Viral Video: ಈ ಹೆಂಗಳೆಯರ ಆಟ ಭಾರತದ ಕ್ರಿಕೆಟ್ನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ: ಆನಂದ್ ಮಹೀಂದ್ರಾ
ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಇಂಟರೆಸ್ಟಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಾಲಾ ಮಕ್ಕಳ ತಂಡವೊಂದು ಹಿಮಾಚಲ ಪ್ರದೇಶದ ಗುಡ್ಡಗಾಡು ಸ್ಥಳದಲ್ಲಿ ಗಲ್ಲಿ ಕ್ರಿಕೆಟ್ ಆಡುವಂತಹ ಸುಂದರ ವಿಡಿಯೋವೊಂದನ್ನು ಹಂಚಿಕೊಂಡು, ಭಾರತವು ಕ್ರಿಕೆಟ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದಿದ್ದಾರೆ.
ಕ್ರಿಕೆಟ್ ಭಾರತೀಯರ ನೆಚ್ಚಿನ ಕ್ರೀಡೆಯಾಗಿದೆ. ಎಲ್ಲರೂ ಬಲು ಇಷ್ಟ ಪಡುವ ಈ ಆಟವನ್ನು ಭಾರತದ ಗಲ್ಲಿ ಗಲ್ಲಿಗಳಲ್ಲೂ ಆಡಲಾಗುತ್ತೆ. ರಜಾ ದಿನ ಬಂತೆಂದರೆ ಸಾಕು ಯುವಕರು ಗುಂಪು ಕಟ್ಟಿಕೊಂಡು ಬ್ಯಾಟ್, ವಿಕೆಟ್, ಚೆಂಡನ್ನು ಹಿಡಿದುಕೊಂಡು ಕ್ರಿಕೆಟ್ ಆಡಲು ಹೋಗುತ್ತಾರೆ. ಇನ್ನೂ ಗಲ್ಲಿ ಕ್ರಿಕೆಟ್ ಆಡಲು ಯುವಕರಿಗೆ ವಿಶಾಲವಾದ ಮೈದಾನವೇ ಬೇಕೆಂದಿಲ್ಲ. ಮನೆಯ ಅಂಗಳ, ಗದ್ದೆ, ಖಾಲಿ ರಸ್ತೆಯಲ್ಲೂ ಕ್ರಿಕೆಟ್ ಆಡಿ ಎಂಜಾಯ್ ಮಾಡ್ತಾರೆ. ಅಷ್ಟರ ಮಟ್ಟಿಗೆ ಯುವಕರಲ್ಲಿ ಕ್ರಿಕೆಟ್ ಕ್ರೇಜ್ ಇದೆ. ನೀವು ಕೂಡಾ ಇದೇ ರೀತಿ ರಸ್ತೆ ಬದಿಗಳಲ್ಲಿ, ಗದ್ದೆಗಳಲ್ಲಿ ಗಲ್ಲಿ ಕ್ರಿಕೆಟ್ ಆಡಿರಬಹುದಲ್ವಾ. ಆದ್ರೆ ನೀವು ಎಂದಾರರೂ ಬೆಟ್ಟಗಳ ಮೇಲೆ ಕ್ರಿಕೆಟ್ ಆಡುವುದನ್ನು ನೋಡಿದ್ದೀರಾ? ಅರೇ ಬೆಟ್ಟ ಪ್ರದೇಶದಲ್ಲಿ ಅದು ಹೇಗಪ್ಪಾ ಕ್ರಿಕೆಟ್ ಆಡಲು ಸಾಧ್ಯ ಅಂತ ನೀವು ಯೋಚನೆ ಮಾಡ್ತಿದ್ದೀರಾ. ಸದ್ಯ ಅಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾಲಾ ಮಕ್ಕಳ ಗುಂಪೊಂದು ಕ್ರಿಕೆಟ್ ಆಡಲು ವಿಶಾಲವಾದ ಮೈದಾನವೇ ಬೇಕೆಂದಿಲ್ಲ, ನಾವು ಈ ಗುಡ್ಡಗಾಡು ಪ್ರದೇಶದಲ್ಲಿಯೇ ಆಡುತ್ತೇವೆ ಎನ್ನುತ್ತಾ ಗಲ್ಲಿ ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಪ್ರಿಯರ ಮನ ಗೆದ್ದಿದೆ.
ಈ ವೈರಲ್ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತವು ಕ್ರಿಕೆಟ್ ಅನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಶಾಲಾ ಮಕ್ಕಳ ತಂಡವೊಂದು ಹಂತ ಹಂತದ ಪುಟ್ಟ ಗುಡ್ಡಗಾಡು ಪ್ರದೇಶದ ಮೇಲೆ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು.
India takes cricket to another level. Or should I say many ‘levels’…. 👍🏽🙁 pic.twitter.com/Lhv8BIzw74
— anand mahindra (@anandmahindra) January 24, 2024
ವೈರಲ್ ವಿಡಿಯೋದಲ್ಲಿ ಹಿಮಾಚಲ ಪ್ರದೇಶದ ಬೆಟ್ಟಗಳ ಮೇಲೆ ಶಾಲಾ ಮಕ್ಕಳು ಕ್ರಿಕೆಟ್ ಆಡುವ ದೃಶ್ಯವನ್ನು ಕಾಣಬಹುದು. ಬೆಟ್ಟದ ಒಂದು ಬದಿಯಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮ್ಯಾನ್ ಇದ್ದರೆ, ಇನ್ನೊಂದು ಬದಿಯಲ್ಲಿ ಬೌಲರ್ ನಿಂತಿರುವುದನ್ನು ಹಾಗೂ ಇನ್ನೂ ಕೆಳಗಿನ ಹಂತದ ಗುಡ್ಡದ ಮೇಲೆ ಎರಡರಿಂದ ಮೂರು ಮೂರು ಹುಡುಗಿಯರು ಫೀಲ್ಡಿಂಗ್ ಅಲ್ಲಿ ನಿಂತಿರುವುದನ್ನು ಕಾಣಬಹುದು. ಬೌಲರ್ ಚೆಂಡನ್ನು ಎಸೆದಾಗ, ಬ್ಯಾಟಿಂಗ್ ಮಾಡುತ್ತಿದ್ದ ಹುಡುಗಿ ಧೋನಿ ಸ್ಟೈಲ್ ಅಲ್ಲಿ ಸಿಕ್ಸರ್ ಬಾರಿಸುತ್ತಾಳೆ. ಇನ್ನು ಎಸೆದ ಚೆಂಡನ್ನು ಹಿಡಿಯಲು ಕೆಳಗೆ ರಸ್ತೆಯಲ್ಲಿ ಫೀಲ್ಡಿಂಗ್ ಅಲ್ಲಿ ನಿಂತಿದ್ದ ಹುಡುಗಿ ಓಡಿಕೊಂಡು ಹೋಗುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪುರುಷರ ಬೆತ್ತಲೆ ಉತ್ಸವದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ! ಏನಿದು ನೇಕೆಡ್ ಮ್ಯಾನ್ ಉತ್ಸವ?
ಜನವರಿ 24 ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 24 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದ್ಯಾವುದು 3D ಕ್ರಿಕೆಟ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತವು ಸೃಜನಶೀಲತೆಯ ದೇಶವಾಗಿದೆ. ಅದರಲ್ಲೂ ಕ್ರಿಕೆಟ್ ವಿಷಯಕ್ಕೆ ಬಂದಾಗ ಅದು ಒಂದು ಹಂತ ಹೆಚ್ಚಾಗಿಯೇ ಇರುತ್ತೆʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಟವಾಡಲು ಮನಸ್ಸು ಮತ್ತು ಹುಮ್ಮಸ್ಸು ಒಂದಿದ್ದರೆ ಎಲ್ಲಿ ಬೇಕಾದರೂ ಆಡಿ ಎಂಜಾಯ್ ಮಾಡಬಹುದು ಎಂಬುದನ್ನು ಈ ಹುಡುಗಿಯರು ತೋರಿಸಿಕೊಟ್ಟಿದ್ದಾರೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಹುಡುಗಿಯರ ಗಲ್ಲಿ ಕ್ರಿಕೆಟ್ ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ