AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಿಮ್ಮ ಪಂಚಾಯ್ತಿಯಲ್ಲೂ ಸಿಗುತ್ತೆ ಇ-ಖಾತಾ: ಇದರ ಉಪಯೋಗವೇನು?

E-Khata: ಹಳ್ಳಿಗಳಲ್ಲಿ ನಾಗರಿಕರಿಗೆ ಆಸ್ತಿ ದಾಖಲೆಗಳನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಕಾಗದಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಆದರೆ, ಕಂದಾಯ ಇಲಾಖೆ ಇ-ಖಾತಾ ಯೋಜನೆಯನ್ನು ಪರಿಚಯಿಸಿದ್ದು, ಆಸ್ತಿ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು..ಇನ್ಮುಂದೆ ಪಂಚಾಯ್ತಿ ವ್ಯಾಪ್ತಿಯಲ್ಲೂ ಇ-ಖಾತಾ ಸಿಗಲಿದೆ. ಹಾಗಾದ್ರೆ, ಇದರ ಉಪಯೋಗವೇನು ಎಂದು ತಿಳಿದುಕೊಳ್ಳಿ.

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಿಮ್ಮ ಪಂಚಾಯ್ತಿಯಲ್ಲೂ ಸಿಗುತ್ತೆ ಇ-ಖಾತಾ: ಇದರ ಉಪಯೋಗವೇನು?
E Khata
Jagadish PB
| Edited By: |

Updated on:Oct 06, 2025 | 2:28 PM

Share

ಬೆಂಗಳೂರು, (ಜೂನ್ 29): ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಇ-ಖಾತಾ (E-Khata) ಅಭಿಯಾನ ಹಮ್ಮಿಕೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್-ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇದ್ದ ಇ-ಖಾತಾ ವಿತರಣೆ ಇನ್ಮುಂದೆ ಪಂಚಾಯಿತಿ (Grama Panchayat) ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್​ಲ್ಯಾನ್ ಮಾಡಿದ್ದು, ಇದೇ ಜುಲೈ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಇ-ಖಾತಾ ಸಿಗುವ ಸಾಧ್ಯತೆಗಳಿವೆ.

ಈ ಬಗ್ಗೆ ಟಿವಿ9ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದು, ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಆದ್ರೆ, ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಲಾಗಿದ್ದು, ಜುಲ್ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ನೋಂದಣಿಗೆ ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜುಲೈ 1 ರಿಂದ ಮನೆ ಬಾಗಿಲಿಗೆ ಬರಲಿದೆ ಕರಡು ಇ ಖಾತಾ: ಬಿಬಿಎಂಪಿ ಮಹತ್ವದ ಕ್ರಮ

ಸದ್ಯ ಬೆಂಗಳೂರಲ್ಲಿ 50 ಲಕ್ಷ ಇ-ಖಾತಾ ನೋಂದಣಿಯಾಗಿದೆ . ಬ್ಯಾಟರಾಯನಪುರ ವ್ಯಾಪ್ತಿಯಲ್ಲೇ 50 ಸಾವಿರ ನೋಂದಣಿಯಾಗಿದೆ . ಇವತ್ತು ಜನರಿಗೆ ಮೇಳದ ಮೂಲಕ ಖಾತಾ ವಿತರಿಸ್ತಿದ್ದೇವೆ .ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ ನೀಡುತ್ತಾರೆ. ಸದ್ಯ ಈಗಾಗಲೇ ಬೆಳಗ್ಗೆಯಿಂದ 2 ಸಾವಿರ ಜನರು ನೋಂದಣಿಗೆ ಬಂದಿದ್ದಾರೆ. ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲೂ ಮೇಳ ನಡೆಸಲು ಸರ್ಕಾರ ಚಿಂತಿಸಲಿದೆ . ಸದ್ಯ ಇದರಿಂದ ಜನರಿಗೆ ಸುಲಭವಾಗಿ ಇ-ಖಾತಾ ಪಡೆಯಲು ಸಹಾಯವಾಗುತ್ತೆ . ಇ-ಖಾತಾ ಇದ್ರೆ ನಿಮ್ಮ ಆಸ್ತಿಗೆ ಸುರಕ್ಷತೆ ಇರುತ್ತೆ ಎಂದರು.

ಇ-ಖಾತಾ ಎಂದರೆ ಏನು?

ರಾಜ್ಯದಲ್ಲಿ A ಖಾತಾ E ಮತ್ತು B ಆಸ್ತಿ ದಾಖಲೆ ಎಂದು ವಿಭಜಿಸಲಾಗಿದೆ. ಹೀಗಾಗಿ ಖಾತೆಗಳ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಖಾತಾಗಳ ಬಗ್ಗೆ ಜನರಲ್ಲಿ ಗೊಂದಲ ಇದೆ. ಆ ಎಲ್ಲಾ ಗೊಂದಲಗಳಿಗೆ ಇಲ್ಲಿ ಉತ್ತರ ಇದೆ. ಖಾತಾ ಪ್ರಮಾಣ ಪತ್ರ ಎನ್ನುವುದು ಆಸ್ತಿ ಮಾಲೀಕತ್ವ ಹಾಗೂ ಆ ಆಸ್ತಿಯ ನಿಖರ ಮಾಹಿತಿಯಾಗಿದೆ. ಬಿಬಿಎಂಪಿ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ನೀಡುವ ಈ ಪ್ರಮಾಣಪತ್ರದಲ್ಲಿ ಆಸ್ತಿಯ ಗಾತ್ರ, ಯಾವ ಪ್ರದೇಶ, ಸ್ಥಳ ಹಾಗೂ ಆ ಆಸ್ತಿ ವಸತಿ ಅಥವಾ ವಾಣಿಜ್ಯ ಯಾವ ವ್ಯಾಪ್ತಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಅದರಲ್ಲಿ ಇರುತ್ತದೆ. E-ಖಾತಾ ಎನ್ನುವುದು A ಖಾತಾದ ಡಿಜಿಟಲ್ ಆವೃತ್ತಿಯಾಗಿದೆ. ರಾಜ್ಯದಲ್ಲಿ ಇದೀಗ ಆಸ್ತಿ ನೋಂದಣಿಗೆ E-ಖಾತಾ ಕಡ್ಡಾಯವಾಗಿದೆ.

  •  ಇ-ಖಾತಾ ಎನ್ನುವುದು ಆಸ್ತಿ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ.
  • ಇ-ಖಾತಾ ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುತ್ತದೆ. ಇದರಿಂದ ಆಸ್ತಿ ಮಾರಾಟ ಹಾಗೂ ಖರೀದಿ ಮಾಡುವುದಕ್ಕೆ ಸಹಾಯ ಆಗುತ್ತದೆ.
  • ಇ-ಖಾತಾ ಆಸ್ತಿ ಪಾರದರ್ಶಕತೆಯನ್ನು ಸೂಚಿಸುತ್ತದೆ. ಅಲ್ಲದೆ ಆಸ್ತಿ ಲೋಪಗಳನ್ನು ಕಡಿಮೆ ಮಾಡುತ್ತದೆ.
  • ಇ-ಖಾತಾ ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವಾಗ ಮೋಸ ಹೋಗದಂತೆ ತಡೆಯುತ್ತದೆ

ಇನ್ನು ನೀವು ಇ -ಖಾತಾ ಮಾಡಿಸಿಕೊಳ್ಳುವುದರಿಂದ ಹಲವು ಲಾಭಗಳಿವೆ. ಇ -ಖಾತಾ ಮಾಡಿಸಿಕೊಂಡಿದ್ದರೆ, ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟದಲ್ಲಿ ಹಲವು ಲಾಭಗಳು ಆಗಲಿವೆ. ಅಲ್ಲದೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆ ಹಾಗೂ ವಿವರಗಳು ಅದರಲ್ಲೇ ಲಭ್ಯವಾಗಲಿದೆ.

Published On - 10:49 am, Sun, 29 June 25

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು