Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್​ ಅಂತಾರೆ: ವರ್ಕೌಟ್ ಆಗಲ್ಲ ಎಂದ ಆರ್​​ ಅಶೋಕ್

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್​ನವರು ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್ ಎನ್ನುತ್ತಾರೆ. ಇದೆಲ್ಲಾ ಈಗ ವರ್ಕೌಟ್ ಆಗಲ್ಲ. ರಾಜ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಿಂದಿನ ಎಲ್ಲಾ ಯೋಜನೆ ಸ್ಥಗಿತವಾಗಿದೆ ಎಂದು ಕಿಡಿಕಾರಿದ್ದಾರೆ.

ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್​ ಅಂತಾರೆ: ವರ್ಕೌಟ್ ಆಗಲ್ಲ ಎಂದ ಆರ್​​ ಅಶೋಕ್
ವಿಪಕ್ಷ ನಾಯಕ ಆರ್. ಅಶೋಕ್
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 27, 2024 | 3:00 PM

ಬೆಂಗಳೂರು, ಜನವರಿ 27: ಕಾಂಗ್ರೆಸ್​ನವರು ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್ ಎನ್ನುತ್ತಾರೆ. ಇದೆಲ್ಲಾ ಈಗ ವರ್ಕೌಟ್ ಆಗಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಿಂದಿನ ಎಲ್ಲಾ ಯೋಜನೆ ಸ್ಥಗಿತವಾಗಿದೆ. ಲ್ಯಾಪ್ ಟಾಪ್ ಕೂಡ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಕೇವಲ ಟಾಪ್​ಗೆ ಹಣ ಸರಬರಾಜು ಅಷ್ಟೇ. ಇದರ ವಿರುದ್ಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಕೊಟ್ಟ ಹಣಕ್ಕಿಂತ ದುಪ್ಪಟ್ಟು ಹಣ ಮೋದಿ ಕಾಲದಲ್ಲಿ ರಾಜ್ಯಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಂಬಂಧ ಮಧ್ಯಾಹ್ನದ ಮೇಲೆ ಚರ್ಚೆ ನಡೆಯಲಿದೆ. ಮುಸ್ಲಿಂರಿಗೆ 10 ಸಾವಿರ ರೂ. ಕೋಟಿ, ರೈತರಿಗೆ 105 ಕೋಟಿ ರೂ. ನೆರವು ಇದು ರಾಜ್ಯ ಸರ್ಕಾರದ ಧೋರಣೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬಿಜೆಪಿ ರಾಜ್ಯ ಉಸ್ತುವಾರಿಗಳ ಪಟ್ಟಿ ಪ್ರಕಟ, ಕರ್ನಾಟಕಕ್ಕೆ ಯಾರು?

ಕಾರ್ಯಕಾರಿಣಿಗೆ ಕೆಲವರ ಗೈರು ವಿಚಾರವಾಗಿ ಮಾತನಾಡಿದ ಅವರು, ಎಲ್ಲರಿಗೂ ಆಹ್ವಾನ ಕಳುಹಿಸಲಾಗಿದೆ. ಕಾರಣಾಂತರಗಳಿಂದ ಕೆಲವರು ಬಂದಿಲ್ಲ. ಅವರ ಜೊತೆ ಮಾತನಾಡುತ್ತೇವೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವು ಸುಗಮವಾಗಿದೆ. ಎಲ್ಲರಿಗೂ ಆಹ್ವಾನ ಹೋಗಿದೆ ಎಂದಿದ್ದಾರೆ.

ಕಾಂಗ್ರೆಸ್​​ ವಿರುದ್ಧ R​.ಅಶೋಕ್​ ವಾಗ್ದಾಳಿ

ಸಂಸದ ರಾಘವೇಂದ್ರರನ್ನ ಶಾಮನೂರು ಹೊಗಳಿದ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್ ಮನೆಯೊಂದು 3 ಬಾಗಿಲಾಗಿದೆ. ಮುಂದೆ ಕಾಂಗ್ರೆಸ್​​ ಮನೆ ಒಡೆದು 100 ಚೂರು ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಬೆಂಬಲಿಸಿ ರಾಘವೇಂದ್ರಗೆ ಮತ ನೀಡಿ ಅಂದಿದ್ದಾರೆ. ಇದು ಏನು ಸಂದೇಶ ನೀಡುತ್ತದೆ ಎಂದು ಗೊತ್ತಲ್ವಾ ಎಂದು ಹೇಳಿದ್ದಾರೆ.

ಪಕ್ಷಕ್ಕೆ ವಾಪಸ್ ಬರುವಂತೆ ಕರೆ ನೀಡಿದ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಮೋದಿಯನ್ನು ವಿರೋಧ ಮಾಡಬೇಕು, ಒಂದು ವರ್ಗವನ್ನು ಓಲೈಕೆ ಮಾಡಬೇಕು ಅಂತ ಕೆಲವು ಪಕ್ಷಗಳು ವಿರೋಧ ಮಾಡುತ್ತಿವೆ. ಮೋದಿ ದೇಶದ ಅಭಿವೃದ್ಧಿ ಪರ, ಭದ್ರತೆ ಪರ ಇದ್ದಾರೆ. ಐಎನ್​ಡಿಐಎ ಒಕ್ಕೂಟ ಏನೇ ಸರ್ಕಸ್ ಮಾಡಿದರೂ ಜನ ಅವರ ಪರ ಹೋಗಲ್ಲ. ನಮ್ಮ ದೇಶ, ಮಠ ರಕ್ಷಣೆ ಕೇವಲ ಮೋದಿಯಿಂದ ಮಾತ್ರ ಸಾಧ್ಯ ಅಂತ ಗೊತ್ತಾಗಿದೆ. ಇದರ ವಿರುದ್ಧ ಸೆಣಸಾಡುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ತುಂಗಾತಟದಲ್ಲಿ ‘ಲೋಕ’ಕಲ್ಯಾಣಾರ್ಥ ಸಂಘ ಪರಿವಾರದಿಂದ ನಾಲ್ಕು ದಿನ ಮಹಾ ಯಾಗ

ಜೆಡಿಯು, ಶಿವಸೇನೆ ಬೇರೆ ಬೇರೆ ಪಕ್ಷಗಳು ಕೂಡ ವಾಜಪೇಯಿ ಕಾಲದಿಂದ ಇದ್ದವರು. ಯಾವೆಲ್ಲಾ ಪಕ್ಷಗಳು ಹೊರ ಹೋಗಿವೆ, ಅವರೆಲ್ಲಾ ವಾಪಸ್ ಬರಬೇಕು. ರಾಜ್ಯದಲ್ಲಿ ಕೂಡ ಯಾರ್ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅವರು ಮತ್ತೆ ಬರಬೇಕು ಎನ್ನುವುದು ನಮ್ಮ ಅಪೇಕ್ಷೆ. ನೀವೆಲ್ಲಾ ಬೇರೆ ಬೇರೆ ಕಾರಣಗಳಿಗೆ ವಾಪಸ್ ಹೋಗಿರಬಹುದು ಮತ್ತೆ ವಾಪಸ್ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.