ತಾಯಿಗೆ ಹೊಡೆದ ಎಂದು ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಮಗ
ತಾಯಿ ಯಶೋಧಾ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ಮಗ ಹರೀಶ್ ತನ್ನ ಮಲತಂದೆ ನಿತಿನ್ ತುಳಸಿರಾಮ್‌ನನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಯಶೋಧಾ ಎರಡನೇ ಮದುವೆಯಾದಾಗಿನಿಂದಲೂ ನಿತಿನ್ ಕಂಡರೆ ಹರೀಶ್‌ಗೆ ಕೋಪವಿತ್ತು. ನಿರಂತರ ಜಗಳದ ನಡುವೆ ನಡೆದ ಈ ಘೋರ ಹತ್ಯೆಗಾಗಿ ಪೊಲೀಸರು ಹರೀಶ್‌ನನ್ನು ಬಂಧಿಸಿದ್ದಾರೆ.

ತುಮಕೂರು, ಜ.14: ತಾಯಿಗೆ ಹೊಡೆದ ಎಂಬ ಕಾರಣಕ್ಕೆ ಮಲತಂದೆಯನ್ನು ಮಗ ಕೊಂದಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ನಡೆದಿದೆ. ನಿತಿನ್ ತುಳಸಿರಾಮ್(40) ಎಂಬುವವರನ್ನು ತನ್ನ ತಾಯಿಯ ಮೇಲೆ ಕೈ ಮಾಡಿದ ಎಂಬ ಕಾರಣಕ್ಕೆ ಮಗ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಹತ್ಯೆ ಮಾಡಿ ಹರೀಶ್‌ನನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 10 ವರ್ಷದ ಹಿಂದೆ ಯಶೋಧಾ ಅವರ ಮೊದಲ ಪತಿ ಮೃತಪಟ್ಟಿದ್ದ ಕಾರಣ ಮನೆಗೆ ಯಾರು ಆಧಾರ ಇಲ್ಲ, ಮಕ್ಕಳು ಕೂಡ ಚಿಕ್ಕವರಿದ್ದ ಕಾರಣ ಯಶೋಧಾ 3 ವರ್ಷದ ಹಿಂದೆ ನಿತಿನ್ ಅವರನ್ನು ಮದುವೆಯಾಗಿದ್ದರು. ಹರೀಶ್‌ಗೆ ಅಮ್ಮ ಮದುವೆಯಾದಳು ಎಂಬ ಕೋಪ ಕೂಡ ಇತ್ತು. ಜತೆಗೆ ನಿತಿನ್ ತುಳಸಿರಾಮ್ ಅವರನ್ನು ಕಂಡರೆ ಹರೀಶ್ ಉರಿದು ಬೀಳುತ್ತಿದ್ದ. ಈ ಕಾರಣಕ್ಕೆ ಇಬ್ಬರ ನಡುವೆ ಆಗ್ಗಾಗೆ ಜಗಳು ನಡೆಯುತ್ತಿತ್ತು.
ಇದ್ದಿಲು ಕೆಲಸ ಮಾಡುತಿದ್ದ ನಿತಿನ್ ಮೂರು ವರ್ಷಗಳ ಹಿಂದೆ ಯಶೋಧಾ ಅವರು ಮದುವೆಯಾಗಿದ್ದರು. ಈ ಹಿಂದೆ ಬೇರೊಂದು ಮದುವೆಯಾಗಿದ್ದ ಯಶೋಧಾಗೆ ಹರೀಶ್ ಹಾಗೂ ವಸಂತ್ ಎಂಬ ಇಬ್ಬರು ಮಕ್ಕಳಿದ್ದರು. 10 ವರ್ಷಗಳ ಹಿಂದೆ ಮೊದಲ ಪತಿ ಸಾವನ್ನಪ್ಪಿದ್ದಾನೆ. ಮಕ್ಕಳು ಚಿಕ್ಕವರು ಹಾಗೂ ಮನೆ ಜವಾಬ್ದಾರಿಯನ್ನು ನಿಭಾಯಿಸಲು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಯಶೋಧಾ ಎರಡನೇ ಮದುವೆಯಾಗಿದ್ದರು. ಅದರೂ ಮಕ್ಕಳಿಗೆ ನಿತಿನ್ನ್ನು ಕಂಡರೆ ಆಗುತ್ತಿರಲಿಲ್ಲ. ಅಮ್ಮ ಎರಡನೇ ಮದುವೆಯಾಗುವುದು ಕೂಡ ಅವರಿಗೆ ಇಷ್ಟ ಇರಲಿಲ್ಲ. ಅದರಲ್ಲೂ ಹರೀಶ್‌ಗೆ ನಿತಿನ್ ಅಂದ್ರೆ ತುಂಬಾ ಕೋಪ ಇತ್ತು.
ಇದನ್ನೂ ಓದಿ: ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ
ಪ್ರತಿದಿನ ಯಶೋಧಾ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಿತ್ತು. ನೆನ್ನೆ ರಾತ್ರಿ ಸುಮಾರ 1 ಗಂಟೆ ತಡರಾತ್ರಿ ಅಮ್ಮ ಮತ್ತು ಮಲತಂದೆ ನಿತಿನ್ ನಡುವೆ ಜೋರಾಗಿ ಜಗಳ ನಡೆದಿದೆ. ಮಾತಿಗೆ ಮಾತು ಬೆಳದು ನಿತಿನ್ ಅವರು ಯಶೋಧಾ ಮೇಲೆ ಕೈ ಮಾಡಿದ್ದಾರೆ. ಇದನ್ನು ನೋಡಿದ ಹರೀಶ್, ಮನೆಯ ಮೂಲೆಯಲ್ಲಿದ್ದ ಕೊಡಲಿಯನ್ನು ಹಿಡಿದುಕೊಂಡು ಮಲತಂದೆ ನಿತಿನ್ ತಲೆಗೆ ಹೊಡದಿದ್ದಾನೆ. ತಕ್ಷಣ ಕೆಳಗೆ ಬಿದ್ದ ನಿತಿನ್ನ್ನು ಕೊಚ್ಚಿ ಕೊಚ್ಚಿ ಕೊಂದಿದ್ದು, ಸ್ಥಳದಲ್ಲೇ ನಿತಿನ್ ಸಾವನ್ನಪ್ಪಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Wed, 14 January 26