎರಡೂ ಗುಂಪಿನವರು ಬೀದರ್ ನಗರದ ಓಲ್ಡ್ ಆದರ್ಶ ಕಾಲೋನಿಯ ಪಾರ್ಸಲ್ ಅಂಗಡಿಗೆ ನುಗ್ಗಿ ವಿಜಯ ಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿದ ಯುವಕರ ಪತ್ತೆಗೆ ಬೀದರ್ ಪೊಲೀಸರು ಬಲೆ ಬೀಸಿದ್ದಾರೆ.
ಶೌಚಾಲಯ ನಿರ್ಮಾಣದ ವಿಚಾರಕ್ಕೆ ದಾಯಾದಿಗಳ ಮಧ್ಯೆ ಕಲಹ
ಬೆಳಗಾವಿ: ಶೌಚಾಲಯ ನಿರ್ಮಾಣ ವಿಚಾರಕ್ಕೆ ದಾಯಾದಿಗಳ ಮಧ್ಯೆ ಗಲಾಟೆ ನಡೆದಿದೆ. ಬೆಳಗಾವಿ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಘಟನೆ ನಡೆದಿದೆ. ವಸಂತ ಕಾಂಬಳೆ, ಭೀಮಪ್ಪ, ಅಶೋಕ್, ಹಾಗೂ ಪಾರೇಶ ಕಾಂಬಳೆ ಎಂಬುವವರು ತಮ್ಮಣ್ಣ ಕಾಂಬಳೆ ಹಾಗೂ ಕುಟುಬಸ್ಥರ ಮೇಲೆ ಹಲ್ಲೆ ಮಾಡಿರುವ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ದಾಖಲಿಸಿಕೊಳ್ಳಲು ಕುಡಚಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಹಲ್ಲೆಗೊಳಗಾದ ತಮ್ಮಣ್ಣ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ನ್ಯಾಯ ಕೋರಿ ತಮ್ಮಣ್ಣ ಕುಟುಂಬಸ್ಥರು ಎಸ್ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ನ್ಯಾಯ ಕೊಡಿ ಇಲ್ಲ ದಯಾಮರಣಕ್ಕೆ ಅವಕಾಶ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ತಮ್ಮಣ್ಣ ಕಾಂಬಳೆ ಹೆದರಿ ಮಡದಿ ಮಕ್ಕಳೊಂದಿಗೆ ಊರು ಬಿಟ್ಟಿದ್ದು, ಕುಟುಂಬದೊಂದಿಗೆ ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ