AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರ ಬೆತ್ತಲೆ ಉತ್ಸವದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ! ಏನಿದು ನೇಕೆಡ್ ಮ್ಯಾನ್ ಉತ್ಸವ? 

ಜಪಾನಿನ ಕೊನೊಮಿಯಾ ಎಂಬ ಧಾರ್ಮಿಕ ಕೇಂದ್ರವು ಪ್ರತಿವರ್ಷ ಆಯೋಜಿಸುವಂತಹ ಪುರುಷರ ಬೆತ್ತಲೆ ಉತ್ಸವದಲ್ಲಿ, 1650 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಮಹಿಳೆಯರಿಗೂ ಪಾಲ್ಗೊಳ್ಳಲು ಅವಕಾಶವನ್ನು ನೀಡಿದೆ ಎಂದು  ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಪುರುಷರ ಬೆತ್ತಲೆ ಉತ್ಸವದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ! ಏನಿದು ನೇಕೆಡ್ ಮ್ಯಾನ್ ಉತ್ಸವ? 
Digi Tech Desk
| Edited By: |

Updated on:Jan 24, 2024 | 6:55 PM

Share

ಜಪಾನಿನ ಕೊನೊಮಿಯಾ ಎಂಬ ಧಾರ್ಮಿಕ ಕೇಂದ್ರವು ಪ್ರತಿವರ್ಷ ಬೆತ್ತಲೆ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಹಡಕ ಮತ್ಸುರಿ ಹಬ್ಬವನ್ನು  ಅದ್ಧೂರಿಯಾಗಿ ಆಚರಿಸುತ್ತದೆ. 1650 ವರ್ಷಗಳ ಇತಿಹಾಸವಿರುವ ಈ ವಿಶೇಷ ಉತ್ಸವದಲ್ಲಿ ಕೇವಲ ಪುರುಷರಿಗೆ ಮಾತ್ರ ಭಾಗವಹಿಸಲು ಅವಕಾಶವಿತ್ತು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಲಿಂಗ ಸಮಾನತೆಯ ಸಲುವಾಗಿ ಈ ಒಂದು ಮಹತ್ತರದ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ತಿಳಿಸಿದೆ. ಕೆಲವು ಷರತ್ತುಗಳ ಜೊತೆಗೆ ಇದೇ ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ.

ಸ್ಥಳೀಯ ಭಾಷೆಯಲ್ಲಿ ಹಡಕ ಮತ್ಸುರಿ ಎಂದು ಕರೆಯಲ್ಪಡುವ ಈ ಹಬ್ಬವು ಜಪಾನಿನ ಐಚಿ ಪ್ರಾಂತ್ಯದ ಇನಾಜಾವಾ ಪಟ್ಟಣದಲ್ಲಿರುವ ಕೊನೊಮಿಯ ಎಂಬ ಜಪಾನಿಯರ ಧಾರ್ಮಿಕ ಕೇಂದ್ರವು ಆಯೋಜಿಸುವಂತಹ ಸಾಂಪ್ರದಾಯಿಕ ಉತ್ಸವವಾಗಿದೆ. ಸಂಪ್ರದಾಯದಂತೆ  ಪುರುಷರು ಫಂಡೋಶಿ ಎಂದು ಕರೆಯಲ್ಪಡುವ ಜಪಾನೀಸ್ ಲೋನ್ಕ್ಲೋತ್ ಮತ್ತು ಟ್ಯಾಬಿ ಎಂದು ಕರೆಯಲ್ಪಡುವ ಒಂದು ಜೋಡಿ ಬಿಳಿ  ಸಾಕ್ಸ್ಗಳನ್ನು ಧರಿಸಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಫೆಬ್ರವರಿ 22 ರಂದು ನೇಕೆಡ್ ಮ್ಯಾನ್ ಉತ್ಸವವು ನಡೆಯಲಿದ್ದು,  ಸುಮಾರು 10,000 ಸ್ಥಳೀಯ ಪುರುಷರು ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಈ ಬಾರಿ 40 ಮಹಿಳೆಯರಿಗೂ ಉತ್ಸವದಲ್ಲಿ ಭಾಗಿಯಾಗಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.   .

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ? 

ನೇಕೆಡ್ ಮ್ಯಾನ್ ಉತ್ಸವದ ಬಗ್ಗೆ:

ಜಪಾನಿನ ಸ್ಥಳೀಯ ಭಾಷೆಯಲ್ಲಿ ಹಡಕ ಮತ್ಸುರಿ ಎಂದು ಕರೆಯಲ್ಪಡುವ ನೇಕೆಡ್ ಮ್ಯಾನ್ ಉತ್ಸವವವು, ಜಪಾನಿನ ಸುಗ್ಗಿಯ ಹಬ್ಬವಾಗಿದೆ. ಯುವಕರಲ್ಲಿ ಕೃಷಿಯತ್ತ ಒಲವು ಮೂಡಿಸಲು ಈ ಹಬ್ಬವನ್ನು ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಸುಮಾರು 1650 ವರ್ಷಗಳ ಇತಿಹಾಸವಿರುವ ಈ ಹಬ್ಬದಲ್ಲಿ ಪುರುಷರು ಕನಿಷ್ಟ ಉಡುಗೆಯನ್ನು ತೊಟ್ಟು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದಲ್ಲಿ ಪುರುಷರು ಫಂಡೋಶಿ ಎಂದು ಕರೆಯಲ್ಪಡುವ ಜಪಾನೀಸ್ ಲೋನ್ಕ್ಲೋತ್ ಮತ್ತು ಟ್ಯಾಬಿ ಎಂದು ಕರೆಯಲ್ಪಡುವ ಒಂದು ಜೋಡಿ ಬಿಳಿ ಸಾಕ್ಸ್ ಧರಿಸಿ ಧಾರ್ಮಿಕ ಕೇಂದ್ರದ ಸುತ್ತಲೂ ಸಂಚರಿಸಿ ನಂತರ ತಮ್ಮ ದೇಹವನ್ನು ತಣ್ಣೀರಿನಿಂದ ಶುದ್ಧೀಕರಿಸಿ ಧಾರ್ಮಿಕ ಕೇಂದ್ರದ ಒಳಗೆ ಪ್ರವೇಶಿಸುತ್ತಾರೆ. ನಂತರ ಈ ಉತ್ಸವದಲ್ಲಿ ಭಾಗವಹಿಸುವ ಪುರುಷರು ಎರಡು ಅದೃಷ್ಟದ ಕೋಲುಗಳನ್ನು ಹುಡುಕಬೇಕಾಗುತ್ತದೆ. ಈ ಅದೃಷ್ಟದ  ಕೋಲುಗಳನ್ನು ಹುಡುಕುವುದು ಅತ್ಯಂತ ಕಷ್ಟಕರ ಕೆಲಸವಾಗಿದ್ದು, ಕೊನೆಯಲ್ಲಿ ಅದೃಷ್ಟವಂತರಿಗೆ ಈ ಕೋಲು ಸಿಗುತ್ತದೆ. ಈ ಅದೃಷ್ಟದ ಕೋಲನ್ನು ಗುರುತಿಸುವ ವ್ಯಕ್ತಿಯನ್ನು ʼಶಿನ್-ಒಟೊಕೊʼ ಎಂದು ಕರೆಯಲಾಗುತ್ತದೆ. ಮತ್ತು ಅವರು ಇಡೀ ವರ್ಷ ಅದೃಷ್ಟವಂತರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Wed, 24 January 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ