AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ’; ಕಂಪನಿಗೆ ಕಂಟಕವಾದ ಈ ಜಾಹೀರಾತು

'ನಮ್ಮ ಕ್ಲಿನಿಕ್​ನಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ, ಶ್ರೀಮಂತ ಹುಡುಗರು ನಿಮ್ಮೊಂದಿಗೆ ಡೇಟ್​​ ಮಾಡಲು ಮುಂದೆ ಬರುತ್ತಾರೆ' ಎಂದು ​​​ಕಂಪನಿ ಹೇಳಿಕೊಂಡಿತ್ತು. ಆದರೆ ಇದೀಗ ಈ ಆಫರ್ ಕಂಪನಿಗೇ ಕಂಟಕವಾಗಿ ಪರಿಣಮಿಸಿದೆ.

'ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ'; ಕಂಪನಿಗೆ ಕಂಟಕವಾದ ಈ ಜಾಹೀರಾತು
ಸಾಂದರ್ಭಿಕ ಚಿತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jan 24, 2024 | 4:29 PM

Share

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಉದ್ಯಮಗಳು ಹಲವು ರೀತಿಯ ಪ್ಲಾನ್​ ಮಾಡಿತ್ತಾರೆ. ಜೊತೆಗೆ ತಮ್ಮ ಗ್ರಾಹಕರಿಗಾಗಿ ನಾನಾ ರೀತಿಯ ಆಫರ್ ಗಳನ್ನು ತರುತ್ತಲೇ ಇರುವುದನ್ನು ನೀವು ನೋಡಿರಬಹುದು. ಕೆಲವರು ಉತ್ಪನ್ನಗಳ ಮೇಲೆ ಬಂಪರ್ ಡಿಸ್ಕೌಂಟ್ ನೀಡಿದರೆ, ಇನ್ನು ಕೆಲವರು ಉಚಿತ ಆಫರ್ ಗಳ ಮೂಲಕ ಆಮಿಷ ಒಡ್ಡುತ್ತಾರೆ. ಇದೀಗಾ ಚೀನಾದಲ್ಲಿ ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್ ಮಹಿಳೆಯರನ್ನು ಓಲೈಸಲು ಮಾರ್ಕೆಟಿಂಗ್ ತಂತ್ರಗಳ ಮೂಲಕ ಜನರಿಗೆ ಮೋಸ ಮಾಡಿದ್ದು,ಪರಿಣಾಮ ಈ ಕ್ಲಿನಿಕ್​​ ವಿರುದ್ಧ ಸಾಕಷ್ಟು ಮಹಿಳೆಯರು ದೂರು ದಾಖಲಿಸಿದ್ದಾರೆ.

ಶಾಂಘೈ ಮೂಲದ ಕಂಪನಿ ‘ಜೀನ್ ಬ್ಯೂಟಿ ಬಯೋಜೆನೆಟಿಕ್ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್’ ಜನರನ್ನು ತನ್ನತ್ತ ಸಳೆಯಲು ವಿಚಿತ್ರ ಆಫರ್​ ನೀಡಿ ಭಾರೀ ಸುದ್ದಿಯಲ್ಲಿದೆ. ‘ನಮ್ಮ ಕ್ಲಿನಿಕ್​ನಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ, ಶ್ರೀಮಂತ ಹುಡುಗರು ನಿಮ್ಮೊಂದಿಗೆ ಡೇಟ್​​ ಮಾಡಲು ಮುಂದೆ ಬರುತ್ತಾರೆ’ ಎಂದು ​​​ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ

ಆದರೆ ಇದೀಗ ಈ ಆಫರ್ ಕಂಪನಿಗೇ ಕಂಟಕವಾಗಿ ಪರಿಣಮಿಸಿದೆ. ಸುಳ್ಳು ಭರವಸೆಗಳ ಮೂಲಕ ಗ್ರಾಹಕರನ್ನು ಸೆಳೆಯುವುದು, ಸಾಮಾಜಿಕ ನೀತಿಗಳನ್ನು ಉಲ್ಲಂಘಿಸುವುದು ಮತ್ತು ಜಾಹೀರಾತು ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾದ ಅಧಿಕಾರಿಗಳು ಕಂಪನಿಯ ಮೇಲೆ ಭಾರಿ ದಂಡವನ್ನು ವಿಧಿಸಿದ್ದಾರೆ. ಕಂಪನಿಯು ಈಗ 30 ಸಾವಿರ ಯುವಾನ್ (ಅಂದರೆ ಮೂರೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು) ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ