AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thin House: ಇಷ್ಟು ತೆಳ್ಳಗಿನ ಕಟ್ಟಡವನ್ನು ನೀವು ಎಂದಾದರೂ ನೋಡಿದ್ದೀರಾ?

ಬ್ರಿಟನ್‌ನ ಕೆನ್ಸಿಂಗ್ಟನ್‌ನಲ್ಲಿರುವ ಈ ಕಟ್ಟಡವನ್ನು ಅದರ ವಿನ್ಯಾಸದಿಂದಾಗಿ 'ಥಿನ್ ಹೌಸ್' ಎಂದೂ ಕರೆಯುತ್ತಾರೆ. ಈ ವಿಶಿಷ್ಟ ಕಟ್ಟಡದ ಉದ್ದ 13 ಅಡಿ ಇದ್ದರೆ, ಅಗಲ ಕೇವಲ 6 ಅಡಿ. ಸದ್ಯ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

Thin House: ಇಷ್ಟು ತೆಳ್ಳಗಿನ ಕಟ್ಟಡವನ್ನು ನೀವು ಎಂದಾದರೂ ನೋಡಿದ್ದೀರಾ?
Thin House London Image Credit source: instagram
ಅಕ್ಷತಾ ವರ್ಕಾಡಿ
|

Updated on:Jan 24, 2024 | 10:52 AM

Share

ಈ ಕಟ್ಟಡವನ್ನು ಒಂದು ಬದಿಯಿಂದ ನೋಡಿದಾಗ ಆರು ಅಡಿ ಎತ್ತರದ ವ್ಯಕ್ತಿಗೆ ಈ ಕಟ್ಟಡದೊಳಗೆ ಮಲಗಲು ಸಾಧ್ಯವಿಲ್ಲ ಎಂದೆನಿಸುವುದು ಸಹಜ. ಆದರೆ ಹೊರಗಿನಿಂದ ಈ ಕಟ್ಟಡ ತುಂಬ ತೆಳ್ಳಗೆ ಎಂದೆನಿಸಿದರೂ ಒಳಾಂಗಣ ಮನೆಯ ವಿನ್ಯಾಸ ತುಂಬಾ ಭವ್ಯವಾಗಿದೆ. ಬ್ರಿಟನ್‌ನ ಕೆನ್ಸಿಂಗ್ಟನ್‌ನಲ್ಲಿರುವ ಈ ಕಟ್ಟಡ ಅದರ ವಿನ್ಯಾಸದಿಂದಾಗಿ ‘ಥಿನ್ ಹೌಸ್’ ಎಂದೂ ಕರೆಯುತ್ತಾರೆ. ಈ ವಿಶಿಷ್ಟ ಕಟ್ಟಡದ ಉದ್ದ 13 ಅಡಿ ಇದ್ದರೆ, ಅಗಲ ಕೇವಲ 6 ಅಡಿ. ಸದ್ಯ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಈ ಕಟ್ಟಡದ ವೀಡಿಯೊವನ್ನು @Rainmaker1973 ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇವಲ 7 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 1 ಲಕ್ಷ 86 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಷ್ಟು ಚಿಕ್ಕ ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ ಎಂದು ಜನರು ಆಶ್ಚರ್ಯ ಪಡುತ್ತಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ಸೇತುವೆ ಹೇಗಿದೆ ನೋಡಿ; ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ

ಮಾಧ್ಯಮ ವರದಿಗಳ ಪ್ರಕಾರ, 2021 ರಲ್ಲಿ ಈ ಸಣ್ಣ ಮನೆಯನ್ನು ಮಾರಾಟ ಮಾಡಲು ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ ಮತ್ತು ಆ ಬೆಲೆ ತುಂಬಾ ಹೆಚ್ಚಾಗಿದೆ ಎಂದು ತಿಳಿದು ಎಲ್ಲರೂ ದಿಗ್ಭ್ರಮೆಗೊಂಡರು. 5 ಕೋಟಿಗೂ ಹೆಚ್ಚು ಬೆಲೆಗೆ ಈ ಮನೆ ಮಾರಾಟವಾಗಿತ್ತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:43 am, Wed, 24 January 24

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು