ವೀಡಿಯೋ ಕಾಲ್ ಮಾಡಿ ವೈದ್ಯನ ಅಕೌಂಟ್‍ನಿಂದ ಹಣ ದೋಚಿದ ಸೈಬರ್ ವಂಚಕರು!
ಒಟಿಪಿ, ಬಯೋಮೆಟ್ರಿಕ್, ಅಕೌಂಟ್‍ಹ್ಯಾಕ್, ಎಟಿಎಂ ಕಾರ್ಡ್ ಬದಲಾವಣೆ ಸೇರಿದಂತೆ ವಿವಿಧ ರೂಪಗಳಲ್ಲಿ ಸೈಬರ್ ವಂಚನೆ ಮಾಡುವ ವಂಚಕರು ದಿನಕ್ಕೊಂದು ವಿನೂತನ ರೀತಿಯಲ್ಲಿ ವಂಚನೆಯ ಹಾದಿ ಹಿಡಿದಿದ್ದಾರೆ. ಇನ್ನೂ ಮುಂದುವರೆದು ವೀಡಿಯೋಕಾಲ್‍ಗಳ ಮೂಲಕ ವಂಚನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳು, ವಂಚನೆ ಪ್ರಕರಣಗಳು (Cyber fraud) ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ವರದಿಯಾಗುತ್ತಿವೆ. ಸುಲಭವಾಗಿ ಹಣ ಮಾಡಲು ಇಳಿದಿರುವ ಸೈಬರ್ ವಂಚಕರು ಸ್ಮಾರ್ಟ್‍ಪೋನ್‍ನಲ್ಲಿ ವಾಟ್ಸಾಪ್ ವೀಡಿಯೋ ಕಾಲ್‍ನ್ನು ಬಳಸಿಕೊಂಡು (video call ) ವಿನೂತನವಾಗಿ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ.
ಇವರು ಡಾಕ್ಟರ್ ಗಿರೀಶ್ ಗಾವಲ್, ವೈದ್ಯ ವೃತ್ತಿಯಲ್ಲಿ ತೊಡಗಿರುವ ಇವರು ಚಿಕ್ಕಬಳ್ಳಾಪುರ ನಗರದಲ್ಲಿ (chikkaballapur) ಕ್ಲಿನಿಕ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಡೆಂಟಲ್ ಸರ್ಜನ್‍ನಲ್ಲಿ ಹೆಸರುವಾಸಿಯಾಗಿರುವ ಗಿರೀಶ್ ಸೈಬರ್ ವಂಚಕರು ಹೇಳಿದಂತೆ ಕೇಳಿ 50 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಅತ್ತ ತಾನು ಸಿಆರ್‍ಪಿಎಫ್ ಮಿಲ್ಟ್ರಿ ಯೋಧ, ತಮ್ಮ 27 ಸಹೋದ್ಯೋಗಿಗಳ ಸಮೇತ ಕ್ಲಿನಿಕ್‍ಗೆ ಬಂದು ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾನೆ. ನಂತರ ಇಲಾಖೆಯಿಂದ ವೈದ್ಯನಿಗೆ ಅಡ್ವಾನ್ಸ್ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದಾನೆ. ಅವರ ಮಾತನ್ನು ನಂಬಿ ಅಪರಿಚಿತನ ವೀಡಿಯೋಕಾಲ್ ರಿಸೀವ್ ಮಾಡಿದ್ದಾನೆ. ನಂತರ ತನ್ನ ಪೋನ್‍ನಲ್ಲಿ ಬ್ಯಾಕ್ ಕ್ಯಾಮರಾ ಆನ್ ಮಾಡಿಕೊಂಡು, ತನ್ನದೇ ಪೋನ್‍ಪೇ, ಗೂಗಲ್‍ಪೇ ಮೂಲಕ ಡಾಕ್ಟರ್ ಗಿರೀಶ್‍ರವರು ಅಪರಿಚಿತ ವ್ಯಕ್ತಿ ಹೇಳಿದ ಕ್ರೆಡಿಟ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ 2 ಬಾರಿ 20 ಸಾವಿರ, 2 ಬಾರಿ 5 ಸಾವಿರ ರೂಪಾಯಿ ಹಣ ಹಾಕಿ ಮೋಸಹೋಗಿದ್ದಾನೆ.
ಇದನ್ನೂ ಓದಿ: ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ, ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ
ಇನ್ನು ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ವೀಡಿಯೋ ಕಾಲ್ ವೀಕ್ಷಣೆಯಲ್ಲಿ ಅಪರಿಚಿತ ವ್ಯಕ್ತಿ ಹೇಳಿದಂತೆ ಕೇಳಿ 50 ಸಾವಿರ ರೂಪಾಯಿ ಕಳೆದುಕೊಂಡಿರುವ ಡಾ|| ಗಿರೀಶ್ ಗಾವಲ್ ನ್ಯಾಯ ಕೊಡಿಸುವಂತೆ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ವಂಚಕರು ಅಕೌಂಟ್‍ಗೆ ಹಣ ಹಾಕಿಸಿಕೊಳ್ಳುವುದರ ಬದಲು ಕ್ರೆಡಿಟ್ ಕಾರ್ಡ್‍ಗೆ ಹಣ ಹಾಕಿಸಿಕೊಂಡಿರುವ ಕಾರಣ, ಹಣ ವಾಪಸ್ಸು ಬರುವುದು ಕಷ್ಟಸಾಧ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.