Viral Video: ನನ್ನತ್ರ ಬರ್ಬೇಡ ಅಂದ್ರೂ ಮತ್ಯಾಕ್ ಬಂದೆ; ಕೋಪದಿಂದ ಯುವತಿಯನ್ನು ಒದ್ದೋಡಿಸಿದ ಗಜರಾಜ
ಆನೆಗಳು ತುಂಬಾನೇ ಮುದ್ದಾದ ಹಾಗೂ ಸಾದು ಪ್ರಾಣಿಗಳು. ಇಂತಹ ಆನೆಗಳನ್ನು ನೋಡಿದಾಗ ಎಂತಹವರಿಗೂ ಮುದ್ದಾಡಬೇಕು ಅಂತ ಅನ್ನಿಸುತ್ತದೆ. ಅದೇ ರೀತಿ ಇಲ್ಲೊಂದು ಯುವತಿ ಗಜರಾಜನ್ನು ಮುದ್ದಾಡಲು ಹೋಗಿ ಪಜೀತಿಗೆ ಸಿಳುಕಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮುದ್ದಾದ ಆನೆಯೊಂದು ಊಟ ಮಾಡುವಾಗ ನನ್ನತ್ರ ಬರ್ಬೇಡ ಅಂದ್ರೂ ಮತ್ಯಾಕ್ ಬಂದೆ ಎಂದು ಕೋಪದಿಂದ ಯುವತಿಯನ್ನು ಒದ್ದೋಡಿಸುವ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಆನೆಗಳು ತುಂಬಾನೇ ಬುದ್ಧಿವಂತ ಪ್ರಾಣಿಗಳು. ಮನುಷ್ಯರಂತೆಯೇ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮಾರ್ಥ್ಯವವನ್ನು ಹೊಂದಿರುವ ಇವುಗಳು ತುಂಟಾಟವಾಡುವುದರಲ್ಲಿಯೂ ಎತ್ತಿದ ಕೈ. ಅಲ್ಲದೆ ಶಾಂತ ಸ್ವಾಭಾವದ ಈ ಪ್ರಾಣಿಗಳು ಅಷ್ಟಾಗಿ ಯಾರೊಬ್ಬರಿಗೂ ತೊಂದರೆ ಕೊಡಲು ಹೋಗುವುದಿಲ್ಲ. ಆದರೆ ಕೆಲವೊಮ್ಮೆ ಅವುಗಳಿಗೆ ಮದವೇರಿದರೆ ಅಥವಾ ಕೋಪ ಬಂದರೆ ರಂಪ ರಾಮಾಯಣ ಮಾಡುತ್ತವೆ. ಹೀಗೆ ಆನೆಗಳಿಗೆ ಮದವೇರಿದರೆ ಅವುಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತವೆ. ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ತನ್ನ ಪಾಡಿಗೆ ಆಹಾರ ತಿನ್ನುತ್ತಿದ್ದ ಆನೆಯೊಂದು ಅದರ ಬಳಿ ಬಂದಂತಹ ಯುವತಿಯನ್ನು ಕೋಪದಿಂದ ಒದ್ದೋಡಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ತನ್ನ ಬಳಿ ಬಂದ ಯುವತಿಯನ್ನು ಒದ್ದೋಡಿಸುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @PictureFolder ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Girl tries to make friends with an elephant and finds out pic.twitter.com/DD5jGR6qjk
— non aesthetic things (@PicturesFoIder) February 21, 2024
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಆನೆ ಶಿಬಿರಕ್ಕೆ ಭೇಟಿ ಕೊಟ್ಟ ಯುವತಿ ಮುದ್ದಾದ ಆನೆಯೊಂದನ್ನು ಕಂಡು, ಈ ಆನೆಯನ್ನು ಮುದ್ದಾಡಬೇಕೆಂದು ಅದರ ಬಳಿ ಹೋಗ್ತಾಳೆ. ತನ್ನ ಪಾಡಿಗೆ ಶಾಂತ ರೀತಿಯಿಂದ ಆಹಾರ ತಿನ್ನುತ್ತಿದ್ದ ಆನೆ, ಈ ಯುವತಿ ಹತ್ತಿರ ಬರುತ್ತಿದ್ದಂತೆ, ತಲೆ ಅಲ್ಲಾಡಿಸುತ್ತಾ ನನ್ನ ಬಳಿ ಬರ್ಬೇಡ ನಾನು ಈಗ ಊಟ ಮಾಡ್ತಿದ್ದೇನೆ ಅಂತ ಸೂಚನೆ ಕೊಡುತ್ತೆ. ಆದ್ರೂ ಕೂಡಾ ಈ ಯುವತಿ ಆನೆಯ ಬಳಿ ಹೋಗೇ ಬಿಡ್ತಾಳೆ. ಇದ್ರಿಂದ ಕೋಪಗೊಂಡಂತಹ ಗಜರಾಜ, ನಾನು ಊಟ ಮಾಡುವಾಗ ನನ್ ಹತ್ರ ಬರ್ಬೇಡ ಅಂದ್ರೂ ಯಾಕ್ ಬರ್ತೀಯಾ ಅಂತ ಹೇಳುತ್ತಾ, ಯುವತಿಗೆ ಸೊಂಡಿಲಿನಿಂದ ಒದ್ದು ಆಕೆಯನ್ನು ಕೆಳಗೆ ದೂಡಿ ಹಾಕುತ್ತದೆ. ಆನೆ ಒದ್ದ ಒಂದೇ ಏಟಿಗೆ ಕೆಳಗೆ ಬಿದ್ದಂತಹ ಆ ಯುವತಿ, ಈ ಆನೆಯ ಕೋಪಕ್ಕೆ ಸಿಲುಕುವ ಮುನ್ನ ಇಲ್ಲಿಂದ ಎಸ್ಕೇಪ್ ಆದ್ರೆ ಸಾಕಪ್ಪಾ ಎನ್ನುತ್ತಾ, ಆ ತಕ್ಷಣವೇ ಅಲ್ಲಿಂದ ಆಕೆ ಕಾಲ್ಕಿತ್ತು ಓಡಿ ಹೋಗುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಲ್ಲಿನ ಚಂದ ಹೆಚ್ಚಿಸಲು ಹೋಗಿ ಸಾವನ್ನಪ್ಪಿದ ಮದುಮಗ
ಫೆಬ್ರವರಿ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 23.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 84 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಓ ದೇವ್ರೇ ಈ ದೃಶ್ಯವನ್ನು ಕಂಡು ನಗು ಬಂತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಆನೆಯು ಆಕೆ ತನ್ನ ಊಟವನ್ನು ಕಿತ್ತುಕೊಳ್ಳಲು ಬಂದಳೆಂದು, ಆಕೆಯ ಮೇಲೆ ಕೋಪಗೊಂಡಿರಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ