AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವೇಯ್ಟರ್​ಗಳಿಗೆ ಬರೋಬ್ಬರಿ 20 ಲಕ್ಷ ರೂ. ಟಿಪ್ಸ್ ಕೊಟ್ಟ ವ್ಯಕ್ತಿ; ಬಿಲ್​​​ ಫೋಟೋ ವೈರಲ್​​

ವ್ಯಕ್ತಿಯೊಬ್ಬರು ಹೋಟೆಲಿನ ವೇಯ್ಟರ್​​​ಗಳ ಸೇವೆಯನ್ನು ಮೆಚ್ಚಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಟಿಪ್ಸ್ ನೀಡಿತ್ತಾರೆ. ರೆಸ್ಟೋರೆಂಟ್‌ನ ಬಾಣಸಿಗ ಈ ಬಿಲ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಬಿಲ್​​ನ ಒಟ್ಟು ಮೊತ್ತ ಕಂಡು ನೆಟ್ಟಿಗರು ಶಾಕ್​​ ಆಗಿದ್ದಾರೆ.

Viral: ವೇಯ್ಟರ್​ಗಳಿಗೆ ಬರೋಬ್ಬರಿ 20 ಲಕ್ಷ ರೂ.  ಟಿಪ್ಸ್ ಕೊಟ್ಟ ವ್ಯಕ್ತಿ; ಬಿಲ್​​​ ಫೋಟೋ ವೈರಲ್​​
20 lakh Tip
ಅಕ್ಷತಾ ವರ್ಕಾಡಿ
|

Updated on: Jan 25, 2024 | 11:23 AM

Share

ವಾರಾಂತ್ಯದಲ್ಲಿ ಮನೆಯವರೊಂದಿಗೆ ಹೊರಗಡೆ ಹೋಗಿ ಊಟ ಮಾಡುವುದು ಸಾಮಾನ್ಯವಾಗಿದೆ. ಹೋಟೆಲ್​​ ಸಿಬ್ಬಂದಿಗಳ ಸೇವೆ ಇಷ್ಟವಾದರೆ 200 ಅಥವಾ 300 ಹೆಚ್ಚೆಂದರೆ 500 ರೂಪಾಯಿ ಟಿಪ್ಸ್​​ ನೀಡಿ ಬರುವುದುಂಟು. ಆದರೆ ದುಬೈನ ಸಾಲ್ಟ್ ಬೇ ರೆಸ್ಟೋರೆಂಟ್​​​ನಲ್ಲಿ ವ್ಯಕ್ತಿಯೊಬ್ಬರು ತನ್ನ ಕುಟುಂಬದೊಂದಿಗೆ ಬಂದು ತಿಂದು ಕುಡಿದು ಮೋಜು ಮಸ್ತಿ ಮಾಡಿ, ಅಂತ್ಯದಲ್ಲಿ ವೇಯ್ಟರ್​ಗಳಿಗೆ ಬರೋಬ್ಬರಿ 20 ಲಕ್ಷ ರೂ. ಟಿಪ್ಸ್ ಕೊಟ್ಟಿದ್ದಾರೆ. ವ್ಯಕ್ತಿಯ ಬಿಲ್​​​​ನ ಫೋಟೋವನ್ನು ಹೋಟೆಲಿನ ಬಾಣಸಿಗರೊಬ್ಬರು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಒಟ್ಟು ಮೊತ್ತ ಕೋಟಿ ತಲುಪಿದೆ.ಸದ್ಯ ಬಿಲ್​​ ಕಂಡು ನೆಟ್ಟಿಗರು ದಂಗಾಗಿದ್ದಾರೆ.

ರೆಸ್ಟೋರೆಂಟ್‌ನ ಬಾಣಸಿಗ ಈ ಬಿಲ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ, ‘ಹಣ ಹೀಗೆ ಬರುತ್ತದೆ ಮತ್ತು ಹೀಗೆ ಹೋಗುತ್ತದೆ’. ಬಿಲ್​​​ನಲ್ಲಿ ಒಟ್ಟು ಮೊತ್ತ 90 ಲಕ್ಷ ರೂಪಾಯಿಗಳನ್ನು ನೋಡಬಹುದು. ವೈರಲ್​​ ಬಿಲ್​​ನಲ್ಲಿ 3,75,000 ರೂ.ಗಳ ಆಹಾರ ಮತ್ತು 65 ಲಕ್ಷ ರೂ. ಡ್ರಿಂಕ್ಸ್​​​​ಗಳಿಗಳ ಮೊತ್ತವನ್ನು ಕಾಣಬಹುದು. ಇದಲ್ಲದೇ ಹೋಟೆಲಿನ ಸೇವೆಯನ್ನು ಮೆಚ್ಚಿ 20 ಲಕ್ಷಕ್ಕೂ ಹೆಚ್ಚು ಟಿಪ್ಸ್ ನೀಡಿರುವುದನ್ನು ಕಾಬಹುದು.

View this post on Instagram

A post shared by Nusr_et#Saltbae (@nusr_et)

ಇದನ್ನೂ ಓದಿ: 4 ದಿನದ ನಂತರ ತಲೆಯೊಳಗಿದ್ದ ಬುಲೆಟ್​​​​ ಬಗ್ಗೆ ತಿಳಿದು ಗಾಬರಿಗೊಂಡ ವ್ಯಕ್ತಿ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ 2.19 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಒಟ್ಟು ಮೊತ್ತ ಕೋಟಿ ರೂಪಾಯಿಗೆ ಸಮೀಪಿಸಿದ್ದು, ನೆಟ್ಟಿಗರು ಶಾಕ್​​​ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್