ಕೊರಮಂಗಲ ಪಿಜಿಯಲ್ಲಿ ಯುವತಿ ಕೊಲೆ ಬಳಿಕ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ

ಮಹಿಳಾ ಪಿಜಿಗಳನ್ನು ನಡೆಸುವವರು ಅಗತ್ಯ ಭದ್ರತೆ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದದ್ದು ಅತ್ಯಗತ್ಯ. ಹೀಗಾಗಿಯೇ ಕೊರಮಂಗಲದ ಪಿಜಿಯಲ್ಲಿ ಯುವತಿಯ ಕೊಲೆಯಾದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ಪಿಜಿಗಳ ವ್ಯವಸ್ಥೆ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಜತೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ.

ಕೊರಮಂಗಲ ಪಿಜಿಯಲ್ಲಿ ಯುವತಿ ಕೊಲೆ ಬಳಿಕ ಎಚ್ಚೆತ್ತ ಪೊಲೀಸರು, ಬೆಂಗಳೂರು ಪಿಜಿಗಳಿಗೆ ಕಠಿಣ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Aug 01, 2024 | 8:13 AM

ಬೆಂಗಳೂರು, ಆಗಸ್ಟ್ 1: ಕೊರಮಂಗಲದಲ್ಲಿ ನಡೆದಿದ್ದ ಕೃತಿ ಕುಮಾರಿ ಕೊಲೆ ಪ್ರಕರಣ ಇಡಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಹಂತಕನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯ ಎಂಥರ ಎದೆಯನ್ನೂ ಝಲ್ ಎನ್ನಿಸುವಂತಿತ್ತು. ಆದರೆ, ಇದರ ನಡುವೆ, ಅದೊಂದು ಅವ್ಯವಸ್ಥೆ ಆ ದೃಶ್ಯದ ಮುಖಾಂತರ ಕಂಡು ಬಂದಿತ್ತು. ಏನೆಂದರೆ, ಮಹಿಳಾ ಪಿಜಿಗೆ ಅಷ್ಟು ಸಲಿಸಾಗಿ ವ್ಯಕ್ತಿ ಹೇಗೆ ಒಳಬರಲು ಸಾಧ್ಯ? ಅಲ್ಲಿನ ಯುವತಿಯರ ಭದ್ರತೆ ಹೇಗಿತ್ತು ಎಂಬುದು. ಈ ಪ್ರಶ್ನೆ ಈಗ ನಗರ ಪೊಲೀಸ್ ಆಯುಕ್ತರಿಂದ ಬಂದಿದೆ. ಕೇವಲ ಒಂದು ಪಿಜಿಯಲ್ಲ, ನಗರದ ಎಲ್ಲಾ ಪಿಜಿಗಳ ಡೇಟಾ ಸಂಗ್ರಹಿಸುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೂಚನೆ ನೀಡಿದ್ದಾರೆ.

ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್​​​ಪೆಕ್ಟರ್​​ಗಳಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ‌ ನೀಡಿದ್ದು, ಪ್ರತಿಯೊಂದು ಪಿಜಿಯ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಎಲ್ಲಾ ಪಿಜಿಗಳ ಗುರುತಿಸುವುದರ ಜೊತೆಗೆ ಪಿಜಿಯವರು ಪಾಲಿಸಬೇಕಾದ ಹಾಗೂ ಪೊಲೀಸರು ಕ್ರಮಕೈಗೊಳ್ಳಬೇಕಾದ ಒಟ್ಟು 13 ಅಂಶಗಳ ಮಾರ್ಗಸೂಚಿ ನೀಡಿದ್ದಾರೆ.

ಪಿಜಿಗಳಿಗೆ ಮಾರ್ಗಸೂಚಿ

  • ಪಿಜಿಗಳಲ್ಲಿ ಮುಖ್ಯವಾಗಿ ಸಿಸಿಟಿವಿ ಅಳವಡಿಸಬೇಕು.
  • ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಬೇಕು.
  • ಪಿಜಿಯಲ್ಲಿ ವಾಸ ಮಾಡುವ ಪ್ರತಿಯೊಬ್ಬರ ಡೇಟಾ ಕಲೆಕ್ಟ್ ಮಾಡಬೇಕು.
  • ಪಿಜಿಯಲ್ಲಿ ವಾಸಿಸುವವರ ಕೆವೈಸಿ ಮಾಡಿಸಬೇಕು.
  • ಹೊಸದಾಗಿ ಜಾರಿಗೆ ತಂದಿರೋ ಸಾಫ್ಟ್​​ವೇರ್​​ನಲ್ಲಿ ಎಲ್ಲಾ ಮಾಹಿತಿ ಅಪ್ಲೋಡ್ ಮಾಡಬೇಕು.
  • ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
  • ಆಹಾರದ ಗುಣಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು.
  • ಪಿಜಿಗಳ ಟ್ರೇಡ್ ಲೆಸೆನ್ಸ್​​ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು.
  • ಅನಧಿಕೃತ ಎಂದು ಕಂಡು ಬಂದ್ರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು.
  • ಅಕ್ರಮ ,ಅನೈತಿಕ ಚಟುವಟಿಕೆ ನಡೆಯುತ್ತಿದ್ರೆ, ಮಾಹಿತಿ ಕಲೆ ಹಾಕಬೇಕು.
  • ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಕೇಸ್ ದಾಖಲಿಸುವುದು.
  • ತಿಂಗಳಿಗೊಮ್ಮೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ ಮಾಡಬೇಕು.
  • ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಬೆಂಗಳೂರಿನಲ್ಲಿ ಹೆಚ್ಚಿವೆ ಅನಧಿಕೃತ ಪಿಜಿಗಳು

ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪರಿಶೀಲನೆಗೆ ಮುಂದಾದ ಪೊಲೀಸರಿಗೆ ನಗರದಲ್ಲಿ ಅನಧಿಕೃತ ಪಿಜಿಗಳು ಹೆಚ್ಚಾಗಿರುವುದು ಗೊತ್ತಾಗಿದೆ. ಇದು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಟ್ಟಿಕೊಂಡಿರುವ ಪಿಜಿಗಳಾಗಿದ್ದು, ಇದರ ಸಂಬಂಧ ಬಿಬಿಎಂಪಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

ಒಟ್ಟಾರೆ ಪೊಲೀಸರ ಈ ಹೊಸ ನಿಯಮಗಳು ಮುಂದಿನ ದಿನಗಳ ಯಾವ ರೀತಿ ಜಾರಿಯಾಗಲಿದೆ? ಪಿಜಿಗಳಲ್ಲಿ ಸುರಕ್ಷತಾ ಕ್ರಮ ಎಷ್ಟರ ಮಟ್ಟಿಗೆ ಇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ