AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಫಿನಾಲೆ ವೇದಿಕೆಯಲ್ಲಿ ಹಾಡಿನ ಮೂಲಕ ಸ್ಪರ್ಧಿಗಳ ಜಾತಕ ಬಿಚ್ಚಿಟ್ಟ ಈಶಾನಿ

ಬಿಗ್​ ಬಾಸ್​ ಫಿನಾಲೆ ವೇದಿಕೆಯಲ್ಲಿ ಹಾಡಿನ ಮೂಲಕ ಸ್ಪರ್ಧಿಗಳ ಜಾತಕ ಬಿಚ್ಚಿಟ್ಟ ಈಶಾನಿ

ಮದನ್​ ಕುಮಾರ್​
|

Updated on: Jan 28, 2024 | 1:30 PM

Share

ಎಲಿಮಿನೇಟ್​ ಆದ ಎಲ್ಲರೂ ಫಿನಾಲೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈಶಾನಿ ಅವರು ರ‍್ಯಾಪ್​ ಸಾಂಗ್​ ಮೂಲಕ ಬಿಗ್ ಬಾಸ್​ ಮನೆಯ ಆಟವನ್ನು ವಿವರಿಸಿದ್ದಾರೆ. ಒಬ್ಬೊಬ್ಬರ ವರ್ತನೆ ಯಾವ ರೀತಿ ಇರುತ್ತದೆ ಎಂಬುದನ್ನು ಹಾಡಿನ ಮೂಲಕ ವಿವರಿಸುತ್ತ ಸ್ಪರ್ಧಿಗಳ ಜಾತಕವನ್ನೇ ಅವರು ತೆರೆದಿಟ್ಟಿದ್ದಾರೆ.

ರ‍್ಯಾಪ್​ ಸಿಂಗರ್​ ಈಶಾನಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10) ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದರು. ಈ ಆಟದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡರು. ಮಧ್ಯದಲ್ಲೇ ಅವರು ಎಲಿಮಿನೇಟ್​ ಆಗಬೇಕಾಯಿತು. ಈಗ ಬಿಗ್​ ಬಾಸ್​ ಫಿನಾಲೆ (Bigg Boss Kannada Finale) ನಡೆಯುತ್ತಿದೆ. ಈ ಮೊದಲೇ ಎಲಿಮಿನೇಟ್​ ಆದ ಎಲ್ಲರೂ ಫಿನಾಲೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಲ್ಲದೇ, ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈಶಾನಿ (Eshani) ಅವರು ತಮ್ಮ ರ‍್ಯಾಪ್​ ಸಾಂಗ್​ ಮೂಲಕ ಬಿಗ್ ಬಾಸ್​ ಮನೆಯ ಆಟವನ್ನು ವಿವರಿಸಿದ್ದಾರೆ. ಒಬ್ಬೊಬ್ಬರ ವರ್ತನೆ ಯಾವ ರೀತಿ ಇರುತ್ತದೆ ಎಂಬುದನ್ನು ಹಾಡಿನ ಮೂಲಕ ವಿವರಿಸುತ್ತ ಸ್ಪರ್ಧಿಗಳ ಜಾತಕವನ್ನೇ ಅವರು ತೆರೆದಿಟ್ಟಿದ್ದಾರೆ. ಈ ಸಂಚಿಕೆ ಇಂದು (ಜನವರಿ 28) ಸಂಜೆ 7.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ಪ್ರಸಾರ ಆಗಲಿದೆ. ಕಿಚ್ಚ ಸುದೀಪ್​ ಅವರು ಶೋ ನಿರೂಪಣೆ ಮಾಡುತ್ತಿದ್ದಾರೆ. ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್​, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ವಿನಯ್​ ಗೌಡ ಅವರು ಟಾಪ್​ 5 ಸ್ಥಾನ ತಲುಪಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More