Brazil Man: 4 ದಿನದ ನಂತರ ತಲೆಯೊಳಗಿದ್ದ ಬುಲೆಟ್​​​​ ಬಗ್ಗೆ ತಿಳಿದು ಗಾಬರಿಗೊಂಡ ವ್ಯಕ್ತಿ

ವೈದ್ಯರು ಮೆದುಳಿನಲ್ಲಿ ಸಿಲುಕಿರುವ 9 ಎಂಎಂ ಬುಲೆಟ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದು, ನಾಲ್ಕು ದಿನಗಳ ವರೆಗೆ ಬುಲೆಟ್​​​​ ಆತನ ತಲೆಯೊಳಗೆ ಇದ್ದಿದ್ದು ವೈದ್ಯರನ್ನೇ ಅಚ್ಚರಿಗೊಳಿಸಿದೆ.

Brazil Man: 4 ದಿನದ ನಂತರ ತಲೆಯೊಳಗಿದ್ದ ಬುಲೆಟ್​​​​ ಬಗ್ಗೆ ತಿಳಿದು ಗಾಬರಿಗೊಂಡ ವ್ಯಕ್ತಿ
Gunshot in head
Follow us
ಅಕ್ಷತಾ ವರ್ಕಾಡಿ
|

Updated on: Jan 24, 2024 | 5:47 PM

ಬ್ರೆಜಿಲ್​​ನ 21 ವರ್ಷದ ಮೇಟಿಯುಸ್ ಫಾಸಿಯೊ ಎಂಬಾತ ಕಳೆದ ವರ್ಷದ ಡಿಸೆಂಬರ್ 31ರಂದು ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದ. ಪಾರ್ಟಿಯ ನಡುವೆ ಗಲಾಟೆ ಪ್ರಾರಂಭವಾಗಿದ್ದು, ಈತನ ತಲೆಯಿಂದ ರಕ್ತಸ್ರಾವವಾಗಲು ಪ್ರಾರಂಭವಾಗಿದೆ. ತಲೆಗೆ ಕಲ್ಲು ತಾಗಿದೆ ಎಂದು ಭಾವಿಸಿದ್ದ, ಈತನಿಗೆ ನಾಲ್ಕು ದಿನಗಳ ನಂತರ ತಲೆಯೊಳಗೆ ಬುಲೆಟ್​​​​​​ ಇರುವುದು ತಿಳಿದಿದೆ. ಡಿ.31ರಂದು ಚಿಕ್ಕ ಗಾಯಕ್ಕೆ ಚಿಕಿತ್ಸೆ ಪಡೆದಿದ್ದು, ಆರಾಮವಾಗಿದ್ದ ಈತನಿಗೆ ಜನವರಿ 4 ಆರೋಗ್ಯ ಸಮಸ್ಯೆ ಪ್ರಾರಂಭವಾಗಿದೆ.

ನಿದ್ದೆಯಿಂದ ಎದ್ದ ಮೇಟಿಯುಸ್​ಗೆ ಎಡಗೈ ಎತ್ತಲು ಸಾಧ್ಯವಾಗದಂತಹ ಬಲಹೀನತೆಯ ಸಮಸ್ಯೆ ಪ್ರಾರಂಭವಾಗಿದ್ದು, ಆತಂಕಕ್ಕೊಳಗಾದ ಈತ ಬಟ್ಟೆ ಧರಿಸಿ ನೇರವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ.ಬಳಿಕ ಅಲ್ಲಿ ಅವರು ನಾಲ್ಕು ದಿನಗಳ ಹಿಂದೆ ತಲೆಗೆ ಕಲ್ಲು ತಾಗಿರುವ ಬಗ್ಗೆ ವೈದ್ಯರಿಗೆ ತಿಳಿಸಿದ್ದಾನೆ.ಆದರೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ತಲೆಗೆ ಹೊಡೆದಿದ್ದು ಕಲ್ಲು ಅಲ್ಲ ಗುಂಡು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ’; ಕಂಪನಿಗೆ ಕಂಟಕವಾದ ಈ ಜಾಹೀರಾತು

ವರದಿಗಳ ಪ್ರಕಾರ, ವೈದ್ಯರು ಮೆದುಳಿನಲ್ಲಿ ಸಿಲುಕಿರುವ 9 ಎಂಎಂ ಬುಲೆಟ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದು, ನಾಲ್ಕು ದಿನಗಳ ಬುಲೆಟ್​​​​ ಆತನ ತಲೆಯೊಳಗೆ ಇದ್ದಿದ್ದು ವೈದ್ಯರನ್ನೇ ಅಚ್ಚರಿಗೊಳಿಸಿದೆ. ಆದರೆ ಅದೃಷ್ಟವಶಾತ್ ಆಪರೇಷನ್ ಯಶಸ್ವಿಯಾಗಿದ್ದು ಮಟಿಯಾಸ್ ಪ್ರಾಣವನ್ನು ಉಳಿಸಲಾಗಿದೆ. ಸದ್ಯ ಈತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ