Viral: ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಹೆಚ್ಚಿಸಲು ಯುವತಿಯ ನಕಲಿ ಗರ್ಭಧಾರಣೆ
ನಕಲಿ ಗರ್ಭಧಾರಣೆಯ ಮೂಲಕ ಮ್ಯಾಚ್‌ಮೇಕಿಂಗ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಮಹಿಳೆ. ತನ್ನ ಹುಟ್ಟಲಿರುವ ಮಗುವಿಗೆ ತಂದೆ ಮತ್ತು ತನಗಾಗಿ ಗಂಡನನ್ನು ಹುಡುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಮೂವತ್ತೆರಡು ವರ್ಷದ ಚೆನ್ ಕ್ಸಿಯಾವೋಸಿ ನಕಲಿ ಗರ್ಭಧಾರಣೆಯ ಮೂಲಕ ಮ್ಯಾಚ್‌ಮೇಕಿಂಗ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಮಹಿಳೆ ತನ್ನ ಹುಟ್ಟಲಿರುವ ಮಗುವಿಗೆ ತಂದೆ ಮತ್ತು ತನಗಾಗಿ ಗಂಡನನ್ನು ಹುಡುಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಮಾಧ್ಯಮಗಳ ಪ್ರಕಾರ, ಮಹಿಳೆಯು “ಒಂಟಿ, ಆಸ್ತಿ ಅಥವಾ ಕಾರು ಇಲ್ಲ, ಐದು ತಿಂಗಳ ಗರ್ಭಿಣಿ” ಎಂದು ಹೇಳುವ ಪತ್ರವನ್ನು ಹೊಂದಿದ್ದಳು. ಮಹಿಳೆ ತನ್ನ ಭಾವಿ ಪತಿಯಿಂದ ಏನನ್ನು ನಿರೀಕ್ಷಿಸುತ್ತಿರುವೆ ಎಂಬುದನ್ನು ವಿವರವಾಗಿ ವಿವರಿಸಿದ್ದಾಳೆ. “ಅವರು ಫ್ಲಾಟ್ ಮತ್ತು ಕಾರು ಹೊಂದಿರಬೇಕು, 20,000 ಯುವಾನ್ (ರೂ. 2.36 ಲಕ್ಷ) ಗಿಂತ ಹೆಚ್ಚು ಮಾಸಿಕ ವೇತನವನ್ನು ಹೊಂದಿರಬೇಕು ಮತ್ತು ನನ್ನನ್ನು ಮತ್ತು ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಮಹಿಳೆ ಹೇಳಿರುವುದು, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ವೇಯ್ಟರ್ಗಳಿಗೆ ಬರೋಬ್ಬರಿ 20 ಲಕ್ಷ ರೂ. ಟಿಪ್ಸ್ ಕೊಟ್ಟ ವ್ಯಕ್ತಿ; ಬಿಲ್ ಫೋಟೋ ವೈರಲ್
ಗರ್ಭಿಣಿಯಂತೆ ಕಾಣುವ ವಿಡಿಯೋಗಳನ್ನು ಈ ಮಹಿಳೆ ಹಂಚಿಕೊಳ್ಳುತ್ತಿದ್ದು,ಅದರಲ್ಲಿ ತಾನು ಒಂಟಿಯಾಗಿದ್ದು ಸಾಕಷ್ಟು ಕಷ್ಟದಲ್ಲಿದೇನೆ ಎಂದು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಳು. ಈ ಮೂಲಕ ತನ್ನ ಫಾಲೋವರ್ಸ್ಗಳನ್ನು ಹೆಚ್ಚಿಸಲು ಪ್ಲಾನ್ ಮಾಡಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.
ಆದರೆ ಇದೀಗ ಆಕೆಯ ನೋವಿಗೆ ಸ್ಪಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದ ಸಾಕಷ್ಟು ನೆಟ್ಟಿಗರು ಆಕ್ರೋಶಗೊಂಡಿದ್ದು, ಆಕೆಯ ವಿರುದ್ಧ ಸರಿಯಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವರದಿಯ ಪ್ರಕಾರ, ಆಕೆಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ