AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ

ಕೆಪಿಸಿಸಿ ರಾಜ್ಯ ಸಂಯೋಜಕರೂ ಆಗಿರುವ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಅವಾಚ್ಯ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸದ್ಯ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಚಪ್ಪಲಿಯಲ್ಲಿ ಹೊಡೆಸಿ ಬೆಂಕಿ ಹಾಕಿಸ್ತೀನಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಕಾಂಗ್ರೆಸ್ ರಾಜ್ಯ ಸಂಯೋಜಕ
ರಾಜೀವ್ ಗೌಡ ಹಾಗೂ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jan 14, 2026 | 10:06 AM

Share

ಚಿಕ್ಕಬಳ್ಳಾಪುರ, ಜನವರಿ 14: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡ ಅವಾಚ್ಯ ಹಾಗೂ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಡು ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕೋಪಗೊಂಡು, ದೂರವಾಣಿ ಕರೆ ಮೂಲಕ ಅವ್ಯಾಚ್ಚ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿತ ರಾಜೀವ್ ಗೌಡ ಅವರು ಕೆಪಿಸಿಸಿ ರಾಜ್ಯ ಸಂಯೋಜಕರಾಗಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ದೂರವಾಣಿ ಕರೆ ವೇಳೆ ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ದಂಗೆ ಮಾಡಿಸುತ್ತೇನೆ’ ಎಂದು ಗಂಭೀರ ಬೆದರಿಕೆ ಹಾಕಲಾಗಿದೆ ಎಂದು ಪೌರಾಯುಕ್ತೆ ಅಮೃತಾ ಗೌಡ ದೂರಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ಮೇಲೂ ಅವ್ಯಾಚ್ಚ ಹಾಗೂ ಅಶ್ಲಿಲ ಪದಗಳಿಂದ ನಿಂದನೆ ನಡೆದಿದ್ದು, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೂ ಅವಮಾನಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಮ್ಯಾ, ವಿಜಯಲಕ್ಷ್ಮಿ ಬೆನ್ನಲ್ಲೇ ಕಾಂಗ್ರೆಸ್ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ

ಈ ಘಟನೆಯಿಂದ ಶಿಡ್ಲಘಟ್ಟ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಯಭೀತಗೊಂಡಿದ್ದು, ಸಾರ್ವಜನಿಕ ಸೇವೆ ನಿರ್ವಹಿಸುವ ಅಧಿಕಾರಿಗಳಿಗೆ ಈ ರೀತಿಯ ಬೆದರಿಕೆಗಳು ಅಸಹ್ಯಕರವಾಗಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Wed, 14 January 26

ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಟ್ರಂಪ್
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಹರ್ಮನ್​ಪ್ರೀತ್ ಕೌರ್
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ