Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! ಈ ವರ್ಷ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ ಸಾಧ್ಯತೆ

ಬೆಂಗಳೂರು ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್​​ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದೀಗ ತಿಳಿದುಬಂದ ಮಾಹಿತಿ ಪ್ರಕಾರ, ಕಳೆದ 11 ತಿಂಗಳಲ್ಲಿ ಸುಮಾರು 16 ಸಾವಿರ ಸೈಬರ್ ಪ್ರಕರಣಗಳು ದಾಖಲಾಗಿವೆ.

11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! ಈ ವರ್ಷ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ ಸಾಧ್ಯತೆ
11 ತಿಂಗಳಲ್ಲಿ ಬೆಂಗಳೂರಿನಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! (ಸಾಂದರ್ಭಿಕ ಚಿತ್ರ)Image Credit source: Getty Images
Follow us
TV9 Web
| Updated By: Rakesh Nayak Manchi

Updated on: Dec 07, 2023 | 10:55 AM

ಬೆಂಗಳೂರು, ಡಿ.7: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ 11 ತಿಂಗಳಲ್ಲಿ ಸುಮಾರು 16 ಸಾವಿರ ಸೈಬರ್ ಪ್ರಕರಣಗಳು (Cyber case) ದಾಖಲಾಗಿವೆ. ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (CID) ಯ ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 15,779 ಸೈಬರ್ ಅಪರಾಧಗಳು (Cyber Crime) ಅಥವಾ ಒಟ್ಟು ಅಪರಾಧಗಳಲ್ಲಿ 23.4% (67,446) ರಷ್ಟು ದಾಖಲಾಗಿವೆ. ನಗರದಲ್ಲಿ ವರದಿಯಾದ 46 ಸೈಬರ್ ಅಪರಾಧಗಳಲ್ಲಿ ಫಿಶಿಂಗ್, OTP ವಂಚನೆಗಳು, ಸುಲಿಗೆ ಅತ್ಯಂತ ಸಾಮಾನ್ಯವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ವರದಿಯು ಬೆಂಗಳೂರಿನಲ್ಲಿ ಕಳೆದ ವರ್ಷ 9,940 ಸೈಬರ್ ಅಪರಾಧಗಳು ವರದಿಯಾಗಿರುವ ಬಗ್ಗೆ ತೋರಿಸಿದ ಕೆಲವೇ ದಿನಗಳಲ್ಲಿ ಸಿಐಡಿ ಈ ಡೇಟಾವನ್ನು ಹಂಚಿಕೊಂಡಿದೆ. ಅತಿ ಹೆಚ್ಚು ಸೈಬರ್ ಕ್ರೈಂ ದಾಖಲಾದ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಮುಂಬೈ (4,724) ಮತ್ತು ಮೂರನೇ ಸ್ಥಾನದಲ್ಲಿ ಹೈದರಾಬಾದ್ (4,436) ಇದೆ.

ಬೆಂಗಳೂರಿನಲ್ಲಿ ಕಳೆದ ವರ್ಷ 50,679 ಅಪರಾಧಗಳು ವರದಿಯಾಗಿದ್ದವು. ಕರ್ನಾಟಕದಲ್ಲಿ ದಾಖಲಾದ ಸೈಬರ್ ಪ್ರಕರಣಗಳಲ್ಲಿ ಶೇ.81 ರಷ್ಟು ಸೈಬರ್ ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಬೆಂಗಳೂರು ಈ ವರ್ಷ ಸೈಬರ್ ಅಪರಾಧಗಳಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿರುವ ಸಾಧ್ಯತೆಯಿದೆ. ಮಾಸಿಕ ಸರಾಸರಿಯಂತೆ, 2023 ರಲ್ಲಿ ಸುಮಾರು 18,000 ಸೈಬರ್ ಅಪರಾಧಗಳು ದಾಖಲಾಗಬಹುದು.

ಇದನ್ನೂ ಓದಿ: ಹೈಕೋರ್ಟ್​ ಕಲಾಪಕ್ಕೆ ಸೈಬರ್​ ಹ್ಯಾಕರ್ಸ್​​ ಹಾವಳಿ, ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

ಈ ಬಗ್ಗೆ ಸುದ್ದಿಸಂಸ್ಥೆ ಡೆಕ್ಕನ್ ಹೆರಾಲ್ಡ್ ಜೊತೆ ಮಾತನಾಡಿದ ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಪೊಲೀಸರ ಗಮನಕ್ಕೆ ಬರುವ ಎಲ್ಲಾ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ನಮ್ಮಲ್ಲಿ ಎಂಟು ವಿಶೇಷ ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳಿವೆ. ಇತರ ಪೊಲೀಸ್ ಠಾಣೆಗಳು ಸಹ ಸೈಬರ್​ ಪ್ರಕರಣಗಳನ್ನು ತೆಗೆದುಕೊಳ್ಳುತ್ತವೆ ಎಂದರು. “ಬೆಂಗಳೂರಿನಲ್ಲಿ ಹಲವಾರು ಸೈಬರ್ ಅಪರಾಧಗಳು ದಾಖಲಾಗಲು ಇದೂ ಒಂದು ಕಾರಣ” ಎಂದರು.

ನಗರದ ಪೋಲೀಸ್ ವ್ಯಾಪ್ತಿಯಿಂದ ಅಥವಾ ಭಾರತದ ಹೊರಗೆ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚುವುದು ಕಷ್ಟ ಎಂದು ಸಲೀಮ್ ಹೇಳಿದ್ದಾರೆ. ಸೈಬರ್ ಅಪರಾಧಗಳ ತನಿಖೆ, ಸಾಕ್ಷ್ಯ ಸಂಗ್ರಹಣೆ ಮತ್ತು ಪತ್ತೆಹಚ್ಚುವಿಕೆಯನ್ನು ಸುಧಾರಿಸಲು, ಸಿಐಡಿ ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು ಮತ್ತು ನ್ಯಾಯಾಂಗಕ್ಕೆ ತರಬೇತಿ ನೀಡುತ್ತಿದೆ. ಈ ವರ್ಷ ಈಗಾಗಲೇ 6,000 ಮಂದಿಗೆ ತರಬೇತಿ ನೀಡಲಾಗಿದೆ ಅವರಲ್ಲಿ ಹೆಚ್ಚಿನವರು ಪೊಲೀಸ್ ಅಧಿಕಾರಿಗಳು ಎಂದರು. ನಾಗರಿಕರು ತಮ್ಮ ಫೋನ್‌ಗಳಲ್ಲಿನ ಸಂಶಯಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಸಲೀಂ ಮನವಿ ಮಾಡಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ