ಹಾಲಿನೊಂದಿಗೆ ಈ ಆಹಾರವನ್ನು ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಪಕ್ಕಾ
ಆಹಾರವನ್ನು ಸೇವಿಸುವಾಗ ನಾಲಿಗೆಯ ರುಚಿಯನ್ನು ನೋಡುತ್ತೇವೆ ಹೊರತು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂದು ಯೋಚಿಸುವುದೇ ಇಲ್ಲ. ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ಆಹಾರವನ್ನು ಸೇವಿಸುವ ನಾವುಗಳು ಮುಂದೆ ಆರೋಗ್ಯ ಸಮಸ್ಯೆ ಎದುರಾದರೆ ಅಯ್ಯೋ ಎನ್ನುತ್ತೇವೆ. ಕೆಲವೊಮ್ಮೆ ನಮ್ಮ ಆಹಾರ ಕ್ರಮಗಳು ಆರೋಗ್ಯದ ಅಡ್ಡಪರಿಣಾಮಗಳನ್ನು ಬೀರಬಹುದು. ಆದರೆ ಹಾಲನ್ನು ಸೇವಿಸುವಾಗ ಈ ಕೆಲವು ಆಹಾರವನ್ನು ಸೇವಿಸದೇ ಇರುವುದು ಬಹಳ ಒಳ್ಳೆಯದು. ಹಾಗಾದ್ರೆ ಹಾಲಿನೊಂದಿಗೆ ಯಾವೆಲ್ಲಾ ಆಹಾರವನ್ನು ಸೇವಿಸಬಾರದು ಎನ್ನುವುದನ್ನು ತಿಳಿಯೋಣ ಬನ್ನಿ.
ಹಾಲು ಅಮೃತಕ್ಕೆ ಸಮ ಎನ್ನುವ ಮಾತಿದ್ದು, ಹೀಗಾಗಿ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಈ ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಪಾಸ್ಫರಸ್ ಸೇರಿದಂತೆ ಇನ್ನಿತ್ತರ ಪೌಷ್ಟಿಕ ಸತ್ವಗಳು ಹೇರಳವಾಗಿದ್ದು, ವೈದ್ಯರು ದಿನನಿತ್ಯ ಒಂದು ಲೋಟ ಹಾಲು ಕುಡಿಯಿರಿ ಎನ್ನುವ ಸಲಹೆಯನ್ನು ನೀಡುತ್ತಾರೆ. ಆದರೆ ಹಾಲಿನ ಜೊತೆಗೆ ಕೆಲವು ಆಹಾರವನ್ನು ಸೇವಿಸುವುದು ಉತ್ತಮವಲ್ಲ ಎನ್ನಲಾಗಿದೆ. ನಿಮ್ಮ ಈ ಆಹಾರ ಅಭ್ಯಾಸವು ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಲ್ಲದು.
ಹಾಲಿನೊಂದಿಗೆ ಈ ಆಹಾರವನ್ನು ಸೇವಿಸಲೇಬೇಡಿ:
ಮೊಟ್ಟೆ, ಮಾಂಸ ಹಾಗೂ ಮೀನು: ಹಾಲಿನೊಂದಿಗೆ ಮೀನು, ಮೊಟ್ಟೆ ಹಾಗೂ ಮಾಂಸವನ್ನು ಸೇವಿಸದೇ ಇರುವುದು ಒಳ್ಳೆಯದು. ಮಾಂಸಹಾರಿ ಆಹಾರವನ್ನು ಹಾಲಿನೊಂದಿಗೆ ಸೇವಿಸಿದರೆ ಜೀರ್ಣಕಾರಿ ಸಮಸ್ಯೆಗೆ ದಾರಿಮಾಡಿಕೊಟ್ಟಂತೆಯಾಗುತ್ತದೆ. ಹೀಗಾಗಿ ಈ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.
ಬೆಲ್ಲ : ಹಾಲಿನೊಂದಿಗೆ ಬೆಲ್ಲವನ್ನು ಸೇವಿಸಬೇಡಿ. ಈ ಬೆಲ್ಲದಲ್ಲಿ ವಿಟಮಿನ್‌ಗಳು, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶಗಳಿದ್ದು, ಹಾಲಿನೊಂದಿಗೆ ಬೆಲ್ಲದ ಸಂಯೋಜನೆಯು ಹಾನಿಕರವಾಗಿದೆ ಎನ್ನಲಾಗಿದೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಇದನ್ನೂ ಓದಿ:ಹಾಲು ಹಾಕಿದ ಟೀ ಕುಡಿಯುತ್ತೀರಾ? ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ
ಹುಳಿ ಹಣ್ಣುಗಳು : ಹಾಲಿನೊಂದಿಗೆ ಹುಳಿಹಣ್ಣುಗಳನ್ನು ಸೇವಿಸದಿರುವುದು ಒಳ್ಳೆಯದು. ಕಿತ್ತಳೆ, ಮೊಸಂಬಿ, ದಾಳಿಂಬೆ ಸೇರಿದಂತೆ ಇನ್ನಿತ್ತರ ಹುಳಿ ಹಣ್ಣಿನೊಂದಿಗೆ ಹಾಲು ಸೇವಿಸಿದರೆ ಹೊಟ್ಟೆಯ ಸಮಸ್ಯೆ ಸೇರಿದಂತೆ ವಾಂತಿಯಾಗಬಹುದು.
ಉಪ್ಪು: ಹಾಲಿನೊಂದಿಗೆ ಉಪ್ಪು ಸೇವಿಸುತ್ತಿದ್ದರೆ, ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದಂತೂ ಪಕ್ಕಾ. ಹಾಲು ಕುಡಿದ ಬಳಿಕ ಅಧಿಕ ಉಪ್ಪಿನ ಅಂಶವನ್ನು ಹೊಂದಿರುವ ಆಹಾರವನ್ನು ಸೇವಿಸುವುದನ್ನು ತ್ಯಜಿಸಿ, ಇಲ್ಲವಾದರೆ ಆರೋಗ್ಯವು ನಾನಾ ರೀತಿಯಲ್ಲಿ ಕೈಕೊಡಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ