AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ

'ಪತಿ ಸ್ನಾನ ಮಾಡುವುದಿಲ್ಲ, ಹಲ್ಲುಜ್ಜುವುದಿಲ್ಲ, ಆತನ ಬೆವರಿನ ವಾಸನೆಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ.ನನಗೆ ವಿಚ್ಛೇದನ ಕೊಡಿಸಿ' ಎಂದು ಮಹಿಳೆಯೊಬ್ಬಳು ಕೋರ್ಟ್ ಮೊರೆ ಹೋಗಿದ್ದಾಳೆ.ಜೊತೆಗೆ ಪತಿ ವಿರುದ್ಧ ಮಾಡಿದ್ದ ಆರೋಪಗಳನ್ನು ದೃಢೀಕರಿಸಲು ಆತನ ಸಹೋದ್ಯೋಗಿಗಳನ್ನು ಕೂಡ ಸಾಕ್ಷಿಯ ರೂಪದಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾಳೆ.

Viral News: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ
ಬೆವರಿನ ವಾಸನೆ ತಡೆಯಲಾದರೆ ವಿಚ್ಛೇದನ ನೀಡಿದ ಪತ್ನಿImage Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 04, 2024 | 12:51 PM

Share

“ನನ್ನ ಪತಿ 10 ದಿನಕ್ಕೆ ಒಮ್ಮೆ ಮಾತ್ರ ಸ್ನಾನ ಮಾಡುತ್ತಾನೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಲ್ಲುಜ್ಜುತ್ತಾನೆ. ಇದರಿಂದ ಬಾಯಿ ಹಾಗೂ ದೇಹ ದುರ್ವಾಸನೆ ಬರುತ್ತಿದ್ದು, ಆತನೊಂದಿಗೆ ಜೀವನ ನಡೆಸಲು ನನಗೆ ಸಾಧ್ಯವಿಲ್ಲ” ಎಂದು ಮಹಿಳೆಯೊಬ್ಬಳು ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಕೋರ್ಟ್ ಮೊರೆ ಹೋಗಿದ್ದಾಳೆ. ಆಡಿಟ್ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ ವೈಯಕ್ತಿಕ ನೈರ್ಮಲ್ಯದ ಕೊರತೆಯಿಂದಾಗಿ ಪತ್ನಿ ತನ್ನ ಪತಿ ವಿರುದ್ಧ ವಿಚ್ಛೇದನ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಪತಿ ವಿರುದ್ಧ ಪತ್ನಿ ಮಾಡಿದ ಆರೋಪಗಳನ್ನು ದೃಢೀಕರಿಸಲು ಆತನ ಸಹೋದ್ಯೋಗಿಗಳನ್ನು ಕೂಡ ಸಾಕ್ಷಿಯ ರೂಪದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ಸಾಕ್ಷಿಗಳ ಆಧಾರದ ಮೇಲೆ ಮಹಿಳೆಗೆ ಪತಿಯಿಂದ ವಿಚ್ಛೇದನವನ್ನು ನೀಡಲಾಗಿದೆ. ಇದಲ್ಲದೆ, ಪತ್ನಿಗೆ ಪರಿಹಾರವಾಗಿ 16,500 ಡಾಲರ್ ಅಂದರೆ ಸುಮಾರು ರೂ. 13 ಲಕ್ಷ 69 ಸಾವಿರ ಪರಿಹಾರ ಧನ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ಹೆಣ್ಣಿನ ಕುರುಹು ಕಾಣದ ವಿಚಿತ್ರ ಗ್ರಾಮವಿದು; ಏನಿದು ‘ವರ್ಜಿನ್ ವಿಲೇಜ್’?

ನ್ಯಾಯಾಲಯದಲ್ಲಿ ಸಾಕ್ಷಿಗಳ ಹೇಳಿಕೆಯ ಪ್ರಕಾರ, ಮಹಿಳೆಯ ಪತಿ 10 ದಿನಕ್ಕೊಮ್ಮೆ ಸ್ನಾನ ಮಾಡುತ್ತಾನೆ. ಇದಲ್ಲದೆ, ಹಲ್ಲುಗಳನ್ನು ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಮಾತ್ರ ಹಲ್ಲುಜ್ಜುತ್ತಾನೆ. ಇದರಿಂದ ಬಾಯಿ ದುರ್ವಾಸನೆ ಹಾಗೂ ದೇಹದ ದುರ್ವಾಸನೆ ಬರುತ್ತಿದ್ದು, ಪತ್ನಿಗೆ ಆ ಗಂಡನೊಂದಿಗೆ ಬಾಳುವುದು ಕಷ್ಟವಾಯಿತು ಎಂದು ನಮೂದಿಸಲಾಗಿತ್ತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:44 pm, Sun, 4 February 24