- Kannada News Photo gallery Ayodhya Ramlalla statue creation inspired by the Udupi Vishnu statue viral in social media
ಅಯೋಧ್ಯೆ ಬಾಲರಾಮನ ಮೂರ್ತಿ ರಚನೆಗೆ ಪ್ರೇರಣೆ ಆಯ್ತೇ ಉಡುಪಿಯಲ್ಲಿನ ವಿಷ್ಣು ವಿಗ್ರಹ?
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿತು. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮ ಮೂರ್ತಿಗೂ ಉಡುಪಿಯಲ್ಲಿನ ಶ್ರೀ ವಿಷ್ಣುಮೂರ್ತಿಗೂ ಹೋಲಿಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.
Updated on:Jan 27, 2024 | 3:09 PM

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿತು.

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮ ಮೂರ್ತಿಗೂ ಉಡುಪಿಯಲ್ಲಿನ ಶ್ರೀ ವಿಷ್ಣು ಮೂರ್ತಿಗೂ ಹೋಲಿಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರದ ಸಕ್ಕಟ್ಟು ಶ್ರೀವಿಷ್ಣು ದೇವಸ್ಥಾನದಲ್ಲಿರುವ ವಿಗ್ರಹ ಮಾದರಿಯಲ್ಲೇ ಬಾಲರಾಮನ ಮೂರ್ತಿ ರಚಿಸಲಾಗಿದೆ ಎನ್ನಲಾಗುತ್ತಿದೆ.

ಅಯೋಧ್ಯೆ ಬಾಲರಾಮನ ಮೂರ್ತಿ ಥೇಟ್ ಇಲ್ಲಿನ ವಿಷ್ಣು ಮೂರ್ತಿಯಂತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರಗಳು ಹರದಾಡುತ್ತಿವೆ.

ಅಯೋಧ್ಯೆ ಬಾಲರಾಮನ ಜೊತೆ ವಿಷ್ಣುಮೂರ್ತಿಯನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗುತ್ತಿದೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣ ಭಾರಿ ಚರ್ಚೆಯಾಗುತ್ತಿದೆ.

ವಿಷ್ಣು ಮೂರ್ತಿಯ ಪ್ರಭಾವಳಿ, ರಚನೆಯಂತೆಯೇ ಬಾಲರಾಮನಿಗೂ ಇದೆ. ಈ ಕುತೂಹಲದಿಂದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ.

ಸಕ್ಕಟ್ಟು ಶ್ರೀವಿಷ್ಣು ದೇವಸ್ಥಾನವನ್ನು ಸುಮಾರು 1500 ವರ್ಷಗಳ ಹಿಂದಿನ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ.

ಹಳೆಯ ಮೂರ್ತಿಯಾದರೂ ಇಂದಿಗೂ ಅದೇ ಹೊಳಪು ಇದೆ. ಇನ್ನು ವಿಷ್ಣು ದೇವಸ್ಥಾನ ಜೀರ್ಣೋದ್ಧಾರವಾಗಬೇಕಿದೆ.
Published On - 3:07 pm, Sat, 27 January 24



