ವರದಕ್ಷಿಣೆಯಾಗಿ ಬಿಎಂಡಬ್ಲ್ಯೂ ಕಾರು ಕೊಡಲಿಲ್ಲ ಎನ್ನುವ ಕಾರಣಕ್ಕೆ ನಿಂತ ಮದುವೆ, ವೈದ್ಯೆ ಆತ್ಮಹತ್ಯೆ
ಮದುವೆ ನಿಂತಿದ್ದಕ್ಕೆ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಆಕೆಯ ಬಾಯ್ ಫ್ರೆಂಡ್ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ವರದಕ್ಷಿಣೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು, ಕೇಳಿದ್ದನ್ನೆಲ್ಲಾ ಕೊಡದ ಕಾರಣ ಮದುವೆಯಾಗದಿರಲು ಗೆಳೆಯ ನಿರ್ಧರಿಸಿದ್ದ.
ಮದುವೆ ನಿಂತಿದ್ದಕ್ಕೆ 26 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಅವರ ಬಾಯ್ ಫ್ರೆಂಡ್ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ವರದಕ್ಷಿಣೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು, ಕೇಳಿದ್ದನ್ನೆಲ್ಲಾ ಕೊಡದ ಕಾರಣ ಮದುವೆಯಾಗದಿರಲು ಗೆಳೆಯ ನಿರ್ಧರಿಸಿದ್ದ.
ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರನ ಮನೆಯವರು ವರದಕ್ಷಿಣೆಯಾಗಿ 150 ಚಿನ್ನದ ನಾಣ್ಯಗಳು, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರು ಎಂದು ಸಹನಾ ಕುಟುಂಬ ಆರೋಪಿಸಿದೆ. ಅಷ್ಟು ಕೊಡಲು ಸಾಧ್ಯವಿಲ್ಲ ಎಂದಾಗ ಸಿಟ್ಟಿನಿಂದ ಮದುವೆ ರದ್ದು ಮಾಡಿದ್ದಾರೆ. ಇದರಿಂದ ಸಹನಾ ದಿಢೀರ್ ಖಿನ್ನತೆಗೆ ಒಳಗಾಗಿದ್ದರು. ಘಟನೆ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ, ಮೃತ ಡಾ.ಸಹನಾ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪಿಜಿ ಮಾಡುತ್ತಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ ಕಾಯ್ದೆಯಡಿ ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದೆ.
ಡಾ.ಸಹನಾ ತನ್ನ ತಾಯಿಯೊಂದಿಗೆ ತಿರುವನಂತಪುರಂನಲ್ಲಿ ನೆಲೆಸಿದ್ದಾರೆ. ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನರಾದರು. ಕೆಲವು ದಿನಗಳ ನಂತರ, ಅವರು ಡಾ. ರುವೈಸ್ ಅವರ ಸಂಪರ್ಕಕ್ಕೆ ಬಂದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ವರದಕ್ಷಿಣೆ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು.
ಮತ್ತಷ್ಟು ಓದಿ: ಬೆಂಗಳೂರು: ಬಾರ್ನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!
ಡಿಸೆಂಬರ್ 14ರೊಳಗೆ ಸಂಪೂರ್ಣ ವರದಿಯೊಂದಿಗೆ ಆಯೋಗದ ಮುಂದೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ವೀಣಾ ಚಾರ್ಜ್ ಹೇಳಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಂತ್ರಸ್ತೆಯ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ